ಕಾಫಿ ಎಸ್ಟೇಟ್ ಬಳಿಯ ರಸ್ತೆ ಬದಿಯಲ್ಲಿ ವಿಶೇಷ ಚೇತನ ಮಹಿಳೆ ಇಟ್ಟಿದ್ದ ಪೆಟ್ಟಿಗೆ ಅಂಗಡಿಯನ್ನು ಎಸ್ಟೇಲ್ ಮಾಲೀಕ ಧ್ವಂಸಗೊಳಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬಕ್ಕಿ ಗ್ರಾಮದಲ್ಲಿ ವಿಶೇಷ ಚೇತನ ಮಹಿಳೆಗಾಗಿ ಆತನ ಪತಿ ರಾಜು ಎಂಬವರು ಇತ್ತೀಚೆಗೆ ಅಂಗಡಿ ತೆರೆದಿದ್ದರು. ಅಂಗಡಿ ತೆರೆಯಲು ಗ್ರಾಮ ಪಂಚಾಯತಿಯ ಅನುಮತಿಯನ್ನೂ ಪಡೆದಿದ್ದರು. ಆದರೆ, ಅಲ್ಲಿನ ಎಸ್ಟೇಟ್ ಮಾಲೀಕ ವಿದ್ಯಾಶ್ರೀ ಸತ್ಯೇಂದ್ರ ಏಕಾಏಕಿ ಅಂಗಡಿಗೆ ನುಗ್ಗಿ, ಅಲ್ಲಿದ್ದ ಸಾಮಗ್ರಗಿಳನ್ನು ಹೊರಗೆಸೆದು, ಧ್ವಂಸ ಮೆರೆದಿದ್ದಾನೆ ಎಂದು ಆರೋಪಿಸಲಾಗಿದೆ.
ದರ್ಪ ಮೆರೆದ ಸತ್ಯೇಂದ್ರನ ವಿರುದ್ಧ ಸಂತ್ರಸ್ತೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.