ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು ಮಾನಸ ಗಂಗೋತ್ರಿಯಲ್ಲಿ ಶಾಸಕ ಜಿ. ಟಿ. ದೇವಗೌಡ ಸದನದಲ್ಲಿ ನೀಡಿದ ದಲಿತ ವಿರೋಧಿ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.
ವಿಧಾನಸಭಾ ಅಧಿವೇಶನದಲ್ಲಿ ಕರ್ನಾಟಕ ಸಹಕಾರ ಕಾಯ್ದೆ ತಿದ್ದುಪಡಿ ವಿದೇಯಕ ಚರ್ಚೆ ನಡಿಯುವಾಗ ಶಾಸಕ ಜಿ. ಟಿ. ದೇವಗೌಡ ವಿರೋಧ ವ್ಯಕ್ತಪಡಿಸಿ, ಸಹಕಾರ ಸಂಘಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ನಿರ್ದೇಶಕರನ್ನು ಸರ್ಕಾರ ನಾಮ ನಿರ್ದೇಶನ ಮಾಡಲು ಹೊರಟಿರುವುದನ್ನು ಅವಹೇಳಕಾರಿ ರೀತಿಯಲ್ಲಿ ದಲಿತರ ಪ್ರವೇಶದಿಂದ ಸಹಕಾರಿ ಕ್ಷೇತ್ರ ಮುಚ್ಚಿ ಬಿಡಬೇಕಾಗುತ್ತದೆ ಎಂಬ ದಲಿತ ವಿರೋಧಿ ಹೇಳಿಕೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ದಲಿತ ಸಮುದಾಯದ ಕ್ಷಮೆ ಕೊರಬೇಕು ಎಂದು ಆಗ್ರಹಪಡಿಸಿದ್ದಾರೆ.
ದಲಿತರ ಮತಗಳಿಂದ ಸತತವಾಗಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದು. ಅವಿದ್ಯಾವಂತರಾದರೂ ಸಚಿವರಾಗಿ, ಶಾಸಕರಾಗಿ ಮಾಡಿದ ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿದ್ದು, ವಿರೋಧ ವ್ಯಕ್ತಪಡಿಸಿ ದಲಿತ ವಿರೋಧಿ ಎನ್ನುವುದನ್ನು ಸಾಬೀತು ಮಾಡಿಕೊಂಡಿರುವುದಕ್ಕೆ ದಿಕ್ಕಾರ ಕೂಗಿದರು.

ಸಹಕಾರ ಕ್ಷೇತ್ರದಲ್ಲಿ ತಮ್ಮ ಕುಟುಂಬದ ಏಕಸ್ವಾಮ್ಯ ಉಳಿಸಿಕೊಳ್ಳಲು ಈ ರೀತಿ ಮಾತನಾಡಿದ್ದಾರೆ ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೂರಿದ್ದಲ್ಲದೆ, ಮೀಸಲಾತಿ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಜಾರಿ ತರಬೇಕು. ಅದಕ್ಕಾಗಿ, ವಿದ್ಯಾರ್ಥಿ ಸಂಶೋಧಕರು ಸಹಿ ಸಂಗ್ರಹಿಸುತ್ತಿರುವುದಾಗಿ ಹೇಳಿದರು.
ದಲಿತರಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗಗಳಿಗೆ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ ನೀಡಲೇಬೇಕು, ಒಂದು ವೇಳೆ ಆಗದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಅಪ್ಪ ಮಕ್ಕಳಿಗೆ ಹುಣಸೂರು, ಚಾಮುಂಡೇಶ್ವರಿ ಎರಡು ಕ್ಷೇತ್ರಗಳಲಿ ಸರಿಯಾಗಿ ಬುದ್ದಿ ಕಲಿಸಬೇಕಾಗುತ್ತದೆ. ದಲಿತರಿಗೆ ಅಧಿಕಾರಕ್ಕೆ ತರುವುದು ಗೊತ್ತು, ಸಮಯ ಬಂದರೆ ಹೇಳಲು ಅಡ್ರೆಸ್ ಇಲ್ಲದ ಹಾಗೆ ಮನೆಗೆ
ಕಳುಹಿಸಲು ಗೊತ್ತು ಎಂದರು. ಇದೇ ಸಂದರ್ಭದಲ್ಲಿ ಜಿ. ಟಿ. ದೇವಗೌಡರ ಪ್ರತಿಕೃತಿ ಹರಿದು ತಮ್ಮ ಆಕ್ರೋಶ ಹೊರ ಹಾಕಿದರು.
ಈ ವಿಶೇಷ ವರದಿ ಓದಿದ್ದೀರಾ? ಮೈಸೂರು | ಅರಸು ಮರೆತ ಸರ್ಕಾರ; ಬೆಟ್ಟದತುಂಗ, ಕಲ್ಲಹಳ್ಳಿ ಗ್ರಾಮಗಳ ದತ್ತು ಪಡೆದಿದ್ದ ಸಿಎಂ ಸಿದ್ದರಾಮಯ್ಯ
ಪ್ರತಿಭಟನೆಯಲ್ಲಿ ಪ್ರದೀಪ್ ಮುಮ್ಮಡಿ, ಸಂಜಯ್ ಕುಮಾರ್, ಶಿವಶಂಕರ್, ಶೇಷಣ್ಣ, ಸ್ವಾಮಿ, ಮಲ್ಲೇಶ್ ಹೊಸಕೋಟೆ, ರಾಜಾನಂದ ಮೂರ್ತಿ ಸೇರಿದಂತೆ ಹಲವು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.