ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾಗಿದ್ದ ಹನೂರು ವಿಧಾನಸಭಾ ಕ್ಷೇತ್ರದ ತೆಳ್ಳನೂರು ಗ್ರಾಮದ ಮುಖಂಡನ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದಲ್ಲಿ ದ್ವೇಷ ರಾಜಕಾರಣ ಆರಂಭವಾಗಿದ್ದು, ರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರು ಬೆಳಗಾಗುವುದರೊಳಗೆ ಸುಟ್ಟು ಭಸ್ಮವಾಗಿದೆ. ಇದು ರಾಜಕೀಯ ದ್ವೇಷದಿಂದ ನಡೆಸಿರುವ ಕೃತ್ಯ ಎಂಬ ಆರೋಪ ಕೇಳಿ ಬಂದಿದೆ.
ಘಟನಾ ಸ್ಥಳಕ್ಕೆ ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ಭೇಟಿ ನೀಡಿದ್ದು, ಕಾರಿಗೆ ಬೆಂಕಿ ಹಚ್ಚಿರುವ ಕೃತ್ಯವನ್ನು ಕಂಡು ನೊಂದ ಅವರು ಕಣ್ಣೀರು ಹಾಕಿದ್ದಾರೆ. ಏಪ್ರಿಲ್ 22ರ ರಾತ್ರಿ ಕಿಡಿಗೇಡಿಗಳು ಕಾರಿಗೆ ಬೆಂಕಿ ಹಚ್ಚಿದ್ದು, ಕಾರು ಸಂಪೂರ್ಣ ಸುಟ್ಟು ಹೋಗಿದೆ.
ಈ ಸುದ್ದಿ ಓದಿದ್ದೀರಾ? ಸಚಿವ ವಿ ಸೋಮಣ್ಣ ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಿದ್ದು ಸರಿಯಲ್ಲ : ಸಿದ್ದರಾಮಯ್ಯ