ರಾಜಣ್ಣ ಬಡವರ ಮನುಷ್ಯ. ಬಡವರಿಗಾಗಿ ದುಡಿದ ವ್ಯಕ್ತಿತ್ವ ಅವರದ್ದು. ಹಾಗಾಗಿ ಇಷ್ಟು ಜನ ಸೇರಿದ್ದಾರೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು
ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರ 75 ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತುಮಕೂರು ನಗರದ ಜೂನಿಯರ್ ಕಾಲೇಜು ಮೖದಾನದಲ್ಲಿ ಆಯೋಜಿಸಿದ್ದ ರಾಜಣ್ಣ @75 ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಕೆ.ಎಸ್. ನಿಸಾರ್ ಅಹಮದ್ ನಿಮ್ಮೊಳಗಿದ್ದು, ನಿಮ್ಮಂತಾಗದೆ ಎಂಬ ಕವಿತೆಯಿದೆಲ್ಲ ಅದು ರಾಜಣ್ಣ ಅವರ ವ್ಯಕ್ತಿತ್ವ. ಏಕಶಿಲಾ ಬೆಟ್ಟ ಎಷ್ಟು ಗಟ್ಟಿಯೋ ರಾಜಣ್ಣ ಅವರ ವ್ಯಕ್ತಿತ್ವವೂ ಅಷ್ಟೇ ಗಟ್ಟಿಯಾಗಿದೆ. ಯಾರದರೂ ಎದುರುಬಿದ್ದರೆ ಎದುರು ಬೀಳ್ತಾರೆ. ಪ್ರೀತಿಯಿಂದ್ದರೆ, ಪ್ರೀತಿಯಿಂದ ಕಾಣುತ್ತಾರೆ. ಏಕಾಂಗಿಯಾಗಿ ಹೋರಾಟ ಮಾಡುವ ನಾಯಕ. ರಾಜಣ್ಣ ಜಾತ್ಯಾತೀತ ಸೇವಾ ನಾಯಕ. ಮೀಸಲಾತಿ ಕ್ಷೇತ್ರದಲ್ಲಿ ನನಗೆ ಟಿಕೆಟ್ ಬೇಡ. ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೊಡಿ ಎಂದಿದ್ದರು. ಮೀಸಲಾತಿ ಬಿಟ್ಟು ಸಾಮಾನ್ಯ ಕ್ಷೇತ್ರಸಲ್ಲಿ ಗೆದ್ದದ್ದು ಇದು ಕರ್ನಾಟಕದ ಇತಿಹಾಸದಲ್ಲೇ ವಿರಳ. ದೇವರಾಜು ಅರಸು ಅವರ ಪ್ರೇರಣೆಯಿಂದ ರಾಜಕಾರಣಕ್ಕೆ ಬಂದಿದ್ದಾರೆ. ಸಹಕಾರ ಸಾರ್ವಭೌಮ ಎಂಬ ಬಿರುದನ್ನು ಕಟ್ಟಿಕೊಟ್ಟಿದ್ದಾರೆ. ಅಭಿನಂದನಾ ಗ್ರಂಥದಲ್ಲಿ ಸಹಕಾರ ಸಾರ್ವಭೌಮನ ಸಾರವನ್ನು ಕಟ್ಟಿಕೊಟ್ಟಿದೆ. ರಾಜಣ್ಣ ಅಂದರೆ ಏನು ? ಎನ್ನುವುದನ್ನು ಅರ್ಥಯಿಸಿದೆ ಎಂದರು.
ರಾಜಣ್ಣ ಕೂಗು ವೀರ ಅಲ್ಲ. ಕೆಲಸಗಾರ. ಅವರು ಮಾಡಿದ ಸೇವಾ ಕಾರ್ಯಕ್ಕೆ ಜನರು ಮೆಚ್ಚಿದ್ದಾರೆ. ಸರ್ಕಾರಿ ಶಾಲೆಗಳು ಸಂಭ್ರಮದಲ್ಲಿ ನಲಿಯುವಂತೆ ಮಾಡಬೇಕು. ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಅಭಿವೃದ್ಧಿಪಡಿಸಬೇಕು ಎಂದು ರಾಜಣ್ಣ ಅವರಿಗೆ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.
ರಾಷ್ಟ್ರದ ರಾಜಕಾರಣವನ್ನು ಸೈದ್ಧಾಂತಿಕ ಹಾಗೂ ಸಮಯ ಸಾಧಕ ರಾಜಕಾರಣ ಎಂದು ವಿಂಗಡಿಸಬಹುದು. ಆದರೆ, ರಾಜಣ್ಣ ಅವರದ್ದು ಸಮಯೋಚಿತ ರಾಜಕಾರಣ. ಯಾರನ್ನಾದರೂ ಗೆಲ್ಲಿಸಿ ಅಂದರೆ ಗೆಲ್ಲಿಸುತ್ತಾರೆ. ಅದು ಅವರ ವ್ಯಕ್ಯಿತ್ವ ಎಂದರು.
ತುಮಕೂರು ಸಾಂಸ್ಕೃತಿಕ, ಶೈಕ್ಷಣಿಕವಾಗಿ ಸಮೃದ್ಧವಾಗಿ ನಲಿಯುತ್ತಿರುವ ಜಿಲ್ಲೆಯಾಗಿದ್ದು ಶಿಕ್ಷಣದ ಹೆಬ್ಬಾಗಿಲಾದೆ. ಅಭಿವೃದ್ದಿ ಅಂದರೆ ಬಂಡವಾಳಿಗರನ್ನು ಕರೆಸುವುದು ಅಷ್ಟೇ ಅಲ್ಲ. ಬಂಡವಾಳ ಭಗವಂತನಾಗಿ ಬರುವುದು ಬೇಡ, ಭಕ್ತನಾಗಿ ಬರಲಿ.ಶೖಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ತುಮಕೂರಿನ ಆಸ್ಮಿತೆ ಉಳಿಸಲು ಇಬ್ಬರು ಸಚಿವರು ಸಂಕಲ್ಪ ಮಾಡಬೇಕು ಎಂದರು