ತಿಪಟೂರು | ವಿದ್ಯಾರ್ಥಿಗಳಿಗೆ ಏಕಾಗ್ರತೆ ಶ್ರದ್ಧೆ ಅರಿವು ಬಹಳ ಮುಖ್ಯ: ಗುರುಕುಲ ಶ್ರೀ

Date:

Advertisements

 ವಿದ್ಯಾರ್ಥಿಗಳಿಗೆ ಏಕಾಗ್ರತೆ ಶ್ರದ್ಧೆ ಅರಿವು ಬಹಳ ಮುಖ್ಯವಾದದ್ದು ಇದನ್ನು ಯಾರು ಪಾಲಿಸುತ್ತಾರೋ ಅವರು ಉನ್ನತ ಮಟ್ಟಕ್ಕೆ ಏರಲು ಸಾಧ್ಯ ಎಂದು ಗುರುಕುಲ ಮಠದ ಶ್ರೀ ಇಮ್ಮಡಿ ಕರಿಬಸವದೇಶಿ ಕೇಂದ್ರ ಮಹಾ ಸ್ವಾಮೀಜಿಗಳು ತಿಳಿಸಿದರು.

 ತಿಪಟೂರು ನಗರದ ಶ್ರೀ ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಜ್ಞಾನಕ್ಕಿಂತ ಮೀಗಿಲಾಗಿದ್ದು ಜಗತ್ತಿನಲ್ಲಿ ಯಾವುದು ಇಲ್ಲ. ಜ್ಞಾನ ಬಹಳ ಮುಖ್ಯವಾದದ್ದು ಜ್ಞಾನ ಇಲ್ಲದೆ ಇದ್ದರೆ ಬದುಕಿಗೆ ಬೆಲೆ ಇಲ್ಲ. ಶಿಕ್ಷಣದಲ್ಲಿ ಎರಡು ವಿಧಗಳನ್ನು ಕಾಣುತ್ತೇವೆ ಒಂದು ಲೌಕಿಕ, ಇನ್ನೊಂದು ಆಧ್ಯಾತ್ಮಿಕ ಶಿಕ್ಷಣ. ಈ ಎರಡು ಶಿಕ್ಷಣಗಳು ಜೀವನದಲ್ಲಿ ಬಹಳ ಮುಖ್ಯ. ಪ್ರಸ್ತುತ  ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಂಗ್ರಹಣೆಗೆ ಒತ್ತು ನೀಡಬೇಕು. ನಿಜವಾದ ತಪಸ್ಸು ಎಂದರೆ ಶ್ರದ್ಧೆ, ಏಕಾಗ್ರತೆ, ಹರಿವು, ಬಹಳ ಮುಖ್ಯವಾದದ್ದು, ಶಿಸ್ತನ್ನು ಯಾರು ಪಾಲಿಸುತ್ತಾರೋ ಅವರ ಶಿಕ್ಷಕರು ಅವರ ಜೊತೆಯಲ್ಲೇ ಇರುತ್ತಾರೆ ಗುರು ಹಿರಿಯರಿಗೆ ಗೌರವ ಕೊಡುವುದು ನಿಮ್ಮ ತಂದೆ ತಾಯಿಗಳಿಗು ಗೌರವ ಬರುತ್ತದೆ ಶಿಸ್ತಿಗೆ ಚುತಿ ಬಾರದಂತೆ ನಡೆದುಕೊಳ್ಳಬೇಕು ಏಕಾಗ್ರತೆಯಿಂದ ಮಾತ್ರ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಹಿತವಚವನ್ನು ನೀಡಿದರು.

 ತುಮಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಕಂಚಿರಾಯಪ್ಪ ಮಾತನಾಡಿ  ಇಂದಿನ ಶೈಕ್ಷಣಿಕ ವಾತಾವರಣ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಯಾಂತ್ರಿಕೃತವಾಗಿದೆ. ಅನೇಕ ಮಾಧ್ಯಮಗಳು ಶಿಕ್ಷಣದ ಮಹತ್ವ ಇಂದು ಕಡಿಮೆ ಆಗುತ್ತಿದೆ. ಅಂಥ ವರದಿಗಳನ್ನು ನಾವು ನೀವೆಲ್ಲರೂ ಗಮನಿಸುತ್ತಿದ್ದೇವೆ. ಇಂದಿನ ವಿದ್ಯಾರ್ಥಿಗಳು ಅಕ್ಷರ ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ. ಮೊಬೈಲಿನ ದಾಸರಾಗಿದ್ದು ಸಾಮಾಜಿಕ ಜಾಲತಾಣಗಳ ದಾಸರಾಗಿದ್ದು ವಿದ್ಯಾರ್ಥಿಗಳ ಮನಸ್ಥಿತಿ ಬದಲಾವಣೆ ಆಗಬೇಕು ಯಶಸ್ಸಿನ ಮೆಟ್ಟಿಲು ಹತ್ತಿ ಗುರಿ ಮುಟ್ಟಬೇಕು. ಆಗ ಮಾತ್ರ ವಿದ್ಯಾರ್ಥಿಗಳು ನಿಮ್ಮ ತಂದೆ ತಾಯಿಗಳಿಗೆ ಹಾಗೂ ನಿಮ್ಮ ಗುರು ಹಿರಿಯರಿಗೆ ಸಂದ ಗೌರವವಾಗುತ್ತದೆ ಎಂದು ತಿಳಿಸಿದರು.

Advertisements

 ಕಾರ್ಯಕ್ರಮದಲ್ಲಿ ಶ್ರೀ ಗುರುಕುಲ ವಿದ್ಯಾಸಂಸ್ಥೆಯ ಶೈಕ್ಷಣಿಕ ಸಂಯೋಜನಾಧಿಕಾರಿ ಮಹಾಲಿಂಗಯ್ಯ ವಿ ಬಿ, ಪ್ರಾಂಶುಪಾಲರಾದ ಮಹೇಶಯ್ಯ ಎಸ್, ಹಿರಿಯ ಉಪನ್ಯಾಸಕರಾದ ಕೆಂಪಯ್ಯ, ರುದ್ರಸ್ವಾಮಿ, ಕವಿತಾ, ಉಷಾ, ಕುಸುಮ, ಯೋಗಾನಂದ, ಸಿದ್ದೇಶ್, ರಾಜೇಶ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ – ಮಿಥುನ್ ತಿಪಟೂರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

ಮಂಗಳೂರು | ನ್ಯಾಯಬೆಲೆ ಅಂಗಡಿಯಲ್ಲಿ ‘ಗೋಣಿಚೀಲ’ಕ್ಕಾಗಿ ಜಗಳ: ಮಹಿಳೆಯ ವಿಡಿಯೋ ಮಾಡಿ ತೇಜೋವಧೆಗೆ ಯತ್ನ!

ನ್ಯಾಯಬೆಲೆ ಅಂಗಡಿಯಲ್ಲಿ 'ಗೋಣಿಚೀಲ' ನೀಡುವಂತೆ ಪಟ್ಟು ಹಿಡಿದದ್ದಲ್ಲದೇ, ಗ್ರಾಹಕನೋರ್ವ ನ್ಯಾಯಬೆಲೆ ಅಂಗಡಿಯವರ...

Download Eedina App Android / iOS

X