ಸುಮಾರು 35 ಸಾವಿರ ಕೊಬ್ಬರಿ ಶೇಖರಿಸಿದ್ದ ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಒಂದು ಟ್ರ್ಯಾಕ್ಟರ್, ಒಂದು ಬೈಕ್ ಸುಟ್ಟಿದ್ದು, ಲಕ್ಷಾಂತರ ರೂ. ನಷ್ಟ ಅನುಭವಿಸಿದ ಘಟನೆ ಗುಬ್ಬಿ ತಾಲೂಕಿನ ಎನ್ ರಾಂಪುರ ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ರೈತ, ವಕೀಲ ರೇಣುಕಾ ಪ್ರಸಾದ್ ಅವರ ತೋಟದ ಮನೆಯಲ್ಲಿದ್ದ ಕೊಬ್ಬರಿ ಶೆಡ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಧಗಧಗ ಹತ್ತಿ ಉರಿದಿದ್ದು, ಶೆಡ್ ಬಳಿ ಇದ್ದ ಟ್ರ್ಯಾಕ್ಟರ್ ಹಾಗೂ ಬೈಕಿಗೂ ಆವರಿಸಿದ ಕಾರಣ ಅವುಗಳೂ ಬೆಂಕಿಗಾಹುತಿಯಾಗಿವೆ.
“ಕೊಬ್ಬರಿಯಲ್ಲಿನ ಎಣ್ಣೆ ಅಂಶ ಹಾಗೂ ಇಂದಿನ ಬಿಸಿಲಿನ ತಾಪಕ್ಕೆ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಶೆಡ್ ಆಹುತಿ ಪಡೆದಿದೆ. ಸುಮಾರು 15 ಲಕ್ಷ ರೂ.ಗಳ ನಷ್ಟವುಂಟಾಗಿದೆಯೆಂದು ಅಂದಾಜಿಸಿದ ಸಂತ್ರಸ್ತ ರೈತ ರೇಣುಕಾ ಪ್ರಸಾದ್ ದ್ವೇಷಾಸೂಯೆಯಿಂದ ಉದ್ದೇಶ ಪೂರ್ವಕವಾಗಿ ಬೆಂಕಿ ಇಟ್ಟಿದ್ದಾರೆ” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಬಿಟ್ಟಿ ಗ್ಯಾರಂಟಿ ಎನ್ನುತ್ತಿದ್ದವರಿಗೆ ವೇದಾಂತ್ ಉತ್ತರ: ಆಲಗೂರ್
ಪ್ರಕರಣ ದಾಖಲಿಸಿಕೊಂಡಿರುವ ಚೇಳೂರು ಪೊಲೀಸ್ ಠಾಣೆಯ ಸಿಬ್ಬಂದಿ ಮುಂದಿನ ತನಿಖೆ ನಡೆಸಿದ್ದಾರೆ.
