ಶ್ರೀರಂಗಪಟ್ಟಣ | ಸೌಲಭ್ಯಗಳನ್ನು ಪಡೆಯಲು ಜನರು ಸಂಘಟಿತರಾಗಬೇಕು: ಜನಶಕ್ತಿ ಮುಖಂಡ ಸಿದ್ದರಾಜು

Date:

Advertisements

ಮೂಲಭೂತ ಹಕ್ಕುಗಳಾದ ವಿದ್ಯುತ್, ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಶೌಚಾಲಯ ಸೌಲಭ್ಯಗಳನ್ನು ಹೋರಾಡಿ ಪಡೆಯಲು ಇಂದು ಸಂಘಟಿತರಾಗುವ ಅವಶ್ಯಕತೆ ಇದೆ ಎಂದು ಮಂಡ್ಯ ಜನಶಕ್ತಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಎಂ. ಸಿದ್ದರಾಜು ತಿಳಿಸಿದರು.

ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬೋರೆಯಲ್ಲಿ ಕರ್ನಾಟಕ ಜನಶಕ್ತಿ, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಮತ್ತು ಹಕ್ಕಿ ಪಿಕ್ಕಿ ಸಮುದಾಯ ನಿವಾಸಿಗಳ ಒಕ್ಕೂಟದ ನಾಮಫಲಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

WhatsApp Image 2025 08 08 at 9.15.54 PM 1

ಕರ್ನಾಟಕ ಜನಶಕ್ತಿಯ ಮಂಡ್ಯದ ಎಲ್ಲಾ ಪದಾಧಿಕಾರಿಗಳ ಒಗ್ಗಟ್ಟಿನಿಂದ ಶ್ರೀರಂಗಪಟ್ಟಣ ತಾಲೊಕಿನ ಮೊಗ್ಗರಳ್ಳಿ ಮಟ್ಟಿಯಿಂದ ಈ ಸಮುದಾಯವನ್ನು 2016 ರಲ್ಲಿ ದೌರ್ಜನ್ಯ ದಿಂದ ಒಕ್ಕಲಿಬ್ಬಿಸಿದ ಸಂದರ್ಭದಲ್ಲಿ ಕರ್ನಾಟ ಜನಶಕ್ತಿಯ ನೇತೃತ್ವದಲ್ಲಿ ಮಂಡ್ಯದ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಅಹೋ ರಾತ್ರಿ ಧರಣಿ ನಡೆಸಿ, ಎರಡು ಎಕ್ಕರೆ ಸರ್ಕಾರಿ ಜಮಿನನ್ನು47 ಕುಟುಂಬಗಳಿಗೆ 30×40 ರಂತೆ ಜಿಲ್ಲಾಡಳಿತದ ವತಿಯಿಂದ ಮಂಜೂರು ಮಾಡಿಸಲಾಯಿತು. ಈ ಕುಟುಂಬಗಳಿಗೆ 36 ಜನರಿಗೆ ಮಾತ್ರ ಹಕ್ಕು ಪತ್ರ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Advertisements

ಉಳಿದ 12 ಕುಟುಂಬಗಳಿಗೆ ಹಕ್ಕು ಪತ್ರ ಪಡೆಯುವ ಜೊತೆಗೆ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಹಾಗೂ ಶಾಸಕರು ಈ ಸಮುದಾಯಕ್ಕೆ ಸ್ಪಂದಿಸಿ ವಸತಿ ಮತ್ತು ಮಕ್ಕಳಿಗೆ ಅಂಗನವಾಡಿ ಹಾಗೂ ಶಾಲೆ ಮತ್ತು ಮೂಲಭೂತ ಹಕ್ಕುಗಳಾದ ವಿದ್ಯುತ್, ಕುಡಿಯುವ ನೀರು, ಬೀದಿ ದೀಪ, ರಸ್ತೆ, ಚರಂಡಿ, ಶೌಚಾಲಯ ಸೌಲಭ್ಯಗಳನ್ನು ಹೋರಾಡಿ ಪಡೆಯಲು ಇಂದು ಸಂಘಟಿತರಾಗಬೇಕು. ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆಯ ಜೊತೆಗೆ ನಾಗರಿಕರೂ ಕೈಜೋಡಿಸಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿ ರಾಜ್ಯ ಮುಖಂಡರಾದ ಕುಮಾರ್ ಸಮತಳ, ಈ ಸಮುದಾಯಗಳು ಹರಿಯುವ ನದಿಯಂತೆ. ಒಂದು ಕಡೆ ನೆಲೆ ನಿಲ್ಲದೆ ಇರುವುದರಿಂದ ಸರ್ಕಾರದ ಸಮರ್ಪಕ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ನೆಲೆ ನಿಂತರೆ ನಮಗೆ ನಿವೇಶನ ವಸತಿ ಸೇರಿ ಹಲವು ಸೌಲಭ್ಯಗಳ ಜೊತೆಗೆ ಉಳುಮೆ ಮಾಡಲು ಭೂಮಿಯನ್ನು ಸಹ ಪಡೆಯಬಹುದು. ತಿಪಟೂರು, ಗೌರಿಬಿದನೂರು ತುಮಕೂರು ಮಂಡ್ಯದ ನಾಗಮಂಗಲ ಪಾಂಡವಪುರ ಸೇರಿದಂತೆ ಹಲವು ಕಡೆ ಸರ್ಕಾರದ ವತಿಯಿಂದ ಎರಡರಿಂದ ಮೂರು ಎಕ್ಕರೆ ಭೂಮಿ ಸಹ ಸಿಕ್ಕಿದೆ ಎಂದರು.

ರೈತ ಹಾಗೂ ಪ್ರಗತಿಪರ ಹೋರಾಟಗಾರರಾದ ನಿವಾಸ್‌ ಕಂದೇಗಾಲ ಮಾತನಾಡಿ, “ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರಿಗೂ ಸರ್ಕಾರದ ವತಿಯಿಂದ ಭೂಮಿ ವಸತಿ ನಿವೇಶನ ಸಿಗಬೇಕೆಂದು ಹಕ್ಕಿಪಿಕ್ಕಿ ಸಮುದಾಯಗಳಾದ ಹುಣಸೂರು, ಪಿರಿಯಾಪಟ್ಟಣ, ಟೈಗರ್ ಬ್ಲಾಕ್ ಮತ್ತು ಶಿಕಾರಿಪುರ ಎನ್ನುವ ಹಕ್ಕಿ ಪಿಕ್ಕಿ ಹಾಡಿಗಳಲ್ಲಿ ಹಲವು ಹೋರಾಟಗಳನ್ನು ಮಾಡಿ ಬದುಕಿಗೆ ಬೇಕಾದ ಹಲವು ಸೌಲಭ್ಯಗಳನ್ನು ಸಂಘಟಿತ ಹೋರಾಟದಿಂದ ಪಡೆಯಲು ಸಾಧ್ಯ. ಹಾಗಾಗಿ ತಾವೆಲ್ಲರೂ ಒಟ್ಟುಗೂಡಿ ಹೋರಾಡಿದರೆ ನಮಗೆ ಎಲ್ಲಾ ತರಹದ ಹಕ್ಕುಗಳು ಸಿಗುತ್ತದೆ ಎಂದು ತಿಳಿಸಿದರು.

ಹಿರಿಯ ಹೋರಾಟಗಾರರಾದ ಮರಿಯಪ್ಪ ಅವರು ಮಾತನಾಡಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ಲಂ ಜನರನ್ನು ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಹೋರಾಡಿ ನಿವೇಶನ ವಸತಿ ಹಕ್ಕುಪತ್ರ ಸೇರಿದಂತೆ ಸಾವಿರಾರು ಜನರಿಗೆ ತಲುಪುವ ಹೋರಾಟ ಮಾಡಲಾಗಿದೆ ಎಂದು ತಿಳಿಸಿದರು.

mmm 2

ಹಕ್ಕಿ ಪಕ್ಕಿ ಅಲೆಮಾರಿ ಸಮುದಾಯದ ಮಕ್ಕಳು ಮೊದಲು ಶಿಕ್ಷಣ ಕಲಿಯಬೇಕು. ಶಿಕ್ಷಣದಿಂದ ಈ ಸಮುದಾಯಕ್ಕೆ ಹಿಡಿದಿರುವ ಶಾಪವನ್ನು ವಿಮೋಚನಾಗೊಳಿಸಬಹುದು ಮತ್ತು ಇವತ್ತಿನ ಮಕ್ಕಳು ಮುಂದಿನ ನಾಡು ಆಳುವ ಅಧಿಕಾರಿಗಳಾಗಬೇಕು. ಪ್ರತಿಯೊಂದು ಮಗು ಸಹ ತಹಶೀಲ್ದಾರ್, ಡಾಕ್ಟರ್, ಟೀಚರ್ ಹಾಗೂ ಜಿಲ್ಲಾಧಿಕಾರಿಯು ಸಹ ಅಗಬೇಕೆಂದು ಹಕ್ಕಿ ಪಿಕ್ಕಿ ಸಮುದಾಯದ ಮಕ್ಕಳಿಗೆ ಪ್ರತಿಜ್ಞಾವಿಧಿ ಬೋಧನೆ ಮಾಡಿಸಿದರು.

ರಾ.ರೈ ಸಂಘದ ಸ್ಥಳಿಯ ಪಂಚಾಯ್ತಿ ಮಾಜಿ ಸದಸ್ಯರಾದ ಕೃಷ್ಣ ಮಾತನಾಡಿ, ಈ ಸಮುದಾಯಕ್ಕೆ ಹಲವು ರೀತಿಯ ದಾಖಲೆಗಳು ನೀಡಿ ಇವರಿಗೆ ಬೇಕಿರುವ ಸೌಲಭ್ಯಗಳನ್ನು ಪಡೆಯಲು ಸಹಕಾರ ನೀಡಿದ್ದೆ. ಮುಂದೆಯೂ ಸಹ ಈ ಸಮುದಾಯದ ಪರವಾಗಿ ಜೊತೆಯಲ್ಲಿರುತ್ತೇನೆಂದು ಅಶಯ ನುಡಿಗಳನ್ನು ನುಡಿದರು.

ಈ ಸಂದರ್ಭದಲ್ಲಿ ಹಕ್ಕಿ ಪಿಕ್ಕಿ ಸಮುದಾಯದ ಅಧ್ಯಕ್ಷರಾದ ಪ್ರಭು, ಗೌರವಾಧ್ಯಕ್ಷರಾದ ರೈಸ್, ಕಾರ್ಯದರ್ಶಿ ಚಿಕ್ಕೂ ಹಾಗೂ ಪದಾಧಿಕಾರಿಗಳಾದ ರುಖೇಶ್, ಕನಿರಾಜು, ಶಶಿಕುಮಾರ್, ಚೆಂಗುಮಣಿ, ಮಹಿಳಾ ಮುಖಂಡರಾದ ಶಾಂತಿ, ಸ್ವಾತಿ, ಭವಾನಿ, ವರಲಕ್ಷ್ಮಿ ಭಾಗವಹಿಸಿದ್ದರು.

WhatsApp Image 2025 08 08 at 9.15.55 PM
ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ಮಕ್ಕಳನ್ನು ಡ್ರಗ್ಸ್‌ ದಾಸರನ್ನಾಗಿ ಮಾಡಿ ಭಾರತವನ್ನು ಮುಳುಗಿಸುವಲ್ಲಿ ದೊಡ್ಡ ದೊಡ್ಡ ದೇಶಗಳ ಕೈವಾಡವಿದೆ: ಎಚ್‌ ಎಂ ವಿಶ್ವನಾಥ್

ದೊಡ್ಡ ದೊಡ್ಡ ದೇಶಗಳು ನಮ್ಮ ದೇಶದ ಮಕ್ಕಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್‌ನಲ್ಲಿ ಮುಳುಗಿಸುತ್ತಿದ್ದಾರೆ....

ಹಾವೇರಿ | ಮಾದಕ ವಸ್ತು ಮಾರಾಟ; ನಾಲ್ವರು ಬಂಧನ

ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ಹಾವೇರಿ...

ಶಿವಮೊಗ್ಗ | ಕಾಂಗ್ರೆಸ್ ಕಚೇರಿಯಲ್ಲಿ ಅರಸು ಮತ್ತು ರಾಜೀವ್‍ಗಾಂಧಿಯವರ ಜನ್ಮದಿನಾಚರಣೆ

ಶಿವಮೊಗ್ಗ, ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ನಾಯಕ ಹಾಗೂ...

ಶಿವಮೊಗ್ಗ | ಆರು ಜಿಲ್ಲೆಯ ಮುಖಂಡರಿಂದ ಅಹಿಂದ ಸಮಾವೇಶದ ಪೂರ್ವಭಾವಿ ಸಭೆ : ತೀ.ನ. ಶ್ರೀನಿವಾಸ್

ಶಿವಮೊಗ್ಗ, ಮಲೆನಾಡು ರೈತರ ಸಮಸ್ಯೆ ಹಾಗೂ ಕಾಂತ್‌ರಾಜ್ ವರದಿಯ ಜಾರಿಗೆ ಆಗ್ರಹಿಸಿ...

Download Eedina App Android / iOS

X