ಕಾರಿನ ಗಾಜು ಪುಡಿ ಪುಡಿ ಮಾಡಿ ಹಣ ದೋಚಿ ಪರಾರಿಯಾಗಿದ್ದ ಖತರ್ನಾಕ್ ಕಳ್ಳನನ್ನು ಚಿಂತಾಮಣಿ ನಗರ ಠಾಣೆ ಪೊಲೀಸರು ಬಂಧಿಸಿದ್ದು, ಬಂಧಿತನಿಂದ 1 ಲಕ್ಷ, 80 ಸಾವಿರ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ ಸಂದೀಪ್ ಬಾಬು ಬೋವಿ(19) ಅಲಿಯಾಸ್ ವೆಂಕಟೇಶ್ ಬಂಧಿತ ಆರೋಪಿ.

ಆರೋಪಿ ಸಂದೀಪ್ ಇದೇ ಜುಲೈ 15 ರಂದು ನಗರ ಠಾಣೆ ಸರಹದ್ದಿನ ಸುಣ್ಣಶೆಟ್ಟಿಹಳ್ಳಿ ಬಡಾವಣೆಯ ಯಜ್ಞವಲ್ಕ್ಯ ದೇವಾಲಯದ ಬಳಿ ನಿಲ್ಲಿಸಿದ್ದ ಕಾರಿನ ಗಾಜನ್ನು ಒಡೆದು ಕಾರಿನಲ್ಲಿ ಇಟ್ಟಿದ್ದ ನಗದು ಹಣವನ್ನು ದೋಚಿ ಪರಾರಿಯಾಗಿದ್ದ.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ : ಪಾಳು ಬಿದ್ದ ಪೂಲವಾರಪಲ್ಲಿ ಸರಕಾರಿ ಶಾಲೆ; ಹೇಳೋರಿಲ್ಲ, ಕೇಳೋರಿಲ್ಲ
ಕಳ್ಳನ ಪತ್ತೆಗಾಗಿ ಎಸ್ಪಿ ಕುಶಾಲ್ ಚೌಕ್ಸೆ, ಎಎಸ್ಪಿ ರಾಜಾ ಇಮಾಮ್ ಖಾಸಿಂ, ಚಿಂತಾಮಣಿ ಉಪವಿಭಾಗದ ಡಿವೈ.ಎಸ್.ಪಿ ಮುರಳೀಧರ ಮಾರ್ಗದರ್ಶನದಂತೆ ಚಿಂತಾಮಣಿ ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಮಹಾರಷ್ಟ್ರದ ಔರಂಗಬಾದ್‌ನ ವೈಜಾಪುರ್‌ನಲ್ಲಿ ಕಳ್ಳನನ್ನು ಎಡೆಮುರಿಕಟ್ಟಿದ್ದಾರೆ.