ವಿದ್ಯಾರ್ಥಿಗಳು ಎಂದಿಗೂ ಶಿಸ್ತು, ತಾಳ್ಮೆ ಹಾಗೂ ವಿನಯ ಕಳೆದುಕೊಳ್ಳಬಾರದು, ಕಾಲೇಜಿನಲ್ಲಿ ಹೆಚ್ಚಿನ ಓದಿನ ಕಡೆಗೆ ಗಮನಹರಿಸಿ ಜೀವನದಲ್ಲಿ ಯಶಸ್ಸು ಸಾಧಿಸಬೇಕೆಂದು ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ದೀಲಿಪಕುಮಾರ ಎಸ್. ತಾಳಂಪಳ್ಳಿ ಹೇಳಿದರು.
ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜಿನಲ್ಲಿ, 2024-25ನೇ ಶೈಕ್ಷಣಿಕ ವರ್ಷದ ಬಿ.ಇ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನಿಂದ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ʼವಿದ್ಯಾರ್ಥಿಗಳು ಪ್ರತಿನಿತ್ಯ ತಪ್ಪದೇ ತರಗತಿಗಳಿಗೆ ಹಾಜರಾಗಬೇಕು. ಬೋಧಕರೊಂದಿಗೆ ವಿನಯದಿಂದ ವರ್ತಿಸಿ ಅರ್ಥವಾಗದ ವಿಷಯಗಳನ್ನು ತಿಳಿದುಕೊಳ್ಳಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹಾಗೂ ಎಲ್ಲ ರೀತಿಯ ಪುಸ್ತಕಗಳನ್ನು ಅಧ್ಯಯನ ನಡೆಸಿ ಪ್ರಜ್ಞಾವಂತ ನಾಗರಿಕರಾಗಿ ಬೆಳೆದು ನಮ್ಮ ಸಂಸ್ಥೆಗೆ ಕೀರ್ತಿ ತರಬೇಕುʼ ಎಂದು ಹಾರೈಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಅಶೋಕಕುಮಾರ ವಣಗೇರಿ ಮಾತನಾಡಿ, ʼಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಜೀವನದ ಗುರಿ ತಲುಪಬೇಕು. ಉಜ್ವಲ ಭವಿಷ್ಯ ಕುರಿತು ಕಠಿಣ ಅಧ್ಯಯನದ ನಡೆಸಲು ಯೋಚಿಸಬೇಕು. ಜೀವನದಲ್ಲಿ ನಿರ್ದಿಷ್ಟ ಗುರಿ ಹೊಂದಿದ್ದರೆ ಮಾತ್ರ ಸಾಧನೆಯ ಶಿಖರ ತಲುಪಬಹುದುʼ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಬಿಇಟಿ ಸಮೂಹ ಸಂಸ್ಥೆಯ ಬಸವಕಲ್ಯಾಣ ಇಂಜಿನೀಯರಿಂಗ್ ಕಾಲೇಜಿನ ಉಪಪ್ರಾಚಾರ್ಯರು ಡಾ.ಅರುಣಕುಮಾರ ಎಲಾಲ ಹಾಗೂ ಸಂಸ್ಥೆಯ ವಿವಿಧ ಕಾಲೇಜುಗಳ ಪ್ರಾಚಾರ್ಯರು ಉಪನ್ಯಾಸಕರಾದ ಡಾ.ನಾಗಯ್ಯಾ ಸ್ವಾಮಿ, ವಿಶ್ವನಾಥಯ್ಯಾ ಸ್ವಾಮಿ, ನೀಲಕಂಠ ಕೋಡ್ಲೆ, ಶಿವಕುಮಾರ ಸ್ವಾಮಿ ಹಾಗೂ ಕುಲಸಚಿವ ಪ್ರೇಮಸಾಗರ ಪಾಟೀಲ ಸೇರಿದಂತೆ ಸಿಬ್ಬಂದಿಗಳಾದ ವೃಷೀಕೇತ ಭೂಸಾರೆ, ಸುಭಾಷ ಚಂದ್ರಯ್ಯ ಮತ್ತು ಎಲ್ಲಾ ವಿಭಾಗ ಮುಖ್ಯಸ್ಥರು, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಹೃದಯಾಘಾತ : ಕರ್ತವ್ಯ ನಿರತ ಪೊಲೀಸ್ ಪೇದೆ ಸಾವು
ಕಾರ್ಯಕ್ರಮವನ್ನು ಡಾ.ಅರುಣಕುಮಾರ ಎಲಾಲ್ ಸ್ವಾಗತಿಸಿದರು, ವಿದ್ಯಾಸಾಗರ ನಿರೂಪಿಸಿದರು. ರೇವಣಸಿದ್ದಪ್ಪಾ ಡಿಗ್ಗಿಕರ್ ವಂದಿಸಿದರು.