ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಬೇಕಾಬಿಟ್ಟಿ FIR ಹಾಕುವಂತಿಲ್ಲ, ಬಂಧಿಸುವಂತಿಲ್ಲ: ಪೊಲೀಸರಿಗೆ ಹೈಕೋರ್ಟ್ ಮಾರ್ಗಸೂಚಿಗಳೇನು?

Date:

ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪೋಸ್ಟ್‌ಗಳು, ಅಭಿಪ್ರಾಯಗಳು ಹಾಗೂ ಸುದ್ದಿಗಳ ವಿರುದ್ಧ ಪೊಲೀಸರು ಮನಬಂದಂತೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವುದು ಹಾಗೂ ಅನಗತ್ಯವಾಗಿ ಬಂಧಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ. ಇಂತಹ ಪ್ರಕರಣ ಮತ್ತು ಬಂಧನವನ್ನು ತಡೆಯಲು ಮಹತ್ವದ ಮಾರ್ಗಸೂಚಿಗಳನ್ನು ಹೊರಡಿಸಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಪುರುಷರಕಟ್ಟೆ ಪ್ರದೇಶದಲ್ಲಿ ಮಹಿಳೆಯೊಬ್ಬರನ್ನು ಆರು ಯುವಕರು ಹಿಂಬಾಲಿಸಿ, ಚಾಕು ತೋರಿಸಿ ಬೆದರಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಘಟನೆ 2026ರ ಜುಲೈನಲ್ಲಿ ವರದಿಯಾಗಿತ್ತು. ಈ ಘಟನೆ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ‘Karnataka Portfolio’ ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ, ಆ ಖಾತೆಯ ನಿರ್ವಾಹಕ ಸಂದೀಪ್ ಕುಮಾರ್. ಕಾನೂನು ಸುವ್ಯವಸ್ಥೆಯ ಪರಿಸ್ಥಿತಿ ಕುರಿತು ಆತಂಕ ವ್ಯಕ್ತಪಡಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಆದರೆ, ಆ ಪೋಸ್ಟ್ ಸುಳ್ಳು ಮಾಹಿತಿ ಹರಡುತ್ತಿದೆ ಮತ್ತು ಸಮುದಾಯಗಳ ನಡುವೆ ದ್ವೇಷ ಉಂಟುಮಾಡುವ ಉದ್ದೇಶ ಹೊಂದಿದೆ ಎಂದು ಆರೋಪಿಸಿ ಮೊಹಮ್ಮದ್ ಶಹನವಾಜ್ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ಸಂದೀಪ್ ಕುಮಾರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ತಮ್ಮ ವಿರುದ್ಧದ ಎಫ್‌ಐಆರ್ ರದ್ದುಗೊಳಿಸುವಂತೆ ಸಂದೀಪ್ ಕುಮಾರ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ, “ಪೋಸ್ಟ್‌ನಲ್ಲಿದ್ದ ವಿಷಯವು ದೂರುದಾರರು ಆರೋಪಿಸಿದ ಅಪರಾಧದ ಅಂಶಗಳನ್ನು ಒಳಗೊಂಡಿಲ್ಲ” ಎಂದು ಹೇಳಿದ್ದಾರೆ. ಎಫ್‌ಐಆರ್‌ಅನ್ನು ರದ್ದುಗೊಳಿಸಿದ್ದಾರೆ.

ತೀರ್ಪು ನೀಡುವ ವೇಳೆ, ಪೀಠವು; “ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸುವ ಟೀಕೆ, ಭಿನ್ನಾಭಿಪ್ರಾಯ ಅಥವಾ ಸಾರ್ವಜನಿಕ ಘಟನೆಗಳ ಕುರಿತ ವರದಿಯನ್ನು ಅಪರಾಧವೆಂದು ಪರಿಗಣಿಸುವ ಮುನ್ನ ಪೊಲೀಸರು ಕಾನೂನಿನ ನಿರ್ದಿಷ್ಟ ಷರತ್ತುಗಳನ್ನು ಪರಿಶೀಲಿಸಬೇಕು” ಎಂದು ಹೇಳಿದೆ. ಪೊಲೀಸರಿಗೆ ಪ್ರಮುಖ ಆರು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಕರ್ನಾಟಕ ಹೈಕೋರ್ಟ್ ಹೊರಡಿಸಿದ ಆರು ಪ್ರಮುಖ ಮಾರ್ಗಸೂಚಿಗಳು

1. ದೂರಿನಲ್ಲಿ ಅಪರಾಧದ ಮೂಲ ಅಂಶಗಳಿವೆಯೇ ಎಂದು ಪರಿಶೀಲಿಸಬೇಕು: ಸಾಮಾಜಿಕ ಜಾಲತಾಣದ ಪೋಸ್ಟ್, ಹೇಳಿಕೆ ಅಥವಾ ಅಭಿಪ್ರಾಯದ ವಿರುದ್ಧ ದೂರು ಬಂದಾಗ, ಅದರಲ್ಲಿರುವ ಆರೋಪಗಳನ್ನು ಮೇಲ್ನೋಟಕ್ಕೆ ನಿಜವೆಂದು ಪರಿಗಣಿಸಿದರೂ ನಿರ್ದಿಷ್ಟ ಅಪರಾಧದ ಕಾನೂನಾತ್ಮಕ ಅಂಶಗಳು ಕಂಡುಬರುತ್ತವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ಕೇವಲ ಕಾನೂನಿನ ಸೆಕ್ಷನ್‌ಗಳನ್ನು ಉಲ್ಲೇಖಿಸುವುದೇ ಪ್ರಕರಣಕ್ಕೆ ಸಾಕಾಗುವುದಿಲ್ಲ.

2. ಒಂದೇ ಘಟನೆಗೆ ಮತ್ತೆ ಮತ್ತೆ ಎಫ್‌ಐಆರ್ ದಾಖಲಿಸಬಾರದು: ಒಂದು ಪೋಸ್ಟ್ ಅಥವಾ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸಬೇಕು. ದೂರುದಾರರು ಬೇರೆಯವರು ಎಂಬ ಕಾರಣಕ್ಕೆ ಮಾತ್ರ ಮತ್ತೊಂದು ಎಫ್‌ಐಆರ್ ದಾಖಲಿಸುವಂತಿಲ್ಲ. ಆದರೆ, ಪ್ರತ್ಯೇಕ ಘಟನೆ ಅಥವಾ ಸ್ವತಂತ್ರವಾಗಿ ಪ್ರಕರಣ ದಾಖಲಿಸಬಹುದಾದ ಹೊಸ ಅಪರಾಧ ಇದ್ದರೆ ಕ್ರಮಕ್ಕೆ ಅವಕಾಶವಿದೆ.

3. ಕಾನೂನು ಅನುಮತಿಸಿದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಬೇಕು: BNSS ಸೆಕ್ಷನ್ 173(3) ಅನ್ವಯ ಅನುಮತಿಸಲಾದ ಸಂದರ್ಭಗಳಲ್ಲಿ, ನಿಗದಿತ ಅನುಮತಿ ಮತ್ತು ಕಾಲಮಿತಿಯೊಂದಿಗೆ ಪ್ರಾಥಮಿಕ ವಿಚಾರಣೆ ನಡೆಸಬಹುದು. ಆದರೆ, ಕಾನೂನಿನ ಪ್ರಕಾರ ತಕ್ಷಣ ಎಫ್‌ಐಆರ್ ದಾಖಲಿಸಬೇಕಾದ ಅಪರಾಧಗಳಲ್ಲಿ ಈ ವಿಚಾರಣೆಯನ್ನು ಪ್ರಕರಣ ದಾಖಲಿಸದೇ ತಪ್ಪಿಸಿಕೊಳ್ಳುವ ನೆಪವಾಗಿ ಬಳಸಬಾರದು.

4. ಸರ್ಕಾರದ ಟೀಕೆ ಅಥವಾ ಭಿನ್ನಾಭಿಪ್ರಾಯವನ್ನು ಯಾಂತ್ರಿಕವಾಗಿ ಅಪರಾಧವೆಂದು ಪರಿಗಣಿಸಬಾರದು: BNS ಸೆಕ್ಷನ್ 353(2) ಅನ್ವಯ ಪ್ರಕರಣ ದಾಖಲಿಸುವ ಮೊದಲು ಹೇಳಿಕೆಯ ಉದ್ದೇಶ, ಅದರ ವಿಷಯ ಹಾಗೂ ನಿರ್ದಿಷ್ಟ ಸಮುದಾಯಗಳ ನಡುವೆ ದ್ವೇಷ ಅಥವಾ ವೈಮನಸ್ಸು ಉಂಟುಮಾಡುವ ಕಾನೂನಾತ್ಮಕ ಅಂಶಗಳಿವೆಯೇ ಎಂಬುದನ್ನು ಪರಿಶೀಲಿಸಬೇಕು.

5. ಎಫ್‌ಐಆರ್ ದಾಖಲಾದ ಮಾತ್ರಕ್ಕೆ ಬಂಧಿಸುವಂತಿಲ್ಲ: ಬಂಧನದ ಸಂದರ್ಭದಲ್ಲಿ BNSS ಸೆಕ್ಷನ್ 35ರ ಕಡ್ಡಾಯ ಷರತ್ತುಗಳನ್ನು ಅನುಸರಿಸಬೇಕು. ಬಂಧನ ಅಗತ್ಯವಿಲ್ಲದ ಸಂದರ್ಭಗಳಲ್ಲಿ ಸೆಕ್ಷನ್ 35(3)ರ ಅನ್ವಯ ಹಾಜರಾಗುವಂತೆ ನೋಟಿಸ್ ನೀಡುವ ವಿಧಾನವನ್ನು ಅನುಸರಿಸಬೇಕು.

6. ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಮಾರ್ಗಸೂಚಿಗಳನ್ನು ತಿಳಿಸಬೇಕು: ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷಕರು ಈ ನಿರ್ದೇಶನಗಳನ್ನು ಸೂಕ್ತ ಆಡಳಿತಾತ್ಮಕ ಸೂಚನೆಗಳ ಮೂಲಕ ಎಲ್ಲ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ತಲುಪಿಸಿ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು.

ಅಂದಹಾಗೆ, ಹೈಕೋರ್ಟ್‌ ತನ್ನ ಮಾರ್ಗಸೂಚಿಯಲ್ಲಿ ಪ್ರಸ್ತಾಪಿಸಿರುವ ಬಿಎನ್‌ಎಸ್‌ ಸೆಕ್ಷನ್ 353(2)ಅನ್ನು ಸಾರ್ವಜನಿಕವಾಗಿ ಪ್ರಕಟಿಸುವ ಕೆಲವು ಹೇಳಿಕೆಗಳು, ಸುಳ್ಳು ಮಾಹಿತಿ, ವದಂತಿಗಳು ಅಥವಾ ಆತಂಕಕಾರಿ ಸುದ್ದಿಗಳ ಮೂಲಕ ವಿವಿಧ ಧಾರ್ಮಿಕ, ಭಾಷಾ, ಜಾತಿ ಹಾಗೂ ಸಮುದಾಯಗಳ ನಡುವೆ ದ್ವೇಷ, ವೈಮನಸ್ಸು ಅಥವಾ ದುರ್ಭಾವನೆ ಉಂಟುಮಾಡುವುದನ್ನು ತಡೆಯುವ ಉದ್ದೇಶದಿಂದ ಬಳಸಲಾಗುತ್ತದೆ.  ಈ ಅಪರಾಧಕ್ಕೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಈ ಲೇಖನ ಓದಿದ್ದೀರಾ?: ಯೂರೋಪ್‌ | ಇಂಧನ ಬೆಲೆಯೇರಿಕೆ–ಬದುಕು ದುರ್ಭರ: ಜನಾಕ್ರೋಶಕ್ಕೆ ನಡುಗುತ್ತಿವೆ ಸರ್ಕಾರಗಳು!

ಆದರೆ ವ್ಯಕ್ತಿಯೊಬ್ಬರು ಸರ್ಕಾರವನ್ನು ಟೀಕಿಸಿದರು, ಪೊಲೀಸ್ ವ್ಯವಸ್ಥೆಯನ್ನು ಪ್ರಶ್ನಿಸಿದರು ಅಥವಾ ಯಾವುದಾದರೂ ಘಟನೆಯ ಸುದ್ದಿಯನ್ನು ಮರುಹಂಚಿಕೊಂಡರು ಎಂಬ ಕಾರಣಕ್ಕೆ ಮಾತ್ರ ಸೆಕ್ಷನ್ 353(2) ಅನ್ವಯಿಸಲು ಸಾಧ್ಯವಿಲ್ಲ ಎಂಬುದು ಹೈಕೋರ್ಟ್ ತೀರ್ಪಿನ ಮುಖ್ಯ ಅಂಶ.

ಮತ್ತೊಂದು ಗಮನಾರ್ಹ ಅಂಶವೆಂದರೆ, ಕರ್ನಾಟಕ ಪೊಲೀಸ್ ಇಲಾಖೆಯು 2026ರ ಸೆಪ್ಟೆಂಬರ್ 21ರಂದೇ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಿಗೆ ಸಂಬಂಧಿಸಿದ ಎಫ್‌ಐಆರ್‌ಗಳ ಕುರಿತು ಮಾರ್ಗಸೂಚಿಗಳ ಸುತ್ತೋಲೆಯನ್ನು ಹೊರಡಿಸಿತ್ತು.

ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ, ಸಾಮಾಜಿಕ ಜಾಲತಾಣದ ಅಭಿಪ್ರಾಯಗಳ ವಿರುದ್ಧ ದಾಖಲಾಗುವ ಪ್ರಕರಣಗಳನ್ನು ಕಾನೂನುಬದ್ಧವಾಗಿ ಪರಿಶೀಲಿಸಬೇಕೆಂದು ತಿಳಿಸಲಾಗಿದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೇವೆ ಮೊದಲು, ಪರಿಶೀಲನೆ ಆಮೇಲೆ: ಫಲಾನುಭವಿಗಳಿಗೆ ತ್ವರಿತ ಸೇವೆ ನೀಡಲು ರಾಜ್ಯ ಸರ್ಕಾರದ ಹೊಸ ಆದೇಶ

ರಾಜ್ಯ ಸರ್ಕಾರವು ನಾಗರಿಕರಿಗೆ ಮುಂಚಿತವಾಗಿ ಅರ್ಹತೆಯ ಪರಿಶೀಲನೆಯಿಲ್ಲದೆ ಸೇವೆಗಳು ಮತ್ತು ಯೋಜನೆಯ...

ಅವಳ ಕಣ್ಣೋಟ | ‘ಉಯರೆ’- ಸುಟ್ಟದ್ದು ಮುಖವಷ್ಟೇ, ಬದುಕಿನ ಮೇಲಿನ ಹಕ್ಕಲ್ಲ…

ಒಬ್ಬ ಮಹಿಳೆ ತನ್ನನ್ನು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯ ಬದುಕನ್ನೇ ನಾಶಮಾಡುವ ಹಕ್ಕು...

ಬೀದರ್‌ | ಜಿಲ್ಲಾ 22ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ಬಸವರಾಜ ಬಲ್ಲೂರ ಆಯ್ಕೆ

ಅಧ್ಯಯನ, ಅಧ್ಯಾಪನದ ಜೊತೆಗೆ ಸಾಹಿತ್ಯಿಕ ಹಾಗೂ ಸಮಾಜೋಧಾರ್ಮಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ...

ಬೀದರ್ ಜಿಲ್ಲಾ ಪ್ರಥಮ ದಲಿತ-ಬಂಡಾಯ ಸಮ್ಮೇಳನ : ಸರ್ವಾಧ್ಯಕ್ಷರಾಗಿ ಮಾರುತಿ ಬೌದ್ಧೆ ಆಯ್ಕೆ

ಬೀದರ್ ಜಿಲ್ಲಾ ಪ್ರಥಮ ದಲಿತ-ಬಂಡಾಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರಗತಿಪರ ಚಿಂತಕ ಹಾಗೂ...