ತುಮಕೂರು | ಸ್ಲಂ ಜನರ ವಸತಿ ಹಕ್ಕು ಮತ್ತು ರಾಷ್ಟ್ರೀಯ ನಗರ ಲ್ಯಾಂಡ್‌ಬ್ಯಾಂಕ್ ನೀತಿ ಜಾರಿಗೆ ಸಂಸತ್‌ನಲ್ಲಿ ಪ್ರಸ್ತಾಪಿಸಲು ಬದ್ದ: ಮುದ್ದಹನುಮೇಗೌಡ

Date:

Advertisements

ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಸಮಿತಿ ಹಾಗೂ ಜಿಲ್ಲೆಯ ದಲಿತ ಸಂಘಟನೆಗಳ ಮುಖಂಡರೊಂದಿಗೆ ತುಮಕೂರು ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಎಸ್‌ ಪಿ ಮುದ್ದಹನುಮೇಗೌಡರೊಂದಿಗೆ ಸಂವಾದ ಹಾಗೂ ಬಾಬು ಜಗಜೀವನ್‌ ರಾಂ ಅವರ 117ನೇ ಜಯಂತಿಯನ್ನು ಬೆಳಗುಂಬ ರಸ್ತೆ ಸ್ಲಂ ಭವನದಲ್ಲಿ ಹಮ್ಮಿಕೊಂಡಿದ್ದರು.

ಸ್ಲಂ ಜನರ ಪ್ರಣಾಳಿಕೆ ಭಾರತ ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ಸಾರ್ವತ್ರಿಕ ಒತ್ತಾಯಗಳನ್ನು ಸ್ವೀಕರಿಸಿ ಮತ್ತು ಸ್ಟಿಕ್ಕರ್ ಬಿಡುಗಡೆ ಮಾಡಿ ದಲಿತ, ಕಾರ್ಮಿಕ ಮತ್ತು ಸ್ಲಂ ಸಂಘಟನೆ ಮುಖಂಡರೊಂದಿಗೆ ಸಹಕಾರ ಸಚಿವ ಕೆ ಎನ್ ರಾಜಣ್ಣ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಸಂವಾದ ನಡೆಸಿದರು.

ಸ್ಲಂ ಜನಾಂದೋಲನ ಸಂಚಾಲಕರ ಎ ನರಸಿಂಹಮೂರ್ತಿ ಮಾತನಾಡಿ, “ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಮತ್ತು ಇತ್ತೀಚೆಗೆ ಎಐಸಿಸಿ 18ನೇ ಲೋಕಸಭಾ ಚುನಾವಣೆಗೆ ಜನರಿಂದ ಸಂಗ್ರಹಣೆ ಮಾಡಿದ ಅಭಿಪ್ರಾಯದ ಆಧಾರದಲ್ಲಿ ಕಾಂಗ್ರೆಸ್‌ ನ್ಯಾಯ ಪತ್ರವನ್ನು ಬಿಡುಗಡೆ ಮಾಡಿ 5 ನ್ಯಾಯಗಳಲ್ಲಿ 25 ಭರವಸೆಗಳನ್ನು ನೀಡಿದ್ದು, ಇದರಲ್ಲಿ ಸ್ಲಂ ಜನಾಂದೋಲನ ನೀಡಿದ ಪ್ರಮುಖ ಹತ್ತು ಒತ್ತಾಯಗಳಲ್ಲಿ 5 ಒತ್ತಾಯಗಳನ್ನು ಅಳವಡಿಸಿಕೊಂಡು ಬಡತನ ನಿರ್ಮೂಲನೆಗೆ ಮುಂದಾಗಿದೆ” ಎಂದು ತಿಳಿಸಿದರು.

Advertisements

ಮುದ್ದಹನುಮೇ ಗೌಡ

“ಮಹಿಳೆಯರಿಗೆ 1 ಲಕ್ಷ ರೂ. ಆರೋಗ್ಯ ಹಕ್ಕು ಖಾತ್ರಿಗಾಗಿ 25 ಲಕ್ಷ ವಿಮೆ, ನಗರ ಉದ್ಯೋಗ ಖಾತ್ರಿ, ಜಾತಿ ಜನಗಣತಿ, ಮಹಿಳಾ ಮೀಸಲಾತಿ ಜಾರಿ, ಕಾರ್ಮಿಕ ಕಾಯಿದೆಗಳ ರದ್ದು ಸೇರಿದ್ದಂತೆ ಎಸ್‌ಸಿ/ಎಸ್‌ಟಿ ಹಾಗೂ ಜಾತಿಗಳ ಜನಸಂಖ್ಯೆಗನುಗುಣವಾಗಿ ಬಜೆಟ್‌ನಲ್ಲಿ ಮೀಸಲಾತಿ ಮತ್ತು ಅಸಂಘಟಿತ ವಲಯಗಳಿಗೆ ಸಾಮಾಜಿಕ ಭದ್ರತೆ ನೀಡುವ ಪಾಲುದಾರಿಕೆಯ ನ್ಯಾಯ ಸಂವಿಧಾನ ರಕ್ಷಣೆಯ ಸಾಮಾಜಿಕ ನ್ಯಾಯಕ್ಕೆ ಪೂರಕವಾಗಿದ್ದು, ಸಂವಿಧಾನ ರಕ್ಷಣೆಗಾಗಿ ಸ್ಲಂ ಜನರ ಮತ ನನ್ನ ಮತ ನನ್ನ ಭವಿಷ್ಯಕ್ಕಾಗಿ ಎಂಬ ಮತ ಜಾಗೃತಿಯೊಂದಿಗೆ ಕರ್ನಾಟಕದ 16 ಲೋಕಸಭಾ ಕ್ಷೇತ್ರಗಳಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಅದೇ ರೀತಿ ತುಮಕೂರಿನ 3 ಲೋಕಸಭಾ ಕ್ಷೇತ್ರಗಳ 120 ಸ್ಲಂಗಳಲ್ಲಿ ಈ ಅಭಿಯಾನ ನಡೆಯುತ್ತಿದೆ. ಇಂದಿನ ಸಂವಾದದಲ್ಲಿ ಸಹಕಾರಿ ಸಚಿವರು ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಜಿಲ್ಲೆಯ ಎಲ್ಲ ದಲಿತ ಮುಖಂಡರಿರುವುದು ಆಶದಾಯಕವಾಗಿದೆ” ಎಂದರು.

ಸ್ಲಂ ಜನರ ಪ್ರಣಾಳಿಕೆಯನ್ನು ಸ್ವೀಕರಿಸಿ ಕಾಂಗ್ರೆಸ್‌ ಅಭ್ಯರ್ಥಿ ಎಸ್ ಪಿ ಮುದ್ದಹನುಮೇಗೌಡ ಮಾತನಾಡಿ, “ಇಂದು ವೇದಿಕೆಯಲ್ಲಿರುವ ಹೋರಾಟಗಾರರು ಮತ್ತು ಸ್ಲಂ ಸಂಘಟನೆ ಜಾಗೃತಿ ಸಂವಿಧಾನ ರಕ್ಷಣೆಯಾದರೆ ದೇಶದಲ್ಲಿರುವ ಎಲ್ಲ ನಾಗರಿಕ ಹಕ್ಕುಗಳ ರಕ್ಷಣೆಯಾಗುತ್ತದೆ. ಇದೊಂದು ಬಡವರ ಮತ್ತು ಉಳ್ಳವರ ಮಧ್ಯೆ ನಡೆಯುವ ಸಂಘರ್ಷವಾಗಿದ್ದು, ನಾನು ಹಣದಲ್ಲಿ ದುರ್ಬಲನಾಗಿದ್ದರೂ ಕೂಡ ಬಡವರಿಗೆ ರೈತರಿಗೆ ಮತ್ತು ಜಿಲ್ಲೆಯ ಎಲ್ಲ ಜಾತಿಯ ದನಿಯಿಲ್ಲದವರಿಗೆ ಪಾರ್ಲಿಮೆಂಟ್‌ನಲ್ಲಿ ದನಿಯಾಗಿ ಮಾನವೀಯತೆಯ ಹೃದಯ ಶ್ರೀಮಂತಿಕೆಯವನಾಗಿದ್ದೇನೆ” ಎಂದರು.

ಸಚಿವ ರಾಜಣ್ಣ

“ಇಂದು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ದೇಶದ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವನ್ನು ನ್ಯಾಯ ಪತ್ರದಲ್ಲಿ ಸೇರಿಸಿದೆ. ಹಾಗಾಗಿ ಈಗಾಗಲೇ ಸ್ಲಂ ಜನರ ಒತ್ತಾಯಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿದ್ದು, ಸಮಾನ ಶಿಕ್ಷಣ ನೀಡುವ ಶಿಕ್ಷಣ ಹಕ್ಕು ಮತ್ತು ಸ್ಲಂ ಜನರಿಗೆ ವಸತಿ ಪಡೆಯಲು ಅಗತ್ಯವಿರುವ ರಾಷ್ಟ್ರೀಯ ಲ್ಯಾಂಡ್‌ಬ್ಯಾಂಕ್ ನೀತಿ ಮತ್ತು ರಾಷ್ಟ್ರ ಮಟ್ಟದಲ್ಲಿ ವಸತಿ ಹಕ್ಕು ಕಾಯಿದೆ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ನಾನು ನಿಮ್ಮಿಂದ ಆಯ್ಕೆಯಾದ ಪಕ್ಷದಲ್ಲಿ ಸಂಸತ್‌ನಲ್ಲಿ ನಿಮ್ಮ ಪರವಾಗಿ ವಿಷಯ ಪ್ರಸ್ತಾಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಭರವಸೆ ನೀಡಿದರು.

“ಸಂಸತ್ ಸದಸ್ಯರ ನಿಧಿಯಲ್ಲಿ ಸ್ಲಂಗಳ ಅಭಿವೃದ್ಧಿಗೆ ಈ ಹಿಂದೆಯೂ ಅನುದಾನ ನೀಡಿದ್ದೇನೆ. ಮುಂದೆಯೂ ನೀಡುತ್ತೇನೆ. ಅದಕ್ಕಾಗಿ ನನ್ನನ್ನು ಅಧಿಕ ಮತಗಳ ಹಂತರದಿಂದ ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.

ಗ್ಯಾರಂಟಿಗಳನ್ನು ಗೇಲಿ ಮಾಡಿದವರಿಗೆ ಬುದ್ದಿ ಕಲಿಸಿ: ಸಹಕಾರ ಸಚಿವ ಕೆ ಎನ್ ರಾಜಣ್ಣ

ಸಹಕಾರ ಸಚಿವ ಕೆ ಎನ್ ರಾಜಣ್ಣ ಮಾತನಾಡಿ, “ಇಂದು ದೇಶಕ್ಕೆ ಮೋದಿ ಗ್ಯಾರಂಟಿ ಎಂದು ಹೇಳುವ ಬಿಜೆಪಿ ಮತ್ತು ಸಮೂಹ ಸನ್ನಿ ಜನರನ್ನು ಭ್ರಮೆಯಲ್ಲಿ ಮುಳುಗಿಸಿದೆ. ಅದರೆ ಸಂವಿಧಾನದ ಸಾಮಾಜಿಕ ನ್ಯಾಯದ ಆಶಯವನ್ನು ಈಡೇರಿಸಲು ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ಮೇಲೆ ದೇಶ ದಿವಾಳಿಯಾಗುತ್ತದೆ. ಜನರನ್ನೆಲ್ಲ ಸೋಮಾರಿಗಳನ್ನಾಗಿಸುತ್ತಾರೆಂದು ಬಡವರನ್ನು ಗೇಲಿ ಮಾಡಿದವರಿಗೆ ಈ ಲೋಕಸಭಾ ಚುನವಾಣೆಯಲ್ಲಿ ಬುದ್ದಿ ಕಲಿಸಬೇಕು” ಎಂದು ಕರೆ ನೀಡಿದರು.

“ಬಡವರನ್ನು ಗೇಲಿ ಮಾಡಿದರಿಗೆ ಮಹಿಳೆಯರು, ರೈತರು, ಶ್ರಮಿಕರು ಮತ್ತು ಯುವಜನರು ತಮ್ಮ ಉತ್ತರವನ್ನು ವೋಟುಗಳ ಮೂಲಕ ಕಾಂಗ್ರೆಸ್‌ಗೆ ನೀಡಿ ಸಂವಿಧಾನವನ್ನು ರಕ್ಷಿಸಬೇಕು. ಬಿಜೆಪಿ ಮತ್ತೊಂದು ಬಾರಿ ಆಡಳಿಡತಕ್ಕೆ ಬಂದರೆ ಸನಾತನ ಧರ್ಮವನ್ನು ಜಾರಿಗೆ ತರುತ್ತದೆ. ಮೀಸಲಾತಿ ಕಿತ್ತುಕೊಂಡು ಕಾರ್ಪೋರೇಟ್ ಕುಳಗಳ ಪರವಾಗಿ ಕಾನೂನು ರೂಪಿಸುತ್ತದೆ. ಹಾಗಾಗಿ ನಾವೆಲ್ಲಾ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಎಸ್ ಪಿ ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕು” ಎಂದರು.

“ಮಂಜುನಾಥ್‌ ಸೇರಿದಂತೆ ಕೊದಂಡರಾಮಯ್ಯ, ಎ ಕೃಷ್ಣಪ್ಪ ಜಿಲ್ಲೆಯಲ್ಲಿ ಲೋಕಸಭೆಗೆ ನಿಂತು ಸೋತಿದ್ದಾರೆ. ಹೊರಗಿನವರು ಈವರೆಗೂ ಗೆದ್ದ ಇತಿಹಾಸವಿಲ್ಲ. ಈ ಚುನಾವಣೆಯಲ್ಲಿ ಸೋಮಣ್ಣನವರು ಸೋಲಲಿದ್ದಾರೆ. ಅವರು ಹಣ ನೀಡಿದರೂ ಕಾಂಗ್ರೆಸ್‌ಗೆ ಮತ ಹಾಕಬೇಕು” ಎಂದು ಮನವಿ ಮಾಡಿದರು.

ಸಂವಾದದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಚಿಂತಕ ಕೆ ದೊರೈರಾಜ್, “ಸಂವಿಧಾನ ಉಳಿಸಲು ದೇಶದ ಜನರ ಹಕ್ಕುಗಳನ್ನು ರಕ್ಷಿಸಲು ಕಾಂಗ್ರೆಸ್‌ ಬೆಂಬಲಿಸಬೇಕಾಗಿದೆ. ಸರಳತೆಯ ಹಾಗೂ ಎಲ್ಲ ಸಮುದಾಯಗಳ ಸಮಸ್ಯೆಗಳ ಆಯಾಮದಲ್ಲಿ ಚರ್ಚಿಸುವ ಮುದ್ದಹನುಮೇಗೌಡರನ್ನು ಆಯ್ಕೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ತುಮಕೂರು | ಕೊಬ್ಬರಿ ಖರೀದಿ ಕೇಂದ್ರದಲ್ಲಿ ಹಗಲು ದರೋಡೆ, ರೈತರಿಗೆ ಮೋಸ: ಗೋವಿಂದರಾಜು ಆರೋಪ

ವೇದಿಕೆಯಲ್ಲಿ ಪ್ರಜಾ ಪ್ರಗತಿ ಸಂಪಾದಕ ಎಸ್ ನಾಗಣ್ಣ, ಎನ್ ಗೋವಿಂದರಾಜ್, ಡಾ ಬಸವರಾಜು, ಡಾ.ಮುರುಳೀಧರ್, ಮಾಜಿ ನಗರಸಭೆ ಉಪಾಧ್ಯಕ್ಷ ವಾಲೆಚಂದ್ರಯ್ಯ, ನಿವೃತ್ತಿ ಮುಖ್ಯ ಎಂಜಿನಿಯರ್ ಶಿವಕುಮಾರ್, ದಸಂಸ ಹಿರಿಯ ಮುಖಂಡರಾದ ನರಸೀಯಪ್ಪ, ನರಸಿಂಹಯ್ಯ, ಬಿಹೆಚ್ ಗಂಗಾಧರ್, ರಾಮಚಂದ್ರ, ಕಾರ್ಮಿಕ ಸಂಘಟನೆಯ ಸೈಯದ್‌ಮುಜೀಬ್, ಎನ್ ಕೆ ಸುಬ್ರಹ್ಮಣ್ಯ, ಸ್ಲಂ ಸಮಿತಿಯ ಪದಾಧಿಕಾರಿಗಳಾದ ಶಾರದಮ್ಮ, ಜಾಬೀರ್, ಗಂಗಮ್ಮ, ಕಣ್ಣನ್, ಶಂಕ್ರಯ್ಯ, ಚಕ್ರಪಾಣಿ, ಗಣೇಶ್, ಗೋವಿಂದ್, ಕೃಷ್ಣಮೂರ್ತಿ, ನಿವೇಶನ ಹೋರಾಟ ಸಮಿತಿ ಮಂಗಳಮ್ಮ, ಸುಧಾ, ಪೂರ್ಣಿಮಾ, ಅನುಪಮಾ, ಶಾಬುದ್ದೀನ್, ಗುಲ್ನಾಜ್, ಸಿದ್ದಪ್ಪ ಸೇರಿದಂತೆ ಬಹುತೇಕರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X