ಕೆಲವರಿಗೆ ʼಇಂಡಿಯಾʼವೆಂಬ ಪದವನ್ನೇ ಕೇಳಲು ಆಗುತ್ತಿಲ್ಲ: ಪತ್ರಕರ್ತೆ ಸುಪ್ರಿಯಾ ಶ್ರೀನಾಟೆ

Date:

Advertisements

ಪ್ರಸ್ತುತ ಸಂದರ್ಭದಲ್ಲಿ ಭಾರತ ಎಂದರೆ ಯಾವುದು? ಕೆಲವರಿಗೆ ʼಇಂಡಿಯಾʼ ಎಂಬ ಪದವನ್ನೇ ಕೇಳಲು ಸಾಧ್ಯವಿಲ್ಲ. ಇಂಡಿಯಾ ಎಂಬ ಹೆಸರು ಸಂವಿಧಾನದಿಂದ ದೊರಕಿದೆ. ಆದರೆ ಇಂದು ʼಭಾರತ್ʼ ಎಂದು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಂದಿನ ಜಿ20 ಸಮಾವೇಶದಲ್ಲೂ ದ್ರೌಪದಿ ಮುರ್ಮು ಅವರು ಅದನ್ನೇ ಪುನರುಚ್ಛರಿಸಿದ್ದಾರೆ. ಇದನ್ನು ಒಪ್ಪಲಾಗದು ಎಂದು ಖ್ಯಾತ ಪತ್ರಕರ್ತೆ ಸುಪ್ರಿಯಾ ಶ್ರೀನಾಟೆ ಅಭಿಪ್ರಾಯಪಟ್ಟರು.

ಬೆಂಗಳೂರಿನಲ್ಲಿ ನಡೆದ ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್ ನೆನಪಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ವಿ ದ ಪೀಪಲ್‌ ಆಫ್‌ ಇಂಡಿಯಾ, ಹಮ್‌ ಭಾರತ್‌ ಕೆ ಲೋಗ್‌” ಎಂಬುದು ಸಂವಿಧಾನದ ಕೊಡುಗೆ. ಇದನ್ನು ಒಬ್ಬ ಮನುಷ್ಯ ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಾವು ತೆಗೆದುಹಾಕಲಾಗದು. ಒಬ್ಬ ವ್ಯಕ್ತಿ ತನ್ನ ಅಭಿಪ್ರಾಯಕ್ಕೆ ವಿರುದ್ಧ ಇರುವವರನ್ನು ಸಹಿಸುವುದಿಲ್ಲ ಎಂದರೆ, ಆತನಿಗೆ ಈ ದೇಶದ ಜೊತಗೆ ಏನೋ ಸಮಸ್ಯೆ ಇದೆ ಎಂಧರ್ಥ. ನಾನು ನನ್ನ ತಾಯಿಯನ್ನು ಅಮ್ಮ ಎಂದು ಕರೆಯುತ್ತೇನೆ. ಕೆಲವರು ಮಾಯಿ ಎನ್ನಬಹುದು ಅಥವಾ ಬೇರೇನೋ ಕರೆಯಬಹುದು. ಅದನ್ನು ಬದಲಿಸುವ ಉದ್ಧಟತನ ಯಾರು ತೋರಿಸುತ್ತಾರೆ” ಎಂದು ಇಂಡಿಯಾ ಎಂಬ ಹೆಸರನ್ನು ಭಾರತ್ ಎಂದು ಬದಲಿಸುವ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ಕಿಡಿಕಾರಿದರು.

Advertisements

“ಭಾರತ ಎಂಬುದು ಸಾವಿರಾರು ವರ್ಷಗಳ ಇತಿಹಾಸವಿರುವ ಉಜ್ವಲವಾದ ದೇಶ. ಇಲ್ಲಿ ನದಿಗಳಿವೆ, ನಾಲೆಗಳಿವೆ, ಜನರಿದ್ದಾರೆ, ರಾಜ್ಯಗಳಿವೆ. ಇವೆಲ್ಲವೂ ಸೇರಿ ಭಾರತ. ಈ ದೇಶ ಕಾರ್ಮಿಕರಿಗೆ ಸೇರಿದ್ದು, ರೈತರಿಗೆ ಸೇರಿದ್ದು, ವಿದ್ಯಾರ್ಥಿಗಳಿಗೆ ಸೇರಿದ್ದು, ಮಹಿಳೆಯರಿಗೆ ಸೇರಿದ್ದು. ಒಬ್ಬ ವ್ಯಕ್ತಿ ಅದನ್ನು ತನ್ನಿಷ್ಟದಂತೆ ನಡೆಸಲು ಸಾಧ್ಯವಿಲ್ಲ” ಎಂದರು.

“ನಾನು ಈ ದೇಶದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನವಿರುವ, ಹಿಂದಿಯ ಅಡಿಯಾಳಾಗಬೇಕಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುತ್ತೇನೆ. ಮಣಿಪುರದ ಮಹಿಳೆಯರು ಬೆತ್ತಲೆ ಮೆರವಣಿಗೆಯಂತ ಕೃತ್ಯದ ಬಗ್ಗೆ ಕೇವಲ 26 ಸೆಕೆಂಡ್‌ ಮಾತನಾಡುವ ಆಳುವವರಿಲ್ಲದ ದೇಶವನ್ನು ಬಯಸುತ್ತೇನೆ. ಒಳ್ಳೆಯ ಆಡಳಿತವಿರುವ, ದೇಶದ ಬಗ್ಗೆ ಚಿಂತಿಸುವ ನಾಯಕರಿರುವ ದೇಶವನ್ನು ಊಹಿಸಿಕೊಳ್ಳುತ್ತೇನೆ. ನಾನು ನಮ್ಮ (ಕರ್ನಾಟಕ) ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ. ಅವರು ಮಹಿಳಾ ಪರವಾದ ಯೋಜನೆಗಳನ್ನು ನುಡಿದಂತೆ ಜಾರಿಗೊಳಿಸಿದ್ದಾರೆ. ಅವರು ದೇಶವನ್ನು ಒಡೆಯುವ ಮಾತನಾಡಲಿಲ್ಲ, ದ್ವೇಷದ ಭಾಷಣ ಮಾಡಲಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ದೇಶಕ್ಕೆ ಗಾಯವಾದಾಗ ಮೌನವಾಗಿದ್ದರೆ, ಅದು ದೇಶವನ್ನೇ ಸುಡುತ್ತದೆ: ನಟ ಪ್ರಕಾಶ್ ರಾಜ್

“ದೇಶದ ಹೆಸರನ್ನು ಬದಲಿಸಲು ಯತ್ನಿಸುತ್ತಿರುವವರ ಪೂರ್ವಜರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಲಿಲ್ಲ. ದೇಶ ಕಟ್ಟಲು ಶ್ರಮಿಸಲಿಲ್ಲ. ಅವರಿಗೆ ಭಾರತವೇನು ಎಂಬುದು ಗೊತ್ತಿದೆ. ಇಂಡಿಯಾ ಏನು ಎಂಬುದು ಗೊತ್ತಿದೆ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನಾನು ನೀವು ಎಲ್ಲರೂ ಸೇರಿ ನಮ್ಮ ಪೂರ್ವಜರು ಕನಸು ಕಂಡ ದೇಶ ಕಟ್ಟಲು ಪ್ರಯತ್ನಿಸಬೇಕು. ಭರವಸೆ ತರಬೇಕು. ನಾವು ಹಲವು ಧರ್ಮಗಳನ್ನು ಪಾಲಿಸುತ್ತೇವೆ. ಆದರೆ ಅದಕ್ಕಿಂತ ಪವಿತ್ರವಾದದ್ದು, ಸಂವಿಧಾನ. ಯಾವುದೇ ಭೇಧಭಾವವಿಲ್ಲದೆ, ರಕ್ಷಣೆ, ಘನತೆ, ಸ್ವಾತಂತ್ರ್ಯವನ್ನು, ಓಟು ಮಾಡುವ ಅಧಿಕಾರವನ್ನೂ ಖಾತ್ರಿಪಡಿಸುವ ಏಕೈಕ ಗ್ರಂಥ ಸಂವಿಧಾನ. ಅಂತಹ ಹಕ್ಕುಗಳ ರಕ್ಷಣೆಗಾಗಿ ನಾವು ಹೋರಾಟ ಮಾಡೋಣ” ಎಂದು ಕರೆಕೊಟ್ಟರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X