ಗುಬ್ಬಿ | ರೈತ ವಿರೋಧಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಗಿತಗೊಳಿಸಿ : ಕೇಂದ್ರ ಸಚಿವ ವಿ.ಸೋಮಣ್ಣ

Date:

Advertisements

ತುಮಕೂರು ಜಿಲ್ಲೆಯ ರೈತ ವಿರೋಧಿ ಎನಿಸಿದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಸಂಬಂಧಪಟ್ಟ ಇಂಜಿನಿಯರ್ ಗಳು ಸ್ಥಗಿತಗೊಳಿಸಿ ವಾಸ್ತವ ಅಂಶ ರೈತರ ಮುಂದಿಡಬೇಕು ಎಂದು ಕೇಂದ್ರ ರೈಲ್ವೆ ಸಚಿವ ಹಾಗೂ ಜಲಶಕ್ತಿ ಸಚಿವ ವಿ.ಸೋಮಣ್ಣ ಸೂಚಿಸಿದರು.

ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿ ಸಂಕಾಪುರ ಬಳಿ ನಡೆದಿದ್ದ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಿಸಿ ಅಧಿಕಾರಿಗಳ ಜೊತೆ ಚರ್ಚಿಸಿದ ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ನನ್ನನ್ನು ಲೋಕಸಭೆಗೆ ಕಳುಹಿಸಿದ ತುಮಕೂರು ಜಿಲ್ಲೆಯ ರೈತರ ಹಿತ ಕಾಯುವ ಕೆಲಸ ಕರ್ತವ್ಯವಾಗಿದೆ. ನಮ್ಮ ಪಾಲಿನ ನೀರು ಹೇಗೆ ಹರಿಸಲು ಸಾಧ್ಯ. 15 ರಿಂದ 20 ಟಿಎಂಸಿ ಹೆಚ್ಚಿನ ಹಂಚಿಕೆ ಮಾಡಿಕೊಂಡು ಮುಖ್ಯ ನಾಲೆ ಮೂಲಕ ಕುಣಿಗಲ್ ಗೆ ಮತ್ತಷ್ಟು ಹೆಚ್ಚಿಗೆ ಹರಿಸಲಿ. ಅದನ್ನು ಬಿಟ್ಟು ನಮ್ಮ ನೀರನ್ನು ತಿರುವಿಸಿದ ಯೋಜನೆ ಬಗ್ಗೆ ಅಧಿಕಾರಿಗಳು ವಾಸ್ತವ ಅಂಶ ಹೇಳಬೇಕಿದೆ ಎಂದರು.

ನಮ್ಮ ನೀರು ಪ್ರತಿಪಾದಿಸಿದ ರೈತರು ನಡೆಸಿದ ಹೋರಾಟ, ಪೊಲೀಸ್ ಕೇಸ್ ಎಲ್ಲವೂ ಕಪ್ಪುಚುಕ್ಕೆಯಾಗಿ ಕಾಣುವ ಮುನ್ನ ಯೋಜನೆಗೆ ತಾರ್ಕಿಕ ಅಂತ್ಯ ಕಾಣಿಸಿ ಕಪ್ಪು ಚುಕ್ಕೆ ಅಳಿಸಬೇಕಿದೆ. ನಮ್ಮ ಪಾಲಿನ ನೀರು ಕಿತ್ತು ಕೊಳ್ಳುವ ಯೋಜನೆ ನಮ್ಮ ಜನ ಒಪ್ಪುವುದಿಲ್ಲ. ತಾಂತ್ರಿಕ ವ್ಯವಸ್ಥೆ ಕೂಡ ಸರಿಯಿಲ್ಲ. ಬಹಳ ಮಂದಿ ಮುಖಂಡರ ಜೊತೆ ಚರ್ಚಿಸಿದ್ದೇನೆ.ಕಳೆದ 15 ವರ್ಷದಿಂದ ಗೊಂದಲ ಉಂಟು ಮಾಡಿದ ಈ ಯೋಜನೆ ಬಗ್ಗೆ ನೀರಾವರಿ ಇಂಜಿನಿಯರ್ ಗಳು ಎಚ್ಚರಿಕೆ ವಹಿಸಿ ಮುಂದುವರೆಯಬೇಕು. ಇತಿಮಿತಿಯಲ್ಲಿ ಅಧಿಕಾರಿಗಳು ಮಾತನಾಡಬೇಕು. ಯಾವ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ವಾಸ್ತವ ಚಿತ್ರಣ ನೀಡಬೇಕು ಎಂದು ತಾಕೀತು ಮಾಡಿದ ಅವರು ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಜಿಲ್ಲೆಯ ರೈತರಿಗೆ ಯಾವುದೇ ಅಪಚಾರ ಆಗದಂತೆ ಸಮಸ್ಯೆ ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

Advertisements
1001570550

ಯಾವುದೇ ಪೂರ್ವಗ್ರಹ ಪೀಡಿತರಾಗದೇ ದೊಡ್ಡ ಅಂತರದ ಗೆಲುವು ನೀಡಿದ ಜನರ ಋಣ ತೀರಿಸಬೇಕಿದೆ. ಈ ನಿಟ್ಟಿನಲ್ಲಿ ಯೋಜನೆಯ ಬಗ್ಗೆ ಎಲ್ಲೆಲ್ಲಿ ಮಾತನಾಡಬೇಕೂ ಅಲ್ಲಲ್ಲಿ ಮಾತನಾಡಿದ್ದೇನೆ. ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿದ್ದೇನೆ. ಗೃಹಮಂತ್ರಿ ಪರಮೇಶ್ವರ್ ಜೊತೆ ಕೂಡಾ ಒಂದು ಗಂಟೆಯ ಚರ್ಚೆ ಮಾಡಿದ್ದೇನೆ. ಜಿಲ್ಲೆಯ 11 ಶಾಸಕರ ಜೊತೆ ಚರ್ಚಿಸಿ ಒಂದು ಅಂತಿಮ ತೀರ್ಮಾನ ಕೈಗೊಳ್ಳುವ ಜೊತೆಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ನಾಲೆ ಅಗಲೀಕರಣ ಯೋಜನೆಗೆ ಕೇಂದ್ರ ಸರ್ಕಾರದ ಅನುದಾನವನ್ನು ಪ್ರಧಾನಿಗಳ ಜೊತೆ ಮಾತನಾಡಿ ಮಂಜೂರು ಮಾಡಿಸೋಣ ಎಂದ ಅವರು ಶಾಶ್ವತ ಪರಿಹಾರ ಕಂಡು ಹಿಡಿಯುವವರೆಗೆ ರೈತರು ಶಾಂತ ರೀತಿ ವರ್ತಿಸಬೇಕಿದೆ. ಇಲ್ಲಿನ ಮುಂದಿನ ಪೀಳಿಗೆ ಶಾಪ ಹಾಕುವ ಮುನ್ನ ಸಮಸ್ಯೆ ಬಗೆಹರಿಸೋಣ. ಈ ಜೊತೆಗೆ ಹೋರಾಟದಲ್ಲಿ ಪಾಲ್ಗೊಂಡು ಮಠಾಧೀಶರ ಮೇಲಿನ ಕೇಸು ವಾಪಸ್ಸಾಗಲಿದೆ. ಯಾರನ್ನೂ ಬಂಧಿಸುವ ಕೆಲಸ ನಡೆಯುವುದಿಲ್ಲ. ಇದೇ ತಿಂಗಳ ಕೊನೆಯ ವಾರದಲ್ಲಿ ಒಂದು ಪರಿಹಾರ ಕಂಡು ಹಿಡಿಯಲಾಗುವುದು. ಅಲ್ಲಿಯವರೆಗೆ ಎಂಜಿನಿಯರ್ ಗಳು ಕೆಲಸ ಸ್ಥಗಿತಗೊಳಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಎಚ್.ನಿಂಗಪ್ಪ, ಸುಧಾಕರಲಾಲ್, ದಿಶಾ ಸಮಿತಿ ಸದಸ್ಯ ವೈ.ಎಚ್.ಹುಚ್ಚಯ್ಯ, ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಜಯಪ್ರಕಾಶ್, ಮುಖ್ಯ ಇಂಜಿನಿಯರ್ ಮಹೇಶ್, ಸೂಪರಿಡೆಂಟ್ ಇಂಜಿನಿಯರ್ ಫಣಿರಾಜ್, ಮುಖಂಡರಾದ ಬಿ.ಎಸ್.ನಾಗರಾಜು, ಪಿ.ಬಿ.ಚಂದ್ರಶೇಖರಬಾಬು, ಎಸ್.ಡಿ.ದಿಲೀಪ್ ಕುಮಾರ್, ಸಾಗರನಹಳ್ಳಿ ವಿಜಯಕುಮಾರ್, ಎಸ್.ನಂಜೇಗೌಡ, ರೈತ ಸಂಘದ ವೆಂಕಟೇಗೌಡ, ಕಳ್ಳಿಪಾಳ್ಯ ಲೋಕೇಶ್, ಜಿ.ಎನ್.ಬೆಟ್ಟಸ್ವಾಮಿ, ಹೊನ್ನಗಿರಿಗೌಡ, ಎಚ್.ಟಿ.ಭೈರಪ್ಪ, ಬ್ಯಾಟರಂಗೇಗೌಡ, ಪಂಚಾಕ್ಷರಿ, ಯೋಗಾನಂದಕುಮಾರ, ಸಿದ್ದಗಂಗಮ್ಮ, ಕೊಂಡಜ್ಜಿ ವಿಶ್ವನಾಥ್ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

Download Eedina App Android / iOS

X