ತುಮಕೂರು | ಯೇಸು ಆರಾಧನೆ; ಸಾಮೂಹಿಕ ಪ್ರಾರ್ಥನೆ ಮೂಲಕ ಗುಡ್‌ ಫ್ರೈಡೇ ಆಚರಣೆ

Date:

Advertisements

ಯೇಸುಕ್ರಿಸ್ತ ಶಿಲುಬೆಯಲ್ಲಿ ಮರಣ ಹೊಂದಿದ ದಿನವಾದ ‘ಶುಭ ಶುಕ್ರವಾರ’ವನ್ನು ಕ್ರೈಸ್ತ ಬಾಂಧವರು ಅತ್ಯಂತ ಶ್ರದ್ಧಾಭಕ್ತಿಯಿಂದ ತುಮಕೂರು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಆಚರಿಸಿದರು.

ಕೈಸ್ತ ಬಾಂಧವರು ಅತ್ಯಂತ ಶ್ರದ್ಧೆಯಿಂದ ಉಪವಾಸ ವ್ರತ ಮಾಡಿ ಮಧ್ಯಾಹ್ನದವರೆಗೂ ಚರ್ಚ್‌ಗಳಲ್ಲಿ ಸೇರಿ ಯೇಸುಕ್ರಿಸ್ತನ ಆರಾಧನೆ, ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಶುಭ ಶುಕ್ರವಾರವನ್ನು ಆಚರಣೆ ಮಾಡಿದರು.

ಚರ್ಚ್‌ಗಳಲ್ಲಿ ಶುಭ ಶುಕ್ರವಾರದ ಪ್ರಯುಕ್ತ ಯೇಸುಕ್ರಿಸ್ತನ ಉಪದೇಶಗಳು, ಗುಣಗಳು ಹಾಗೂ ಅವರು ಜೀವಿಸಿದ ರೀತಿಯನ್ನು ತಿಳಿಸಿದರು.

Advertisements

ಶುಭ ಶುಕ್ರವಾರಕ್ಕಿಂತ 40 ದಿನ ಮುನ್ನ ಕ್ರೈಸ್ತ ಸಮುದಾಯದಲ್ಲಿ ಉಪವಾಸ ಶುರುವಾಗುತ್ತದೆ. 39ನೇ ದಿನವನ್ನು ಶುಭ ಶುಕ್ರವಾರ ಎಂದು ಆಚರಿಸಲಾಗುತ್ತದೆ. ನಗರದ ಹೊರಪೇಟೆಯಲ್ಲಿರುವ ಲೂರ್ದುಮಾತೆ ದೇವಾಲಯ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಶುಭ ಶುಕ್ರವಾರದ ಅಂಗವಾಗಿ ಯೇಸುಕ್ರಿಸ್ತನ ಶಿಲುಬೆಯನ್ನು ಚರ್ಚ್ ಸುತ್ತ ಕೊಂಡೊಯ್ದು ಪೂಜೆ ನೆರವೇರಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ನೀರಾವರಿ ಸಂಪರ್ಕ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರ; ಭರಮಗಿರಿ ಕೆರೆಯಾಶ್ರಿತ ಜನರ ಎಚ್ಚರಿಕೆ

ನಗರದ ವಿವಿಧೆಡೆ ಇರುವ ಚರ್ಚ್‌ಗಳಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಗುಡ್‌ ಫ್ರೈಡೇ ಆಚರಿಸಲಾಗುತ್ತಿದ್ದು, ಕ್ರೈಸ್ತ ಬಾಂಧವರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಯೇಸುಕ್ರಿಸ್ತನಿಗೆ ಗೌರವ ನಮನ ಸಲ್ಲಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಗಣೇಶನ ವೇಷಧರಿಸಿ ರಕ್ತದಾನದ ಜಾಗೃತಿ

ಮೈಸೂರು ಜೀವಧಾರ ರಕ್ತ ನಿಧಿ ಕೇಂದ್ರದ ವತಿಯಿಂದ ರಾಮಸ್ವಾಮಿ ವೃತದಲ್ಲಿ ವಾಹನ...

ಸಾಕ್ಷಿ ದೂರುದಾರನಿಗೆ ಆಶ್ರಯ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ಶೋಧ

ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ...

ಉಡುಪಿ | ಕಾರ್ಕಳದಲ್ಲಿ ವ್ಯಕ್ತಿಯ ಕೊಲೆ, ಪೊಲೀಸರಿಂದ ‌ಪರಿಶೀಲನೆ

ಉಡುಪಿ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ರಸ್ತೆಯ ಪಕ್ಕದಲ್ಲಿ ಸೋಮವಾರ ತಡರಾತ್ರಿ...

ಶಿವಮೊಗ್ಗ | ಜಿಲ್ಲಾಧಿಕಾರಿಗಳಿಂದ, ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ

ಶಿವಮೊಗ್ಗ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು....

Download Eedina App Android / iOS

X