ತೀರ್ಥಹಳ್ಳಿ | ಹೊಸೂರಿನ, ಕಡು ಬಡ ವಿದ್ಯಾರ್ಥಿಯ ಉನ್ನತ ವ್ಯಾಸಂಗಕ್ಕೆ : ಕ್ವೆಸ್ ಫೌಂಡೇಶನ್ ನಿಂದ್ ಆರ್ಥಿಕ ನೆರವು

Date:

Advertisements

ತೀರ್ಥಹಳ್ಳಿ ತಾಲೂಕಿನ ಹೊಸೂರು ಗುಡ್ಡೇಕೇರಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಬಡ ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸಕ್ಕೆ ಕ್ವೆಸ್ ಫೌಂಡೇಶನ್ ನೆರವು ನೀಡಿರುವುದಾಗಿ ತಿಳಿದುಬಂದಿದೆ. ಈ ಕುರಿತಾಗಿ ಹೊಸೂರು ಗುಡ್ಡೇಕೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಯ ಮುಖ್ಯ ಶಿಕ್ಷಕರಾದ ಮಂಜು ಬಾಬು ನಮ್ಮ ಈದಿನ ಡಾಟ್ ಕಾಮ್ ಗೆ, ಈ ಕೆಳಕಂಡ ಮಾಹಿತಿ ನೀಡಿದರು.

ತೀರ್ಥಹಳ್ಳಿ ತಾಲ್ಲೂಕು ಹೊಸೂರು ಗ್ರಾಮದ ಬ್ರಾಹ್ಮಣ ಸಮುದಾಯದ ಶ್ರೀಮತಿ ಲಲಿತಾ ಭಟ್ ಹಾಗೂ ಸದಾಶಿವ ಭಟ್ ಅವರು ಸುಪುತ್ರ. ಪೋಷಕರು ಹೊಸೂರು ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಅರ್ಚಕರು.ದೇವಸ್ಥಾನದ ಪೂಜೆ ಕೈಂಕರ್ಯ ಅರ್ಚಕರ ವೃತ್ತಿ ಹೊರತು ಪಡಿಸಿ ಮತ್ತೇನು ತೋಟ ಜಮೀನು ಇಲ್ಲ, ಗದ್ದೆ ಯಾವದು ಇಲ್ಲ. ಯಾವುದೇ ಲಾಭದಾಯಕ ಆರ್ಥಿಕ ಮೂಲಗಳು ಇಲ್ಲ.

ಇಂತಹ ಹಿನ್ನಲೆಯಲ್ಲಿರುವ ವಿದ್ಯಾರ್ಥಿ ಶ್ರೀರಾಮ್ ಭಟ್. ಪ್ರತಿಭಾವಂತ ವಿದ್ಯಾರ್ಥಿಯಾದ ಇವರು, ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡ್ಡೇಕೇರಿ ಹಾಗೂ ಪ್ರೌಢ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಹೊಸೂರು ಗುಡ್ಡೇಕೇರಿ ಇಲ್ಲಿ ವಿದ್ಯಾಭ್ಯಾಸ ಮಾಡಿ ಎಸ್ ಎಸ್ ಎಲ್ ಸಿ ಯಲ್ಲಿ 614 ಅಂಕ ಗಳಿಸಿ, ಸರ್ಕಾರದ ಗೌರವ ಪಡೆದ ವಿದ್ಯಾರ್ಥಿಯಾಗಿದ್ದರು.

Advertisements

ನಂತರ ರಾಷ್ಟ್ರೋತ್ಥಾನ ಬೆಂಗಳೂರು ನಡೆಸುವ, ತಪ್ಪಸ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು, ಎರಡು ವರ್ಷ ರಾಷ್ಟ್ರೋತ್ಥಾನದಲ್ಲಿ ಉಚಿತ PUC ಶಿಕ್ಷಣ ಪಡೆದಿದ್ದಾರೆ. ಹಾಗೂ IIT ಗೂ ಅರ್ಹತೆ ಪಡೆದಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೊಸೂರು ಗುಡ್ಡೆಕೇರಿ ಶಾಲೆಯ ಮುಖ್ಯ ಶಿಕ್ಷಕರಾದ ಮಂಜು ಬಾಬು ಅವರು ಹೆಮ್ಮೆಯ ಸಂಗತಿ ಎಂದರು.

ನಂತರ ಅಂತಿಮವಾಗಿ, ಬೆಂಗಳೂರಿನ BMS College ಬಸವನಗುಡಿ ಇಲ್ಲಿ AI Course ( Artificial Intelligence ) ಸೇರಿದ್ದಾಗಿ ತಿಳಿಸಿದ್ದಾರೆ.

1002020907

ಮುಂದುವರೆದು ನಮ್ಮೊಂದಿಗೆ ಮಾತನಾಡಿದ ಮಂಜು ಬಾಬು ಅವರು ನಮ್ಮ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ನಂತರವೂ ನಮ್ಮ ಶಿಕ್ಷಕರು ಮಕ್ಕಳ ಶಿಕ್ಷಣದ ಮೇಲೆ ನಿಗಾವಹಿಸಿ ಅವರ ಹಿಂದೆ ನಿಂತು, ಆರ್ಥಿಕವಾಗಿ ಬೆಂಬಲ ನೀಡುತ್ತಿರುವುದು ತಿಳಿದಿರುವ ವಿಷಯವೆಂದರು. ಶ್ರೀರಾಮ್ ಭಟ್ IIT ಗೆ ಅರ್ಹತೆ ಪಡೆದ ನಂತರ ವಿದ್ಯಾರ್ಥಿಯ ಆರ್ಥಿಕ ಹಿನ್ನಲೆ ಅರಿವಿದ್ದ ಕಾರಣ ಮುಖ್ಯ ಶಿಕ್ಷಕನಾದ ನಾನು, ಶಿಕ್ಷಕರ ಸಲಹೆ ಮೇರೆಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಲೋಚಿಸಿದ್ದೆ ಎಂದರು.

ಅನೇಕ ಗೊತ್ತಿರುವವರ ಹತ್ತಿರ ವಿದ್ಯಾರ್ಥಿಯ ವಿಚಾರ ಪ್ರಸ್ತಾಪಿಸಿದೆ, ವಿಶೇಷವಾಗಿ ನಮ್ಮ ಶಾಲೆಗೆ ತಾಯಿಯಂತೆ ನಮ್ಮ ಅಭಿವೃದ್ಧಿಯ ಬೆನ್ನಿಗೆ ನಿಂತಿರುವ ಬೆಂಗಳೂರಿನ Quess Corp ಕಂಪನಿ ಮತ್ತು ಅದರ ಮುಖ್ಯಸ್ಥರಾಗಿರುವ ಶ್ರೀಮತಿ ಸ್ಮಿತಾ ಮೇಡಂ ಅವರ ಗಮನಕ್ಕೆ ಈ ಮಾಹಿತಿ ತರಲಾಯಿತು ಎಂದರು.

ಸ್ಮಿತಾ ಅವರು ಶ್ರೀರಾಮ್ ಭಟ್ ವಿದ್ಯಾರ್ಥಿಯ ಆರ್ಥಿಕ ಹಿನ್ನಲೆಯ ಬಗ್ಗೆ ನಾನು ಕೊಟ್ಟ ವರದಿ ಗಮನಿಸಿ, ನೀವು ಮತ್ತು ನಿಮ್ಮ ಶಿಕ್ಷಕರ ಕೋರಿಕೆಯನ್ನು ಪರಿಗಣಿಸಿ, ಶ್ರೀರಾಮ್ ಭಟ್ ನ ಉನ್ನತ ವ್ಯಾಸಂಗಕ್ಕೆ ಬೇಕಾದ ಆರ್ಥಿಕ ಸಹಾಯವನ್ನು ಮಾಡುತ್ತೇವೆ ಅಂದಾಗ, ನಮಗೆ ಆದ ಆನಂದಕ್ಕೆ ಪಾರವೇ ಇಲ್ಲ ಎಂದರು.

IIT ಕೌನ್ಸಲಿಂಗ್ ಆರಂಭವಾದಾಗ, ಮೊದಲ ಹಂತದಲ್ಲಿ ₹30,000 ಸಾವಿರ ಹಣವನ್ನು ಶ್ರೀರಾಮ್ ಭಟ್ ನ ಅಕೌಂಟ್ ಗೆ ಕಂಪನಿಯಿಂದ ನೀಡಿದ್ದರು.ನಂತರ, ಮೊನ್ನೆ ಅಂತಿಮವಾಗಿ ಬೆಂಗಳೂರಿನ BMS ಕಾಲೇಜಿನ AI ಕೋರ್ಸ್ ಸೇರಿದಾಗ ಮೊದಲ ವರ್ಷದ ಶುಲ್ಕವನ್ನು 1,12,000₹ ( ಒಂದು ಲಕ್ಷದ ಹನ್ನೆರಡು ಸಾವಿರ ) ಕಾಲೇಜಿಗೆ Quess corp ಕಂಪನಿಯಿಂದ ನೀಡಿದ್ದಾರೆ ಎಂದರು.

ನಂತರ ಹಾಸ್ಟೆಲ್ ಸಂಬಂಧಿಸಿದ ವೆಚ್ಚವನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಒಂದು ವರ್ಷಕ್ಕೆ ಹತ್ತಿರ ಹತ್ತಿರ 2 ಲಕ್ಷ ತನಕ ಖರ್ಚು ವೆಚ್ಚ ಬರಬಹುದು, ನಾಲ್ಕು ವರ್ಷಕ್ಕೆ 7-8 ಲಕ್ಷ ವೆಚ್ಚ ಆಗಬಹುದು. ಒಂದು ಬಡ ಅಸಹಾಯಕ ಕುಟಂಬದ ಹಿನ್ನಲೆಯಲ್ಲಿ ಇರುವ ಶ್ರೀರಾಮ್ ಭಟ್ ನಂತಹ ಮಕ್ಕಳಿಗೆ ಇಂತಹ ಪ್ರೋತ್ಸಾಹಗಳು ಅಗತ್ಯವಾಗಿ ಬೇಕಾಗುತ್ತದೆ ಎಂದರು.”ಇಲ್ಲಿ ನಾನು ನೆಪ ಮಾತ್ರ ಅವನ ಸಮಸ್ಯೆಯನ್ನು ಗಮನಕ್ಕೆ ತಂದಾಗ, ಅದನ್ನು ಸ್ವೀಕಾರ ಮಾಡಿ ಶ್ರೀರಾಮ್ ಭಟ್ ನಂತಹ ಅತ್ಯಂತ ಪ್ರತಿಭಾವಂತ ಮಕ್ಕಳಿಗೆ 7-8 ಲಕ್ಷ ಹಣ ನೀಡುವ ಮನಸು ಮಾಡಿದ ಬೆಂಗಳೂರಿನ Quess Corp ಕಂಪನಿ ಮತ್ತು ಶ್ರೀಮತಿ ಸ್ಮಿತಾ ಮೇಡಂ ಮತ್ತು ತಂಡ ನಿಜವಾಗಿಯೂ ಕಾಣದ ದೇವರಗಿಂತ ಕಣ್ಣು ಮುಂದೆ ಇರುವ ನಿಜವಾದ ದೇವರಾಗಿ ಕಾಣುತ್ತಾರೆ ಎಂದರು”.

ಇಂತಹ ಅನೇಕ ಮಕ್ಕಳನ್ನು ದತ್ತು ರೀತಿಯಲ್ಲಿ ಸಂಪೂರ್ಣ ಶುಲ್ಕ ಭರಿಸಿ ಓದಿಸುತ್ತಿರುವ Quess corp ಬಳಗಕ್ಕೆ ಹಾಗೂ ನನ್ನ ವಿದ್ಯಾರ್ಥಿ ಪರವಾದ ನನ್ನ ಕೋರಿಕೆಯನ್ನು ಪರಿಗಣಿಸಿದ ಸ್ಮಿತಾ ಮೇಡಂ ಅವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಅಂದ ಹಾಗೇ ಕೆಲವೊಮ್ಮೆ ದೇವರಿಲ್ಲ ಅನ್ನುತ್ತೇವೆ. ಹತ್ತಾರು ವರ್ಷಗಳಿಂದ, ಪ್ರತಿದಿನವೂ ದೇವಾಲಯದಲ್ಲಿ ಈಶ್ವರನಿಗೆ ಪೂಜೆ ಮಾಡುವ ಹಿರಿಯ ಜೀವಗಳಾದ ಶ್ರೀರಾಮ್ ಭಟ್ ಅವರ ಪೋಷಕರ ಕೋರಿಕೆಯನ್ನು ದೇವರು ಈ ರೂಪದಲ್ಲಿ ಆಶೀರ್ವಾದ ಮಾಡಿದ್ದಾನೆ ಎಂದರೇ ಆಶ್ಚರ್ಯ ಪಡಬೇಕಿಲ್ಲ ಎಂದರು.

ನಮ್ಮ ವಿದ್ಯಾರ್ಥಿಯಾದ ಶ್ರೀರಾಮ್ ಭಟ್ ಅವರ ಉನ್ನತ ವ್ಯಾಸಂಗಕ್ಕೆ ನಾಳೆ ತೆರಳುತ್ತಿದ್ದಾನೆ. ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸಕ್ಕೆ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ ಎಂದು ಆಶಿಸಿದ್ದಾರೆ.

ನಮ್ಮ ಶಾಲೆಯಲ್ಲಿ ವಿದ್ಯೆ ಕಲಿಯುವ ಮಕ್ಕಳು, ನಮ್ಮ ಮಕ್ಕಳು ಅಲ್ವಾ ಅನ್ನೋ ನಮ್ಮ ಪ್ರೀತಿಯು ನೆನಪಿಗೆ ಬಂತು.ಮನಸಿಗೆ ತುಂಬಾ ಖುಷಿ ಎನಿಸಿತು ಎಂದು ಹೆಮ್ಮೆ ಪಟ್ಟುಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X