ತುಮಕೂರು | ʼಸಿನಿಮಾʼ ಪ್ರಜ್ಞೆಯನ್ನು ತಿಳಿಗೊಳಿಸುವ ಸಾಧನವಾಗಬೇಕು: ಗಿರೀಶ್ ಕಾಸರವಳ್ಳಿ

Date:

Advertisements

ಸಿನಿಮಾದ ಮೂಲ ಸಾಮಾಗ್ರಿಯನ್ನು ಅರ್ಥ ಮಾಡಿಕೊಂಡರೆ ಸಿನಿಮಾ ವೀಕ್ಷಿಸುವ ದೃಷ್ಟಿಕೋನ ಬದಲಾಗಿ, ಕಥೆಯಿಂದ ವಿಚಾರ ಹೇಳುವ ಸಾಧನವಾಗಿ ಸಿನಿಮಾ ಸಮಾಜವನ್ನು ಆಳವಾಗಿ ಮುಟ್ಟಲಿದೆ ಎಂದು ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ಡಿವಿಜಿ ಕನ್ನಡ ಅಧ್ಯಯನ ಕೇಂದ್ರವು ಶುಕ್ರವಾರ ಹಮ್ಮಿಕೊಂಡಿದ್ದ ಐದು ದಿನಗಳ ‘ಸಿನಿ ಹಬ್ಬ’ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

“ಸಿನಿಮಾವನ್ನು ಮನೋರಂಜನೆಯಿಂದ ಪ್ರಜ್ಞೆಯನ್ನು ತಿಳಿಗೊಳಿಸುವ ಸಾಧನವಾಗಿಸಬೇಕಾದರೆ ಸಿನಿಮಾ ಉನ್ನತ ಅಧ್ಯಯನ ಶಿಕ್ಷಣದ ಭಾಗವಾಗಬೇಕು. ನಮ್ಮ ಸುತ್ತಲೂ ನಡೆಯುವ ಕಥೆಯೇ ಸಿನಿಮಾವಾಗಿರುತ್ತದೆ. ಕಲ್ಪನಾ ಲೋಕದಲ್ಲಿ ತೇಲಿಸುವ ಸಿನಿಮಾಗಳು ಅರಿವನ್ನು ಮೂಡಿಸುವುದಿಲ್ಲ” ಎಂದು ಹೇಳಿದರು.

Advertisements

“ಸಮಾಜದ ಓರೆಕೋರೆಗಳನ್ನು ಚಿತ್ರಿಸುವ, ಪ್ರಭುತ್ವವನ್ನು ಪ್ರಶ್ನಿಸಿ, ಪಶ್ನಿಸುವಂತೆ ಪ್ರೇರೇಪಿಸುವ ಸಿನಿಮಾಗಳಿಗೆ ಸರ್ಕಾರ ಪ್ರಶಸ್ತಿ ಕೊಟ್ಟು ಸುಮ್ಮನಾಗಿಸುತ್ತದೆ. 1896ರಲ್ಲಿ ಹುಟ್ಟಿದ ಸಿನಿಮಾ ಪ್ರಸ್ತುತ ದಾಪುಗಾಲಿಟ್ಟು ಓಡುತ್ತಿದೆ. ಮನುಷ್ಯ ಜೀವನದಲ್ಲಿ ಆದ ಬದಲಾವಣೆಗಳನ್ನು, ತಲ್ಲಣಗಳನ್ನು ಒಳಗೊಳ್ಳುವುದೇ ಸಿನಿಮಾ ಎಂಬುದಾಗಿ ಇಷ್ಟು ವರ್ಷವೂ ನಿರೂಪಿಸಿದೆ” ಎಂದರು.

“ಸಿನಿಮಾದಲ್ಲಿ ಕಥೆಗಿಂತಲೂ ಮುಖ್ಯವಾದದ್ದು ನಿರ್ದೇಶಕ ಯಾವ ರೀತಿ ಕಥೆ ಬಳಸಿಕೊಂಡು, ಸಮಾಜಕ್ಕೆ ಪ್ರಜ್ಞೆಯನ್ನು ಸೃಷ್ಟಿಸುತ್ತಾನೆಂಬುದು. ಸಿನಿಮಾದಲ್ಲಿ ದುಡಿಯಲೂಬಹುದು, ದುರ್ಬಳಕೆಯನ್ನೂ ಮಾಡಿಕೊಳ್ಳಬಹುದು. ಸಿನಿಮಾದ ಸಂರಚನೆ-ಸಂವಿಧಾನ ಅರ್ಥಮಾಡಿಕೊಳ್ಳಬೇಕು” ಎಂದರು.

“120 ವರ್ಷಗಳ ಸಿನಿಮಾ ಇತಿಹಾಸದಲ್ಲಿ 30 ವರ್ಷಗಳಿಗೊಮ್ಮೆ ಆಗುತ್ತಿರುವ ಸಿನಿಮಾ ಚಳವಳಿಯನ್ನು ಗಮನಿಸಿದರೆ ಕಥೆಯನ್ನು ಗಟ್ಟಿಯಾಗಿ ಹೇಳುವುದರಿಂದ ಶುರುವಾಗಿ ಕಥೆ ಹೇಳದೆ ಪ್ರಶ್ನಿಸುವಂತೆ ಮಾಡುವುದು, ಇತರೆ ರಂಗಗಳ ಕಲೆಯನ್ನು ಇಲ್ಲಿ ತೋರಿಸುವುದಕ್ಕೆ 19ನೇ ಶತಮಾನದ ಕೊನೆಯಲ್ಲಿ ನಿಂತ ಚಳವಳಿ ಪ್ರಸ್ತುತ ಕಾಲವನ್ನು ಹಿಡಿಯುವ ಸಾಧನವಾಗಿ ಬದಲಾಗಿದೆ” ಎಂದು ತಿಳಿಸಿದರು.

“ಶ್ರೇಷ್ಠ ಸಿನಿಮಾಗಳು ಬಂದಿದ್ದು ಯುರೋಪ್ ದೇಶದಿಂದ. ಉತ್ತಮ ಸಿನಿಮಾಗಳು ಬರುತ್ತಿರುವುದು ಏಷ್ಯಾ ಭಾಗದಿಂದ ಮತ್ತು ತೃತೀಯ ಜಗತ್ತಿನ ರಾಷ್ಟ್ರಗಳಿಂದ. ಸಿನಿಮಾವನ್ನು ‘ರಾಜಕೀಯ’ ದೃಷ್ಟಿಕೋನದಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು” ಎಂದರು.

ವಿವಿ ಕುಲಪತಿ ಎಂ ವೆಂಕಟೇಶ್ವರಲು ಮಾತನಾಡಿ, “ಉನ್ನತ ಶಿಕ್ಷಣದ ಅಧ್ಯಯನದ ಭಾಗವಾಗಿ ಸಿನಿಮಾ ವಿಷಯವನ್ನು ಕಲಿಯಲು ಬಿದರೆಕಟ್ಟೆಯಲ್ಲಿರುವ ವಿವಿಯ ಹೊಸ ಕ್ಯಾಂಪಸ್‍ನಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ಕರ್ನಾಟಕದ ಇತರೆ ವಿವಿಗಳಿಗೆ ಮಾದರಿಯಾಗುವಂತಹ ಸಿನಿಮಾ ಕೋರ್ಸ್,
ಸ್ಟುಡಿಯೋ ಸ್ಥಾಪಿಸಲು ವಿವಿ ನಿರ್ಧರಿಸಿದೆ. ಪ್ರಸ್ತುತ ವಿವಿಯ ಕನ್ನಡ ವಿಭಾಗ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಿನಿಮಾ ವಿಷಯವು ಅಧ್ಯಯನದ ಭಾಗವಾಗಿದೆ” ಎಂದು ತಿಳಿಸಿದರು.

“ಎ ಸರ್ಟಿಫಿಕೇಟ್ ಮಾನ್ಯತೆ ಪಡೆಯುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸಾಹಿತ್ಯವು ಸಿನಿಮಾ ಆಗಿ ಬದಲಾಗುತ್ತಿದ್ದ ಕಾಲವಿತ್ತು. ಮನೋವಿಕಾಸದ ಬದಲು ಮನೋವಿಕೃತ ಥೀಮ್‍ಗಳ ಮೇಲೆ ಸಿನಿಮಾಗಳು ಬರುತ್ತಿವೆ. ಸಿನಿಮಾ ಯಶಸ್ಸು ನೂರರಿಂದ ಮೂರು ದಿನಕ್ಕೆ ಇಳಿದಿದೆ” ಎಂದು
ಕಳವಳ ವ್ಯಕ್ತಪಡಿಸಿದರು.

ಈ ಸುದ್ದಿ ಓದಿದ್ದೀರಾ? ಇಂದಿರಾ ಕ್ಯಾಂಟೀನ್‌ಗಾಗಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿಯಲ್ಲಿರುವ ವಿದ್ಯಾರ್ಥಿಗಳ ಆಗ್ರಹ

ಕೊನೆಯ ದಿನ ಅನನ್ಯಾ ಕಾಸರವಳ್ಳಿ ನಿರ್ದೇಶನದ ಹರಿಕಥಾ ಪ್ರಸಂಗ, ಅಮಿತ್ರಾಯ್ ನಿರ್ದೇಶನದ ರೋಡ್ ಟು ಸಂಗಮ್ ಚಿತ್ರ ಪ್ರದರ್ಶನ ಮಾಡಿದರು.

ಪ್ರದರ್ಶನವಾದ ಸಿನಿಮಾ ಕುರಿತು ನಿರ್ದೇಶಕಿ ಅನನ್ಯಾ ಕಾಸರವಳ್ಳಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿವಿಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ ಶೆಟ್ಟಿ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X