ದಕ್ಷಿಣ ಭಾರತದ ಕರಾಟೆ ಚಾಂಪಿಯನ್‌ ಶಿಪ್‌; ಮಂಡ್ಯ ಕರಾಟೆ ಪಟುಗಳಿಗೆ ಬಹುಮಾನ

Date:

Advertisements

ಚನೈ ನಗರದ ಜಯಲಲಿತಾ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ 4ನೇ ದಕ್ಷಿಣ ಭಾರತ ಮುಕ್ತ ಕರಾಟೆ ಚಾಂಪಿಯನ್‌ಶಿಪ್ -2024ರಲ್ಲಿ ಸ್ಪರ್ಧಿಸಿದ್ದ ಮಂಡ್ಯದ ಗೋಜುರಿಯೋ ಕರಾಟೆ ಡೊ ಅಕಾಡೆಮಿ ಇಂಡಿಯಾ ಹಾಗೂ ವಿಷ್ಣು ಲಯನ್ಸ್ ಮಾರ್ಷಲ್ ಆರ್ಟ್ಸ್ ಕರಾಟೆ ಶಾಲೆಯ ವಿದ್ಯಾರ್ಥಿಗಳು ಬಹುಮಾನ ಪಡೆದು ಕೀರ್ತಿ ತಂದಿದ್ದಾರೆ.

ವಿವಿಧ ವಯೋಮಿತಿ ಹಾಗೂ ತೂಕದ ವಿಭಾಗಗಳಲ್ಲಿ ಹಲವು ಬಹುಮಾನಗಳನ್ನು ಪಡೆದಿರುವ ಕರಾಟೆ ಪಟುಗಳನ್ನು ಸಂಸ್ಥೆಯ ಮುಖ್ಯಸ್ಥ ಲೋಕೇಶ್ ಮೊದಲಿಯಾರ್ ಅಭಿನಂದಿಸದ್ದಾರೆ.

ಕಟ ಹಾಗೂ ಕುಮುತೇ ವಿಭಾಗದ 10 ವರ್ಷದ ವಿಭಾಗದಲ್ಲಿ ಎಸ್ ಲಕ್ಷಿತ್‌ಗೌಡ ತೃತೀಯ ಸ್ಥಾನ, 11 ವರ್ಷದ ವಿಭಾಗದಲ್ಲಿ ಪೃಥ್ವಿ ಎಂ ಎಸ್ ಕಟ-ದ್ವಿತೀಯ ಹಾಗೂ ಕುಮುತೇ-ತೃತೀಯ ಸ್ಥಾನ ಪಡೆದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಆರ್ಯನ್ ಕಟ-ಕುಮುತೇ ವಿಭಾಗದಲ್ಲಿ ತೃತೀಯ ಸ್ಥಾನ, ಮನ್ವಿತ್ ಎಸ್ ಕುಮಾರ್ 13 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಕಟ ಹಾಗೂ ಕುಮತೆಯಲ್ಲೂ ಪ್ರಥಮ ಸ್ಥಾನ, 14 ವರ್ಷದೊಳಗಿನ ಕಲರ್ ಬೆಲ್ಟ್ ವಿಭಾಗದಲ್ಲಿ ರಂಜನ್ ಗೌಡ ಕಟ ಹಾಗೂ ಕುಮುತೇ ಎರಡು ವಿಭಾಗಗಳಲ್ಲೂ ದ್ವಿತೀಯ ಸ್ಥಾನ ಪಡೆದಿದ್ದಾರೆ.

Advertisements

15ವರ್ಷ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ನೂತನ್ ದ್ವಿತೀಯ ಸ್ಥಾನ, 13 ವರ್ಷ ಮೇಲ್ಪಟ್ಟ ಬ್ಲ್ಯಾಕ್ ಬೆಲ್ಟ್ ವಿಭಾಗದಲ್ಲಿ ವಿಷ್ಣು ಮೊದಲಿಯಾರ್ ಕಟ ದ್ವಿತೀಯ ಹಾಗೂ ಕುಮುತೇ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

“ಈ ಸ್ಪರ್ಧೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ಸುಮಾರು 450 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪಂದ್ಯಾವಳಿಯಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ರೀತಿಯ ಪ್ರದರ್ಶನ ನೀಡಿ ಹಲವು ಬಹುಮಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಕರಾಟೆ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ತರಬೇತುದಾರ ಲೋಕೇಶ್ ಮೊದಲಿಯಾರ್ ತಿಳಿಸಿರುತ್ತಾರೆ.

ಈ ಸುದ್ದಿ ಓದಿದ್ದೀರಾ? ಧಾರವಾಡ | ಅ. 13ಕ್ಕೆ ರಡ್ಡಿ ಬ್ಯಾಂಕ್ ಶತಮಾನೋತ್ಸವ: ಸಿಎಂ ಸೇರಿ ರಾಜ್ಯದ ಶಾಸಕ, ಸಚಿವರ ದಂಡು ಬರಲಿದೆ

ಸ್ಪರ್ಧೆಯ ಕೋಚ್‌ ಆಗಿ ವಿಷ್ಣು ಹಾಗೂ ಮ್ಯಾನೇಜರಾಗಿ ನೂತನ್ ಎಂ ಆರ್ ಕಾರ್ಯ ನಿರ್ವಹಿಸಿ ತಂಡದ ಯಶಸ್ಸಿಗೆ ಶ್ರಮಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X