ಕೃಷಿ ಬೆಲೆ ಆಯೋಗದ ಅವಧಿ ಮತ್ತೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

Date:

Advertisements
  • ಲಾಭದಾಯಕ ಬೆಲೆ ಮತ್ತು ಉತ್ತಮ ಮಾರುಕಟ್ಟೆ ಕಲ್ಪಿಸಲು ರಚಿತವಾಗಿರುವ ಆಯೋಗ
  • 2026ರ ಜೂನ್​ 25ರವರೆಗೆ ಮತ್ತೆ ಮೂರು ವರ್ಷಗಳ ಅವಧಿಯವರೆಗೆ ವಿಸ್ತರಣೆ

ಕರ್ನಾಟಕ ಕೃಷಿ ಬೆಲೆ ಆಯೋಗವನ್ನು ನಾಲ್ಕನೇ ಅವಧಿಗೆ ಮುಂದುವರಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಕೃಷಿ ಅಭಿವೃದ್ಧಿಗೆ ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಮತ್ತು ಉತ್ತಮ ಮಾರುಕಟ್ಟೆ ಕಲ್ಪಿಸಲು ರಚಿತವಾಗಿರುವ ಈ ಆಯೋಗದ ಅವಧಿಯನ್ನು ಇನ್ನೊಂದು ಅವಧಿಗೆ ಮುಂದುವರಿಸಲಾಗಿದೆ.

ಕಳೆದ ಫೆಬ್ರವರಿ 10ರಂದು ನಡೆದ ಆಯೋಗದ 27ನೇ ಸಭೆಯಲ್ಲಿ ಸಲ್ಲಿಸಲಾಗಿದ್ದ ಕೃಷಿ ಆಯುಕ್ತರ ಪ್ರಸ್ತಾವನೆಯಂತೆ ಪ್ರಸಕ್ತ ವರ್ಷದ ಜೂನ್​ 25ಕ್ಕೆ ಆಯೋಗದ ಅವಧಿ ಮುಗಿದಿದ್ದು, ಅದೇ ತಿಂಗಳ 26ರಿಂದ 2026ರ ಜೂನ್​ 25ರವರೆಗೆ ಮತ್ತೆ ಮೂರು ವರ್ಷಗಳ ಅವಧಿಯವರೆಗೆ ವಿಸ್ತರಿಸಲಾಗಿದೆ.

Advertisements

ಆಯೋಗದ ಅಧ್ಯಕ್ಷರು ಹಾಗೂ ಸರ್ಕಾರದ ಕಾರ್ಯದರ್ಶಿ, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಈ ತೀರ್ಮಾನ ಹೊರಬಿದ್ದಿದೆ.

ಸಾಮಾನ್ಯವಾಗಿ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ಕೆಲವೊಮ್ಮೆ ಸಂಕಷ್ಟಕ್ಕೀಡಾಗುತ್ತಾರೆ. ಅನೇಕ ವೇಳೆ ಕೃಷಿಗೆ ಅವರು ತೊಡಗಿಸಿದ ಹಣವೂ ದಕ್ಕುವುದಿಲ್ಲ. ಖರ್ಚು ಕೂಡ ಸಿಗುವುದಿಲ್ಲ. ಹೀಗಾಗಿ ರೈತರ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಗೊಳಿಸಲು ಈ ಕೃಷಿ ಬೆಲೆ ಆಯೋಗವನ್ನು ರಚಿಸಲಾಗಿದೆ.

WhatsApp Image 2023 07 25 at 2.27.28 PM

ಈ ಆಯೋಗವು ರೈತರು, ಕೃಷಿ ತಜ್ಞರು ಹಾಗೂ ಆರ್ಥಿಕ ತಜ್ಞರನ್ನು ಒಳಗೊಂಡಿದ್ದು, ರೈತರು ಬೆಳೆದ ಬೆಳೆಗಳಿಗೆ ಯಾವ ಬೆಲೆ ನಿಗದಿಗೊಳಿಸಬೇಕೆಂಬುದರ ಕುರಿತು ವೈಜ್ಞಾನಿಕವಾಗಿ ಪರಾಮರ್ಶಿಸಲಿದೆ. ಬಳಿಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ಸರ್ಕಾರದಿಂದ ಸೂಕ್ತ ಬೆಲೆ ನಿಗದಿಪಡಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ.

ಕೃಷಿ ಆಯೋಗವು ರೈತರು, ರೈತ ಮುಖಂಡರು, ತಜ್ಞರು, ಸ್ವಯಂಸೇವಾ ಸಂಸ್ಥೆಗಳು, ವಿವಿಧ ಇಲಾಖೆಗಳ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಸತತ ಸಂವಾದ ನಡೆಸುತ್ತಿದೆ. ಇವರೆಲ್ಲರ ಜೊತೆ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ, ಗೋಷ್ಠಿಗಳ ಮೂಲಕ ರೈತ ಸಮುದಾಯ ಮತ್ತು ಸರ್ಕಾರದ ನಡುವೆ ಉತ್ತಮ ಸಾಮರಸ್ಯ ಮೂಡಿಸುತ್ತಿದೆ.

ಇನ್ನು ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕಾಗಿ ಸಾಮೂಹಿಕ ಚೌಕಾಶಿ ಸಾಮರ್ಥ್ಯ ಹೆಚ್ಚಿಸುವುದು, ಮಾರುಕಟ್ಟೆ ಸುಧಾರಣೆ, ಬೆಳೆವಿಮೆ, ಇ-ವ್ಯವಹಾರದ ಮೂಲಕ ಕೃಷಿ ಸಮುದಾಯದ ಎಲ್ಲಾ ವರ್ಗ ಮತ್ತು ಪ್ರದೇಶಗಳ ಹಿತ ಕಾಪಾಡುವುದು ಆಯೋಗದ ಮುಖ್ಯ ಉದ್ದೇಶ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ರೈತರ ಶ್ರೇಯೋಭಿವೃದ್ಧಿಗಾಗಿ ಹಾಗೂ ಕೃಷಿ ಇಲಾಖೆಯ ಪ್ರಗತಿಗಾಗಿ ಜುಲೈ 7ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಅನುಮತಿ ಪಡೆಯುವ ಮೂಲಕ ಕೃಷಿ ಇಲಾಖೆಯ ಆಯುಕ್ತರು ಸಲ್ಲಿಸಿದ್ದ ಪ್ರಸ್ತಾವನೆಯನ್ನ ಪರಿಗಣಿಸಿ ಕೃಷಿ ಬೆಲೆ ಆಯೋಗದ ಅವಧಿಯನ್ನು ಮತ್ತೆ ಮೂರು ವರ್ಷಗಳಿಗೆ (2026ರವರೆಗೆ) ವಿಸ್ತರಿಸಲಾಗಿದೆ.

ಆಯೋಗದ ಬಗ್ಗೆ

  • ಕೃಷಿ ಅರ್ಥಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಕೃಷಿ ತಜ್ಞರ ಅಧ್ಯಕ್ಷತೆ
  • ಐವರು ಸದಸ್ಯರು, ಇವರಲ್ಲಿ ಸರ್ಕಾರದಿಂದ ಒಬ್ಬ ಸದಸ್ಯ, ಕಾರ್ಯದರ್ಶಿ
  • ಐವರು ಸದಸ್ಯರಲ್ಲಿ ಇಬ್ಬರು ಕೃಷಿ ಮಾರಾಟ, ನಿರ್ವಹಣೆ ತಜ್ಞರಾಗಿರುತ್ತಾರೆ
  • ಪ್ರಗತಿಪರ ರೈತರೊಬ್ಬರ ಜೊತೆ ಕೃಷಿ ಉತ್ಪನ್ನ ಮಾರಾಟ ಅನುಭವ ಉಳ್ಳ ವ್ಯಕ್ತಿ
  • ವಿವಿಧ ಇಲಾಖೆ, ತೋಟಗಾರಿಕೆಯಿಂದ ಇತರೆ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ
  • ಕೃಷಿ ಬೆಲೆ, ಮಾರುಕಟ್ಟೆ, ವ್ಯಾಪಾರದ ತಜ್ಞರು, ವೃತ್ತಿಪರರೂ ಇದ್ದಾರೆ

ಆಯೋಗದ ಉದ್ದೇಶ

  • ಕೃಷಿ ಅಭಿವೃದ್ಧಿ ಮೂಲಕ ಸ್ವಾವಲಂಬಿ ಕರ್ನಾಟಕ ನಿರ್ಮಾಣದ ಉದ್ದೇಶ
  • ಸಮಗ್ರ ಕೃಷಿ, ನೀರಾವರಿ, ಸಾಲ, ಬೆಲೆ, ಮಾರುಕಟ್ಟೆ ನೀತಿ ಅಧ್ಯಯನ, ವರದಿ ಸಲ್ಲಿಸೋದು
  • ರಾಷ್ಟ್ರದ ಆಹಾರ ಭದ್ರತೆ ಗಮನದಲ್ಲಿಟ್ಟುಕೊಂಡು ರಫ್ತು, ಆಮದುಗಳ ಸಮಗ್ರ ಅಧ್ಯಯನ
  • ಬೆಳೆ ಉತ್ಪಾದನೆ ಮತ್ತು ಬೆಲೆ ಮುನ್ನಂದಾಜು ಮಾಹಿತಿಯನ್ನು ನೀಡುವುದು
  • ಕೇಂದ್ರ ಸರ್ಕಾರ ಘೋಷಿತ ಬೆಲೆ, ಮಾರುಕಟ್ಟೆ ಬೆಲೆ ವ್ಯತ್ಯಾಸ ಕಂಡುಹಿಡಿಯುವುದು
  • ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸಿ ಅನ್ಯಾಯವಾಗದಂತೆ ನೋಡಿಕೊಳ್ಳುವುದು
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

ಮೈಸೂರು | ಜಿ ಟಿ ದೇವೇಗೌಡರ ದಲಿತ ವಿರೋಧಿ ಹೇಳಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟದ ವಿದ್ಯಾರ್ಥಿಗಳು...

Download Eedina App Android / iOS

X