ಒಂದೇ ಕ್ಲಿಕ್‌ನಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಪ್ರಾಧ್ಯಾಪಕರೊಬ್ಬರು ಬರೋಬ್ಬರಿ 12.70 ಲಕ್ಷ ರೂ. ಕಳೆದುಕೊಂಡ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆಮಿಷಗಳಿಗೆ ಒಳಗಾಗಿ ಹಣ ಕಳೆದುಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಿದೆ. ಅದರಲ್ಲೂ ವಿದ್ಯಾವಂತರೇ ಹೆಚ್ಚಾಗಿ ಇಂತಹ ಜಾಲಕ್ಕೆ ಬಲಿಯಾಗುತ್ತಿದ್ದಾರೆ. ಈ ಪ್ರಾಧ್ಯಾಪಕರು ಕೂಡಾ ಹೆಚ್ಚು ಲಾಭ ಗಳಿಸುವ ಆಸೆಯಲ್ಲಿ ತಮ್ಮ ಉಳಿತಾಯವನ್ನು ಕಳೆದುಕೊಂಡಿದ್ದಾರೆ.
ಖಾಸಗಿ ಬ್ಯಾಂಕ್ ಒಂದರ ಆನ್‌ಲೈನ್ ಸೇವೆಯ ಲಿಂಕ್ ಹೆಸರಿನಲ್ಲಿ ಅಪರಿಚಿತ ವಾಟ್ಸಾಪ್ ಸಂಖ್ಯೆಯಿಂದ ಸಂದೇಶವೊಂದು ಬಂದಿದ್ದು ರಾಮನಗರದ ಪ್ರಾಧ್ಯಾಪಕರೊಬ್ಬರು ಈ ಲಿಂಕ್ ಅನ್ನು ಕ್ಲಿಕ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಮದುವೆಯಾಗುವುದಾಗಿ ಅತ್ಯಾಚಾರ, ವಂಚನೆ: ಶಿವಮೊಗ್ಗದ ಬಿಜೆಪಿ ಮಾಧ್ಯಮ ಪ್ರಮುಖ್ ಶರತ್ ವಿರುದ್ಧ ಪ್ರಕರಣ ದಾಖಲು
ಈ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ಬ್ಲಾಕ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಶೇಕಡ 5-6ರಷ್ಟು ಲಾಭ ಪಡೆಯಲು ಸಾಧ್ಯವಿದೆ ಎಂಬ ಸಂದೇಶ ಕಾಣಿಸಿಕೊಂಡಿದೆ. ಪ್ರಾಧ್ಯಾಪಕರು ಲಾಭ ಸಿಗುವ ನಿರೀಕ್ಷೆಯಲ್ಲಿ ಅರ್ಜಿ ಭರ್ತಿ ಮಾಡಿ ಅದರಲ್ಲಿ ತಮ್ಮ ಬ್ಯಾಂಕ್ ಖಾತೆ ವಿವರವನ್ನೂ ಸೇರಿಸಿದ್ದಾರೆ.
ಅದಾದ ಬಳಿಕ ವಂಚಕರು ಅಧಿಕ ಹೂಡಿಕೆ ಮಾಡಿದರೆ ಅಧಿಕ ಲಾಭ ಬರುತ್ತದೆ ಎಂದು ಹೇಳಿದ್ದು, ಪ್ರಾಧ್ಯಾಪಕರು ವಿವಿಧ ಬ್ಯಾಂಕ್ ಖಾತೆಗೆ ಜುಲೈ 4ರಿಂದ ಆಗಸ್ಟ್ 6ರವರೆಗೆ ಬರೋಬ್ಬರಿ 12,69,101 ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಯಿಂದ ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ.
ಅದಾದ ಬಳಿಕ ಅಸಲು ಬಡ್ಡಿ ಎರಡೂ ಬರದಿದ್ದಾಗ ತಾನು ಮೋಸ ಹೋಗಿರುವುದು ಅರಿತ ಪ್ರಾಧ್ಯಾಪಕರು ರಾಮನಗರ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಅದೆಲ್ಲ ಸೇರಿದರೆ ಎಷ್ಟು ಕ್ಲಿಕ್ ಆಗುತ್ತದೆ? ಯಾಕೆ ಒಂದೇ ಕ್ಲಿಕ್ ಎಂದು ಬೇರೆಯವರ ತಲೆ ಕೆಡಿಸುತ್ತಿದ್ದೀರ?
ಬೆಸ್ಕಾಂ, ನೀರಿನ ಬಿಲ್ ಇತ್ಯಾದಿಗಳಿಗೇ ಹಣ ಕಟ್ಟುವಾಗ ಒಂದಲ್ಲಾ, ಎರಡು ಸಲ ಪರಿಶೀಲಿಸಿ ಕ್ಲಿಕ್ ಮಾಡುತ್ತೇವೆ.
ಅತಿಯಾಸೆ ಗತಿಗೇಡು ಅಷ್ಟೇ!
ಇಷ್ಟೊಂದು ಅಕ್ರಮಗಳು ನಡೆದರೂ ಯರನ್ನೂ ಯಾಕೆ ಬಂದಿಸುತ್ತಿಲ್ಲ, ಅವರ ಬ್ಯಾಂಕ್ ಖಾತೆಯಲ್ಲಿ, ಮೊಬೈಲ್ ದಾಖಲಾತಿಯಲ್ಲಿ ಮೋಸಗಾರರ ವಿವರ ಸಿಗುತ್ತದೆ ದಾಖಲಾತಿ ಇಲ್ಲದೆ ಮಾಡಿದಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ, ಕ್ರೈಂ ಬ್ರಾಂಚ್ ಒಂದು waste body ಯೇ? ಅಂತ ಸಂಶಯ ಬರುತ್ತಿದೆ