ಕೋಲಾರ | ಸಮಗ್ರ ಕೃಷಿಯಿಂದ ದೇಶಕ್ಕೆ ಮಾದರಿಯಾಗೋಣ

Date:

Advertisements

ಸಿರಿಧಾನ್ಯ ಮೇಳದಲ್ಲಿ ವಿಪ ಸದಸ್ಯ ಇಂಚರ ಗೋವಿಂದರಾಜು ಹೇಳಿಕೆ

ರೈತರ ಜಿಲ್ಲೆ ಎಂದೇ ಕೋಲಾರ ಪ್ರಸಿದ್ಧಿ ಪಡೆದಿದೆ. ಸಮಗ್ರ ಕೃಷಿ ಮೂಲಕ ವಿವಿಧ ರೀತಿಯ ಬೆಳೆ ಬೆಳೆದು ದೇಶಕ್ಕೆ ಮಾದರಿಯಾಗಬೇಕು‌ ಎಂದು ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಹೇಳಿದರು.

ಕೋಲಾರ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿಕ ಸಮಾಜ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ, ಸಾವಯವ ಮೇಳ ಹಾಗೂ ಫಲಪುಷ್ಪ ಪ್ರದರ್ಶನ–2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ, ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಬೆಳೆಯಲು ರೈತರು ಸಾವಯವ ಕೃಷಿ ಪದ್ಧತಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

Advertisements

ರೈತರು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಕೊಟ್ಟಿಗೆ ಗೊಬ್ಬರ, ಹಸಿರು ಎಲೆ ಗೊಬ್ಬರ, ಎರೆಹುಳು ಗೊಬ್ಬರ ಸೇರಿದಂತೆ ಸಾವಯವ ಗೊಬ್ಬರ ಬಳಸಿ ಆಹಾರ ಉತ್ಪನ್ನಗಳನ್ನು ಬೆಳೆಯಬೇಕು. ಸರ್ಕಾರವು ಕೂಡ ರೈತರಿಗೆ ಉತ್ತೇಜನ ನೀಡಿ ಸಾವಯವ ಗೊಬ್ಬರ ಬಳಸಿಕೊಂಡು ಉತ್ತಮ ಇಳುವರಿಯ ಬೆಳೆ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವಂತೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಇದರಿಂದ ನಮಗೆ, ಮಕ್ಕಳಿಗೆ ಒಳ್ಳೆಯ ಪೌಷ್ಠಿಕಾಂಶ ಹಾಗೂ ಗುಣಮಟ್ಟದ ಆಹಾರ ಸಿಕ್ಕಂತಾಗುತ್ತದೆ ಎಂದು ಹೇಳಿದರು.

ರೈತರಿಗೆ ಸರ್ಕಾರದಿಂದ ಬರುವಂತಹ ಯೋಜನೆಗಳು ಮತ್ತು ಕೃಷಿ ಪರಿಕರಗಳು, ಹೊಸ ಬೆಳೆಗಳ ಆವಿಷ್ಕಾರ ಹಾಗೂ ಬೆಳೆಗಳಿಗೆ ಬರುವಂತಹ ರೋಗಗಳ ಕುರಿತು ಮುನ್ನೆಚ್ಚರಿಕೆಯನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಈ ಸಂದರ್ಭದಲ್ಲಿ ಆತ್ಮ ಯೋಜನೆಯಡಿ ಜಿಲ್ಲಾ ಮಟ್ಟದ ರೈತರಿಗೆ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮೇಳದಲ್ಲಿ ರೈತರಿಗೆ ಬೇಸಾಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೃಷಿ ಇಲಾಖೆಯಿಂದ ನೀಡಲಾಯಿತು. ವಿವಿಧ ತಳಿಯ ಕೃಷಿ ಉತ್ಪನ್ನಗಳು, ಪರಿಕರಗಳು, ಯಂತ್ರೋಪಕರಣಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಮರಳಿನಲ್ಲಿ ಮಾಜಿ ಪ್ರಧಾನಿ ದಿವಂಗತ ಮನಮೋಹನ್‌ ಸಿಂಗ್ ಅವರ ಕಲಾಕೃತಿ ಎಲ್ಲರ ಗಮನ ಸೆಳೆಯಿತು.

ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿ:
ಜಿಲ್ಲಾಮಟ್ಟದ ಪ್ರಶಸ್ತಿ ವಿಜೇತರು: ಎಸ್‌.ಎಂ.ಮಂಜುಳಾ (ಸುಗಟೂರು), ಎನ್‌.ಗಣೇಶ್‌ (ಬಂಟಹಳ್ಳಿ), ಎಂ.ನಾರಾಯಣಸ್ವಾಮಿ (ಹುಣಸನಹಳ್ಳಿ), ಕೆ.ಆರ್.ಜಗದೀಶ್‌ (ಕುರುಮಾಕಲಪಲ್ಲಿ), ಆರ್‌.ವಿ.ಶ್ರೀನಿವಾಸ (ಬೈಕೊತ್ತೂರು), ಎಂ.ತಿಪ್ಪಣ್ಣ (ಹುತ್ತೂರು), ಹನುಮೇಗೌಡ (ಲಕ್ಷ್ಮಿಸಾಗರ), ನಂದೀಶ್‌ (ದೆಬ್ಬನಹಳ್ಳಿ), ವೆಂಕಟೇಶಪ್ಪ (ಬನಹಳ್ಳಿ), ಮಂಜುನಾಥ್‌ (ಕಾಕಿನತ್ತ).
ತಾಲ್ಲೂಕುಮಟ್ಟದ ಪ್ರಶಸ್ತಿ ವಿಜೇತರು: ನಾಗರಾಜು (ಕೆಂಬೋಡಿ), ಸುಂದರಪ್ಪ (ಸೋಮಸಂದ್ರ), ರುಕ್ಕಮ್ಮ (ಖಾಜಿಕಲ್ಲಹಳ್ಳಿ), ಪಾಲಾಕ್ಷಗೌಡ (ವಕ್ಕಲೇರಿ), ಸರೋಜಮ್ಮ (ನಂದಂಬಳ್ಳಿ), ಎಂ.ವಿ.ಶ್ರೀನಿವಾಸ್‌ (ಮಿಟ್ಟಿಗಾನಹಳ್ಳಿ), ಅಶೋಕ್‌ ಗೌಡ (ದಿನ್ನಹಳ್ಳಿ), ವಿಜಯ್‌ ಕುಮಾರ್‌ (ಮಾದಾಪುರ), ಗುಟ್ಟಪ್ಪ (ಮಾದಮಂಗಲ), ಶ್ರೀನಿವಾಸ್‌ (ಕುಪ್ಪೂರು), ಹನುಮಪ್ಪ (ಮಾವಹಳ್ಳಿ), ಮುನಿಸ್ವಾಮಿ (ಸಿದ್ದಾರೆಡ್ಡಿದಿನ್ನೆ), ವಿ.ಲಕ್ಷ್ಮಿ (ಬೋಡೇನಹಳ್ಳಿ), ಸುಬ್ರಮಣಿ (ಕಾವರನಹಳ್ಳಿ), ಮಂಜುಳಾ (ತೊಪ್ಪನಹಳ್ಳಿ), ನಾರಾಯಣಪ್ಪ(ಪೆರಮಾಕನಹಳ್ಳಿ) ಸುಶೀಲಮ್ಮ (ಮೋಪುರಹಳ್ಳಿ), ವೆಂಕಟರಾಮೇಗೌಡ (ಪಿಚ್ಚಗುಂಟ್ಲಹಳ್ಳಿ), ಗೋಪಾಲಕೃಷ್ಣಪ್ಪ (ಕುಪ್ಪಂಪಾಳ್ಯ), ಮುನಿವೆಂಕಟಪ್ಪ (ನಲ್ಲಾಂಹಡಹಳ್ಳಿ), ಶಿವಕುಮಾರ್‌ (ಚಲ್ದಿಗಾನಹಳ್ಳಿ), ಈಶ್ವರಪ್ಪ (ಗುಂದೇಡು), ಜಯರಾಮರೆಡ್ಡಿ (ನೆಲವಂಕಿ), ಕೆ.ಎಸ್‌.ಮಂಜುನಾಥ್ (ಕದಿರಂಪಲ್ಲಿ), ಮಲ್ಲಮ್ಮ (ಬಸವನಪಲ್ಲಿ).

ಇದನ್ನೂ ಓದಿ : ಕೋಲಾರ ಜಿಲ್ಲೆಯ ಇಬ್ಬರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ; ಸನ್ಮಾನ

ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಡಗೂರು ಡಿ.ಎಲ್.ನಾಗರಾಜ್, ನಗರಸಭೆ ಅಧ್ಯಕ್ಷೆ ಲಕ್ಷ್ಮಿದೇವಮ್ಮ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಂ.ಮಂಗಳಾ, ಜಂಟಿ ಕೃಷಿ ನಿರ್ದೇಶಕಿ ಸುಮಾ ಎಂ.ಆರ್., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಸ್.ಆರ್ ಕುಮಾರಸ್ವಾಮಿ, ಕೃಷಿ ಉಪನಿರ್ದೇಶಕಿ ಭವ್ಯರಾಣಿ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಶ್ರೀನಿವಾಸ್‌ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X