ತುಮಕೂರು | ಕೆ. ಎನ್ ರಾಜಣ್ಣ ಬಡವರ ಮನುಷ್ಯ : ಬರಗೂರು ರಾಮಚಂದ್ರಪ್ಪ

Date:

  ರಾಜಣ್ಣ ಬಡವರ ಮನುಷ್ಯ. ಬಡವರಿಗಾಗಿ ದುಡಿದ ವ್ಯಕ್ತಿತ್ವ ಅವರದ್ದು‌. ಹಾಗಾಗಿ ಇಷ್ಟು ಜನ ಸೇರಿದ್ದಾರೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು

- Advertisement -

ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರ 75 ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ತುಮಕೂರು ನಗರದ ಜೂನಿಯರ್ ಕಾಲೇಜು ಮೖದಾನದಲ್ಲಿ ಆಯೋಜಿಸಿದ್ದ ರಾಜಣ್ಣ @75 ಅಮೃತ ಮಹೋತ್ಸವ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಕೆ.ಎಸ್. ನಿಸಾರ್ ಅಹಮದ್ ನಿಮ್ಮೊಳಗಿದ್ದು, ನಿಮ್ಮಂತಾಗದೆ ಎಂಬ ಕವಿತೆಯಿದೆಲ್ಲ ಅದು ರಾಜಣ್ಣ ಅವರ ವ್ಯಕ್ತಿತ್ವ. ಏಕಶಿಲಾ ಬೆಟ್ಟ ಎಷ್ಟು ಗಟ್ಟಿಯೋ ರಾಜಣ್ಣ ಅವರ ವ್ಯಕ್ತಿತ್ವವೂ ಅಷ್ಟೇ ಗಟ್ಟಿಯಾಗಿದೆ. ಯಾರದರೂ ಎದುರುಬಿದ್ದರೆ ಎದುರು ಬೀಳ್ತಾರೆ. ಪ್ರೀತಿಯಿಂದ್ದರೆ, ಪ್ರೀತಿಯಿಂದ ಕಾಣುತ್ತಾರೆ. ಏಕಾಂಗಿಯಾಗಿ ಹೋರಾಟ ಮಾಡುವ ನಾಯಕ. ರಾಜಣ್ಣ ಜಾತ್ಯಾತೀತ ಸೇವಾ ನಾಯಕ. ಮೀಸಲಾತಿ ಕ್ಷೇತ್ರದಲ್ಲಿ ನನಗೆ ಟಿಕೆಟ್ ಬೇಡ. ಸಾಮಾನ್ಯ ಕ್ಷೇತ್ರದಲ್ಲಿ ಟಿಕೆಟ್ ಕೊಡಿ ಎಂದಿದ್ದರು. ಮೀಸಲಾತಿ ಬಿಟ್ಟು ಸಾಮಾನ್ಯ ಕ್ಷೇತ್ರಸಲ್ಲಿ ಗೆದ್ದದ್ದು ಇದು ಕರ್ನಾಟಕದ ಇತಿಹಾಸದಲ್ಲೇ ವಿರಳ. ದೇವರಾಜು ಅರಸು ಅವರ ಪ್ರೇರಣೆಯಿಂದ ರಾಜಕಾರಣಕ್ಕೆ ಬಂದಿದ್ದಾರೆ. ಸಹಕಾರ ಸಾರ್ವಭೌಮ ಎಂಬ ಬಿರುದನ್ನು ಕಟ್ಟಿಕೊಟ್ಟಿದ್ದಾರೆ. ಅಭಿನಂದನಾ ಗ್ರಂಥದಲ್ಲಿ ಸಹಕಾರ ಸಾರ್ವಭೌಮನ ಸಾರವನ್ನು ಕಟ್ಟಿಕೊಟ್ಟಿದೆ. ರಾಜಣ್ಣ ಅಂದರೆ ಏನು ?  ಎನ್ನುವುದನ್ನು ಅರ್ಥಯಿಸಿದೆ ಎಂದರು.

ರಾಜಣ್ಣ ಕೂಗು ವೀರ ಅಲ್ಲ. ಕೆಲಸಗಾರ‌. ಅವರು ಮಾಡಿದ ಸೇವಾ ಕಾರ್ಯಕ್ಕೆ  ಜನರು ಮೆಚ್ಚಿದ್ದಾರೆ. ಸರ್ಕಾರಿ ಶಾಲೆಗಳು ಸಂಭ್ರಮದಲ್ಲಿ ನಲಿಯುವಂತೆ ಮಾಡಬೇಕು. ಖಾಸಗಿ ಶಾಲೆಗಳಿಗೆ ಕಡಿಮೆಯಿಲ್ಲದಂತೆ ಅಭಿವೃದ್ಧಿಪಡಿಸಬೇಕು ಎಂದು ರಾಜಣ್ಣ ಅವರಿಗೆ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದರು.

ರಾಷ್ಟ್ರದ ರಾಜಕಾರಣವನ್ನು ಸೈದ್ಧಾಂತಿಕ ಹಾಗೂ ಸಮಯ ಸಾಧಕ ರಾಜಕಾರಣ ಎಂದು ವಿಂಗಡಿಸಬಹುದು. ಆದರೆ, ರಾಜಣ್ಣ ಅವರದ್ದು ಸಮಯೋಚಿತ ರಾಜಕಾರಣ. ಯಾರನ್ನಾದರೂ ಗೆಲ್ಲಿಸಿ ಅಂದರೆ ಗೆಲ್ಲಿಸುತ್ತಾರೆ. ಅದು ಅವರ ವ್ಯಕ್ಯಿತ್ವ ಎಂದರು.

ತುಮಕೂರು ಸಾಂಸ್ಕೃತಿಕ, ಶೈಕ್ಷಣಿಕವಾಗಿ ಸಮೃದ್ಧವಾಗಿ ನಲಿಯುತ್ತಿರುವ ಜಿಲ್ಲೆಯಾಗಿದ್ದು ಶಿಕ್ಷಣದ ಹೆಬ್ಬಾಗಿಲಾದೆ. ಅಭಿವೃದ್ದಿ ಅಂದರೆ ಬಂಡವಾಳಿಗರನ್ನು ಕರೆಸುವುದು ಅಷ್ಟೇ ಅಲ್ಲ. ಬಂಡವಾಳ ಭಗವಂತನಾಗಿ ಬರುವುದು ಬೇಡ, ಭಕ್ತನಾಗಿ ಬರಲಿ.ಶೖಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ತುಮಕೂರಿನ ಆಸ್ಮಿತೆ ಉಳಿಸಲು ಇಬ್ಬರು ಸಚಿವರು ಸಂಕಲ್ಪ ಮಾಡಬೇಕು ಎಂದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಆರೋಗ್ಯ ಸುರಕ್ಷತೆಗೆ ಆದ್ಯತೆ ನೀಡಿ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ಕೊಡಗು ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಅಗತ್ಯ...

ತುಮಕೂರು ದಸರಾಕ್ಕೆ ತಾರಾ ಮೆರುಗು : 11 ದಿನ, ನೂರಾರು ಆಕರ್ಷಣೆ

ದೇವಿಯ ಆರಾಧನೆ, ತಾರೆಯರ ಕಲರವ, ಸಂಗೀತದ ರಸದೌತಣ, ನೃತ್ಯ ವೈಭವ, ಕ್ರೀಡಾ...