ರಾಜ್ಯಮಟ್ಟದ ಬಂಜಾರ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ವಸತಿ ಕಾರ್ಯಗಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯು ರಾಜ್ಯ ಮಟ್ಟದ ವಸತಿ ಸಹಿತ ಸಾಹಿತ್ಯ, ಕಾವ್ಯ ಹಾಗೂ ನಾಟಕ ರಚನಾ ಕಾರ್ಯಾಗಾರವನ್ನು ಅಕ್ಟೋಬರ್ ತಿಂಗಳ ಮೂರನೇ ವಾರದಲ್ಲಿ ರಾಮನಗರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅಧ್ಯಕ್ಷರಾದ ಡಾ. ಎ. ಆರ್. ಗೋವಿಂದಸ್ವಾಮಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕಟಣೆ ಮೂಲಕ ಮಾಹಿತಿ ನೀಡಿರುವ ಅವರು, 20 ರಿಂದ 40 ವರ್ಷದೊಳಗಿನ ಬಂಜಾರ ಯುವಕ/ಯುವತಿಯರು ಪಾಲ್ಗೊಳ್ಳಬಹುದು. ಪ್ರತಿಶತ 10% ಬಂಜಾರೇತರರು ಭಾಗವಹಿಸಲು ಅವಕಾಶವಿದೆ. 50 ಮಂದಿ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.
ಅಕ್ಟೋಬರ್ 10ನೇ ತಾರೀಖಿನ ಒಳಗೆ, ಅಧ್ಯಕ್ಷರು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಜೆ.ಸಿ ರಸ್ತೆ ಬೆಂಗಳೂರು ಇವರಿಗೆ ತಲುಪುವಂತೆ ಸ್ವ-ಹಸ್ತಾಕ್ಷರದಲ್ಲಿ ಬರೆದು ಕಳುಹಿಸಬೇಕು.
ಹೆಚ್ಚಿನ ವಿವರಗಳಿಗೆ -080-29917745 ನಂಬರಿಗೆ
ಸಂಪರ್ಕಿಸಲು, ಈ ಶಿಬಿರವನ್ನು ಸದುಪಯೋಗ ಮಾಡಿಕೊಳ್ಳಲು ಮನವಿ ಮಾಡಿದ್ದಾರೆ.
