ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಮೈಸೂರು ಮತ್ತು ವಾಸ್ಕೋಡ ಗಾಮಾ ನಡುವೆ ವಾರಕ್ಕೊಮ್ಮೆ ವಿಶೇಷ ರೈಲು ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಡಿಸೆಂಬರ್ 22 ಮತ್ತು 29 ರಂದು ರಾತ್ರಿ 7.10 ಕ್ಕೆ ಮೈಸೂರಿನಿಂದ ಹೊರಡುವ ರೈಲು ಮರುದಿನ ಮಧ್ಯಾಹ್ನ 1.50 ಕ್ಕೆ ವಾಸ್ಕೋ-ಡ-ಗಾಮಾ ತಲುಪಲಿದೆ. ಈ ರೈಲು ಮಂಡ್ಯ, ರಾಮನಗರ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ರಾಣಿಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಲೋಂಡಾ, ಕ್ಯಾಸಲ್ ರಾಕ್, ಕುಲೆಮ್, ಸ್ಯಾನ್ವೊರ್ಡೆಮ್, ಕರ್ಚೊರೆಮ್ ಮತ್ತು ಮಡಗಾಂವ್‌ನಲ್ಲಿ ನಿಲುಗಡೆಯಾಗಲಿದೆ.
“ಡಿಸೆಂಬರ್ 25 ಮತ್ತು 2024ರ ಜನವರಿ 1ರಂದು ಮಧ್ಯಾಹ್ನ 2.30ಕ್ಕೆ ವಾಸ್ಕೋಡ-ಗಾಮಾದಿಂದ ಹೊರಡುವ ರೈಲು ಮರುದಿನ ಮೈಸೂರು ತಲುಪಲಿದೆ. ಈ ರೈಲಿನಲ್ಲಿ ಮೊದಲ ದರ್ಜೆ ಎಸಿ ಬೋಗಿ, 2 ಎಸಿ ಎರಡು ಟೈರ್ ಬೋಗಿಗಳು, 7 ಎಸಿ ಮೂರು ಟೈರ್ ಬೋಗಿಗಳು, 8 ಸ್ಲೀಪರ್ ಕ್ಲಾಸ್ ಬೋಗಿಗಳು, 2 ಜನರಲ್ ಸಿಟ್ಟಿಂಗ್ ಬೋಗಿಗಳು ಮತ್ತು 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ ಹೊಂದಿರುವ 22 ಬೋಗಿಗಳನ್ನು ಒಳಗೊಂಡಿದೆ” ಎಂದು ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಮತ್ತು ಹಿರಿಯ ಪಿಆರ್‌ಒ ಜೆ. ಲೋಹಿತೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ರೈತರಿಗೆ ತಾಂತ್ರಿಕ ಸಲಹೆ ನೀಡಿದರೆ ಕೃಷಿ ಉದ್ದಿಮೆದಾರರಾಗುತ್ತಾರೆ: ಡಾ. ಪಿ.ಎಲ್ ಪಾಟೀಲ್
ರೈಲಿನಲ್ಲಿ ಹೊದಿಕೆಗಳನ್ನು ಒದಗಿಸಲಾಗುವುದಿಲ್ಲ. ಆದ್ದರಿಂದ ಪ್ರಯಾಣಿಕರು ತಮ್ಮ ಬೆಡ್‌ಶೀಟ್‌ಗಳನ್ನು ಕೊಂಡೊಯ್ಯುವಂತೆ ನೈಋತ್ಯ ರೈಲ್ವೆ ವಿನಂತಿಸಿದೆ.