ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟಿಸ್ ಲಿಮಿಟೆಡ್‌ನ ಪರವಾಗಿ ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂದು ಕೋಟಿ ರೂಪಾಯಿ ಮೊತ್ತದ ಡಿವಿಡೆಂಡ್ ಚೆಕ್ ಅನ್ನು ಸಲ್ಲಿಸಿದರು.
ಅಧ್ಯಕ್ಷರಾದ ಎಸ್.ಮನೋಹರ್, ಇಂಧನ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಅನಿತಾ.ಸಿ ಅವರು ಸಂಸ್ಥೆಯ ಡಿವಿಡೆಂಡ್ ಚೆಕ್ ನೀಡಿದರು.
ಎಂಇಐ ದೇಶದ ಮೊದಲ ಸ್ವಿಚ್ ಗೇರ್ ಉತ್ಪಾದನಾ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದ್ದು, ಈ ಸಂಸ್ಥೆಯಲ್ಲಿ ಸುಮಾರು 400ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

2023-2024 ಹಣಕಾಸಿನ ಸಾಲಿನಲ್ಲಿ ಮೂರು ಕೋಟಿ ರೂ.ಗಳಷ್ಟು ನಷ್ಟಕ್ಕೆ ಸಿಲುಕಿದ್ದ ಎಂಇಐ ಸಂಸ್ಥೆಯನ್ನು ಅಧ್ಯಕ್ಷರಾದ ಎಸ್.ಮನೋಹರ್ ಅವರು ಇಂಧನ ಸಚಿವರಾದ ಕೆ.ಜೆ ಜಾರ್ಜ್ ರವರ ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ ಗುಪ್ತರವರ ಮಾರ್ಗದರ್ಶನದೊಂದಿಗೆ ಕಂಪನಿಯ ಎಲ್ಲಾ ಅಧಿಕಾರಿಗಳು ಹಾಗೂ ನೌಕರರ ಸಹಕಾರದೊಂದಿಗೆ 2024-2025 ಹಣಕಾಸಿನ ಸಾಲಿನಲ್ಲಿ 18.66 ಕೋಟಿ ರೂಪಾಯಿಗಳಿಗೂ ಅಧಿಕ ಲಾಭ ಗಳಿಸಿದೆ.
ಇದನ್ನು ಓದಿದ್ದೀರಾ? ಕುಡುಪು ಘಟನೆ | ಇದೇ ಕಟ್ಟಕಡೆಯ ಗುಂಪು ಹತ್ಯೆಯಾಗಬೇಕು: ಸಂತ್ರಸ್ತ ಅಶ್ರಫ್ ಸಹೋದರ ಜಬ್ಬಾರ್
ಸರ್ಕಾರಕ್ಕೆ ಕಂಪನಿಯ ಡಿವಿಡೆಂಡ್ ಚೆಕ್ ಸಲ್ಲಿಸಿದ್ದಕ್ಕೆ ಸಂಸ್ಥೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಶ್ಲಾಘಿಸಿದರು.