ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ದಸರಾ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ವಾಫಿ ಅಬ್ದುಲ್ ಹಕೀಂ ಚಾಂಪಿಯನ್ ಆಗಿದ್ದಾರೆ.
ಕ್ರಮವಾಗಿ 100 ಮೀಟರ್ ಬ್ಯಾಕ್ ಸ್ಟೋಕ್‌ನಲ್ಲಿ ಚಿನ್ನ, 200 ಮೀಟರ್ ಬ್ಯಾಕ್ ಸ್ಟೋಕ್‌ನಲ್ಲಿ ಬೆಳ್ಳಿ ಹಾಗೂ 4X100ಮೀಟರ್ ಫ್ರೀ ಸ್ಟೈಲ್ ರಿಲೇಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ಮಂಗಳೂರಿನ ರಾಮಕೃಷ್ಣ ರಾವ್ ಅವರಿಂದ ತರಬೇತಿ ಪಡೆಯುತ್ತಿರುವ ಹಕೀಂ ಅವರು, ಮಂಗಳೂರಿನ ಜೈ ಹಿಂದ್ ಈಜು ಕ್ಲಬ್‌ನ ಈಜುಗಾರ.
ಇದನ್ನು ಓದಿದ್ದೀರಾ? ಹಗರಿ ಬೊಮ್ಮನಹಳ್ಳಿ | ಪತ್ನಿಯ ಪ್ರಿಯಕರನನ್ನು ಕೊಲೆಗೈದ ಬಳಿಕ ಪೊಲೀಸರಿಗೆ ಶರಣಾದ ಪತಿ
ಈತ ಮಂಗಳೂರಿನ ನಿವಾಸಿಯಾಗಿರುವ ಅಬ್ದುಲ್ ಕರೀಂ ಹಾಗೂ ಶಾಹಿದಾ ಜೆಪ್ಪು ದಂಪತಿಯ ಸುಪುತ್ರರಾಗಿದ್ದು, ಯೇನೆಪೋಯ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯಾಗಿದ್ದಾನೆ.

