- ಸ್ಲಂ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಪಾಲು ನಿಗದಿಗೊಳಿಸಬೇಕು.
- ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ
ವಿಧಾನಸಭಾ ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ಸ್ಲಂ ನಿವಾಸಿಗಳಿಗೆ ನೀಡಿದ ಭರವಸೆಯನ್ನು ಈಡೇರಿಸಬೇಕೆಂದು ಒತ್ತಾಯಿಸಿ ರಾಯಚೂರು ಜಿಲ್ಲಾ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಮುಖಂಡರು ಒತ್ತಾಯಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿ ಮಾತನಾಡಿದ ಅವರು, “ನಗರ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು. ಕರ್ನಾಟಕ ಸಮಗ್ರ ಸ್ಲಂ ಅಭಿವೃದ್ದಿ ಕಾಯ್ದೆ 2018ರ ಕರಡು ಜಾರಿಗೊಳಿಸಬೇಕು. ವಸತಿ ಹಕ್ಕು ಕಾಯ್ದೆ ಜಾರಿಗೊಳಿಸಬೇಕೆಂದು” ಆಗ್ರಹಿಸಿದರು.
“ಸ್ಲಂ ನಿವಾಸಿಗಳ ಜನಸಂಖೈಗೆ ಅನುಗುಣವಾಗಿ ಬಜೆಟ್‌ನಲ್ಲಿ ಪಾಲು ನಿಗದಿಗೊಳಿಸಬೇಕು. ಸ್ಲಂ ನಿವಾಸಿಗಳಿಗೆ ಭೂ ಒಡೆತನ ನೀಡಬೇಕು. ನಗರ ಲ್ಯಾಂಡ್ ಬ್ಯಾಂಕ್ ಯೋಜನೆ ಜಾರಿಗೊಳಿಸಬೇಕು. ಸರ್ಕಾರ ಅಥವಾ ಸ್ಲಂ ಜನರೇ ವಸತಿ ನಿರ್ಮಾಣ ಮಾಡುವ ಸಿಎಂ ಹೌಸಿಂಗ್ ಜಾರಿಗೊಳಿಸಬೇಕು. ಸ್ಲಂ ನಿವಾಸಿಗಳ ಪ್ರತ್ಯೇಕ ಸಚಿವಾಲಯ ರಚಿಸಬೇಕು. ಸ್ಲಂ ನಿವಾಸಿಗಳ ಅಭಿವೃದ್ದಿಗೆ ನಿಗಮ ಮಂಡಳಿ ಸ್ಥಾಪಿಸಬೇಕೆಂದು” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ ? ಯಾವುದೇ ಕಾರಣಕ್ಕೂ ಕೇಂದ್ರ ಸ್ಥಾನ ಬಿಡದಿರಿ; ಅಧಿಕಾರಿಗಳಿಗೆ ಶಾಸಕಿ ಕರೆಮ್ಮ ಸೂಚನೆ
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಕಾರ್ಯದರ್ಶಿ ನೂರ್‌ಜಾನ್, ಮುಖಂಡರಾದ ಬಸವರಾಜ, ರಾಜಶೇಖರ್, ಮಹೇಶ, ಮಾಧವರೆಡ್ಡಿ, ವಿರೇಶ ಕೇಬಲ್ ಆಪರೇಟರ್, ಜಂಬಣ್ಣ ಡೊಕ್ಕ, ಫಕೃದ್ದೀನ್, ಜಿ.ರಾಜು, ನಾಗರಾಜ ಪೋತಗಲ್ ಸೇರಿದಂತೆ ಅನೇಕರಿದ್ದರು.
ವರದಿ : ಹಫೀಜುಲ್ಲಾ, ಸಿಟಿಜನ್ ಜರ್ನಲಿಸ್ಟ್