ಶಿವಮೊಗ್ಗ ತಾಲೂಕಿನ ಕೊಮ್ಮನಾಳು ಬಳಿ KSRTC ಬಸ್‌ನ ಮುಂಭಾಗದ ಟಯರ್ ಬ್ಲಾಸ್ಟ್ ಆದ ಘಟನೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ. ಆದರೆ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ. ಹಾಗೊಂದು ವೇಳೆ ಡ್ರೈವರ್ನ ಕಂಟ್ರೋಲ್ಗೆ ಸಿಗದೇ ಹೋಗಿದ್ದರೇ ಬಸ್ ಮಗುಚಿ ಬೀಳುವ ಅಪಾಯವಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಸುತ್ತುಕೋಟೆಯಿಂದ ಬೂದಿಗೆರೆ ಮಾರ್ಗವಾಗಿ ಸಂಚರಿಸುತ್ತಿದ್ದ KSRTC ಬಸ್ ನ ಟಯರ್ ಕೊಮ್ಮನಾಳು ಸಮೀಪ ತಲುಪುತ್ತಿದ್ದಂತೆ ಸ್ಫೋಟಗೊಂಡಿದೆ. ಪರಿಣಾಮ ಬಸ್ ರಸ್ತೆ ಬದಿಯ ಚರಂಡಿಗೆ ಇಳಿದಿದೆ.
ಇದನ್ನೂ ಓದಿ: ಶಿವಮೊಗ್ಗ | ಖಾಸಗಿ ಬಸ್ ಬೆಂಕಿಗಾಹುತಿ!
ಟಯರ್ ಸ್ಫೋಟಗೊಂಡ ತಕ್ಷಣ ಪರಿಸ್ಥಿತಿಯನ್ನು ಅರಿತ ಚಾಲಕ, ಬಸ್ ಮಗುಚಿ ಬೀಳದಂತೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ಇತರ ವಾಹನಗಳಿಗೆ ಡಿಕ್ಕಿಯಾಗದಂತೆ ಎಚ್ಚರಿಕೆ ವಹಿಸಿದ್ದಾರೆ.








