- ಭಜರಂಗದಳದ ಮುಖಂಡ ಪುನೀತ್ ಅತ್ತಾವರ, ಸಂಪತ್ ವಿರುದ್ಧ ಎಫ್ಐಆರ್
- ಗೋವು ಕಡಿಯುವವರ ಕೈ ಕಡಿಯಲು ಕರೆ ನೀಡಿದ್ದ ವಿಡಿಯೋ ವೈರಲ್
ಪ್ರಚೋದನಾಕಾರಿ ಭಾಷಣದ ಮಾಡಿದ್ದ ಹಿನ್ನೆಲೆಯಲ್ಲಿ ಭಜರಂಗದಳದ ಮುಖಂಡರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಭಜರಂಗದಳದ ಮಂಗಳೂರು ವಿಭಾಗದ ಸಹ ಸಂಯೋಜಕ ಪುನೀತ್ ಅತ್ತಾವರ ಹಾಗೂ ಕಾರ್ಕಳ ನಗರ ಬಜರಂಗದಳ ಸಂಚಾಲಕ ಸಂಪತ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ. 13ರಂದು ಕಾರ್ಕಳ ನಗರ ಬಜರಂಗದಳ ವತಿಯಿಂದ ಕಾರ್ಕಳದಲ್ಲಿ ನಡೆದ ಪಂಜಿನ ಮೆರವಣಿಗೆ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪುನೀತ್ ಅತ್ತಾವರ, ‘ಬ್ಯಾರಿ(ಕರಾವಳಿಯ ಮುಸಲ್ಮಾನರು) ಯಾವ ಕೈಯಿಂದ ಗೋಮಾತೆಯನ್ನು ಕಡಿಯುತ್ತಾನೋ, ಅವನ ದೇಹದಿಂದ ಅದೇ ಕೈಯನ್ನು ಬೇರ್ಪಡಿಸುವ ಸಂಕಲ್ಪ ತೊಡಬೇಕು’ ಎಂದು ಪ್ರಚೋದನಕಾರಿ ಹೇಳಿದ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು.
ಪುನೀತ್ ಅತ್ತಾವರ ಅವರ ಭಾಷಣದ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮ ಮತ್ತು ವಾಟ್ಸ್ಆ್ಯಪ್ನಲ್ಲಿ ಹರಿದಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ತಕ್ಷಣ, ಪೊಲೀಸರು ಕ್ರಮ ಕೈಗೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.