ಪುರಾತನವಾದ ಗುಡಿಗಳು ಹಾಗೂ ಮಂಟಪಗಳು ಮತ್ತು ಅಲ್ಲಿನ ಪರಿಸರವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ. ಪ್ಲಾಸ್ಟಿಕ್‌ನಿಂದ ಪರಿಸರ ಮಾಲಿನ್ಯವಾಗುತ್ತಿದೆ. ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಬೇಕು ಎಂದು ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಘವೇಂದ್ರ ತಿಳಿಸಿದರು.
ಭಾನುವಾರ, ಶ್ರೀರಂಗಪಟ್ಟಣ ಬಳಿಯ ಕರಿಘಟ್ಟದಲ್ಲಿ ಮೈಸೂರಿನ ಕಡಕೋಳ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ರೋಟರಿ ಸಂಸ್ಥೆ, ಶ್ರೀರಂಗಪಟ್ಟಣ ಮತ್ತು ಅಚೀವರ್ಸ್ ಅಕಾಡೆಮಿ ಆಯೋಜಿಸಿದ್ದ ‘ಸದೃಢ ದೇಹ – ಪ್ಲಾಸ್ಟಿಕ್ ಮುಕ್ತ ಪರಿಸರ’ ಅಭಿಯಾನ (ಪ್ಲಾಸ್ಟಿಕ್ ಮುಕ್ತ ಕರಿಘಟ್ಟ) ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಪರಿಸರವನ್ನು ಉಳಿಸಿ ಉತ್ತಮವಾದ ವಾತಾವರಣ ನಿರ್ಮಾಣ ಆಗಬೇಕು. ಇದಕ್ಕೆ ಎಲ್ಲ ಸಾರ್ವಜನಿಕರು ಕೈ ಜೋಡಿಸಬೇಕು. ಪ್ಲಾಸ್ಟಿಕ್‌ನಿಂದ ಪರಿಸರ ತುಂಬಾ ಹಾಳಾಗುತ್ತಿದೆ. ಕರಿಘಟ್ಟಕ್ಕೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಕವರುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ಕಸದ ತೊಟ್ಟಿಯಲ್ಲಿ ಹಾಕಬೇಕು” ಎಂದು ಹೇಳಿದರು.
ಕಾಲೇಜುಗಳ ವಿದ್ಯಾರ್ಥಿಗಳು ಕರಿಘಟ್ಟ ಗುಡಿಯ ಪಕ್ಕದಲ್ಲಿರುವ ಪುರಾತನ ಮಂಟಪದ ಸುತ್ತ ಬೆಳೆದಿದ್ದ ಗಿಡ ಗಂಟೆಗಳನ್ನು ಕತ್ತರಿಸಿ ಸ್ವಚ್ಛ ಮಾಡದರು. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತೆರವುಗೊಳಿಸಿದರು.
ಅಭಿಯಾನದಲ್ಲಿ ಕಾಲೇಜು ವಿದ್ಯಾರ್ಥಿಗಳಾದ ಕರ್ಣ, ಹೃದಯ್, ದರ್ಶನ್, ಪುನೀತ್, ಅನನ್ಯ, ಧನುಷ್, ಪೂರ್ವಜ್, ಮನು, ಪಾಲಹಳ್ಳಿ ರವಿ, ಇನ್ನು ಮುಂತಾದವರು ಸೇರಿ ಈ ಶ್ರಮದಾನದಲ್ಲಿ ಪಾಲ್ಗೊಂಡರು.