ಶಿವಾಜಿಯ ಲೂಟಿಯಿಂದ ಕರ್ನಾಟಕವನ್ನು ರಕ್ಷಿಸಿದ್ದ ಅಪ್ರತಿಮ ವೀರ ಮೈಸೂರು ಸಂಸ್ಥಾನದ 14ನೇ ದೊರೆ ಚಿಕ್ಕದೇವರಾಜ ಒಡೆಯರ್ 259ನೇ ಜನ್ಮದಿನದ ಅಂಗವಾಗಿ ಶ್ರೀರಂಗಪಟ್ಟಣದ ಅಚೀವರ್ಸ್ ಅಕಾಡೆಮಿಯಿಂದ ಶ್ರೀರಂಗಪಟ್ಟಣದ ಇತ್ತೀಚೆಗಷ್ಟೇ ಗುರುತಿಸಿದ ಜೋಡಿ ನೆಲಮಾಳಿಗೆಯ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.
ಅಚಿವರ್ಸ್ ಅಕಾಡೆಮಿಯ ಸಂಸ್ಥಾಪಕರಾದ ಡಾಕ್ಟರ್ ರಾಘವೇಂದ್ರ ಮಾತನಾಡಿ, ಚಿಕ್ಕದೇವರಾಜ ಒಡೆಯರ್ ಮಂಡ್ಯ ಜಿಲ್ಲಾ ರೈತರ ಹಿತದೃಷ್ಟಿಯಿಂದ ಚಿಕ್ಕದೇವರಾಜ ಅಣೆಕಟ್ಟೆ ಎಂಬ ನೀರಾವರಿ ಯೋಜನೆಯನ್ನು 350 ವರ್ಷಗಳ ಹಿಂದೆ ನಿರ್ಮಿಸಿದ್ದರು. ಅಲ್ಲದೆ, ಮೈಸೂರು ರಾಜ್ಯದ ಅತ್ಯುತ್ತಮ ಆಡಳಿತಗಾರರಲ್ಲಿ ಒಬ್ಬರಾಗಿದ್ದ ಈ ರಾಜನು ಮೈಸೂರು ಪ್ರಾಂತ್ಯದ ಜನಗಳ ಹಿತದೃಷ್ಟಿಯಿಂದ ಉತ್ತಮವಾದ ಆಡಳಿತವನ್ನು ನೀಡಿದ್ದಾರೆ. ಈಗಲೂ ನಮ್ಮ ಮಂಡ್ಯ ಜಿಲ್ಲೆಯ ಹಳ್ಳಿಗಾಡಿನಲ್ಲಿ ಹಳೆ ಕಾಲುವೆ ಎಂದೇ ಪ್ರಸಿದ್ಧಿಯಾಗಿರುವ ಸಿಡಿಎಸ್ ನಾಲೆಯು ಇಂದಿಗೂ ರೈತರ ಜೀವನಾಡಿಯಾಗಿದೆ ಎಂದು ಹೇಳಿದರು.
ಇದನ್ನು ಓದಿದ್ದೀರಾ? ನಾಗಮಂಗಲ ಗಲಭೆ ಪ್ರಕರಣ | ಬಂಧನಕ್ಕೆ ಹೆದರಿ ಗ್ರಾಮ ತೊರೆದಿದ್ದ ಯುವಕ ‘ಬ್ರೈನ್ ಸ್ಟ್ರೋಕ್’ನಿಂದ ಸಾವು ವದಂತಿ; ಪೊಲೀಸರ ಸ್ಪಷ್ಟನೆ
ಕಾರ್ಯಕ್ರಮದಲ್ಲಿ ಎನ್ ಸರಸ್ವತಮ್ಮ ರೋಟರಿ ಕ್ಲಬ್ ಸದಸ್ಯರು ಶ್ರೀರಂಗಪಟ್ಟಣ. ಹಿರಿಯ ಗಾಂಧಿ ವಾದಿಗಳಾದ ಡಾ. ಬಿ ಸುಜಯ್ ಕುಮಾರ್. ಸಮರ್ಪಣಾ ಟ್ರಸ್ಟ್ ಅಧ್ಯಕ್ಷ ಕೆ ಎಸ್ ಜಯಶಂಕರ್, ಶ್ರೀರಂಗ ಪಟ್ಟಣದ ಪ್ರಜ್ಞಾವಂತರ ವೇದಿಕೆಯ ಕಾರ್ಯದರ್ಶಿ ಚಿಕ್ಕ ತಮ್ಮೆಗೌಡ, ಶ್ರೀರಂಗಪಟ್ಟಣ ಮುಸ್ಲಿಂ ಸೌಹಾರ್ದ ವೇದಿಕೆಯ ಅಧ್ಯಕ್ಷ ಅಪ್ಸರ್ ಖಾನ್, ಆಯುಬ್, ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


