ತುಮಕೂರು ಜಿಲ್ಲೆಯ ಪಾವಗಡದ ಕೆಪಿಟಿಸಿಎಲ್‌ನ ಇಬ್ಬರು ಜೂನಿಯರ್ ಎಂಜಿನಿಯರ್‌ಗಳು ಹಾಗೂ ಇಬ್ಬರು ಸಿಬ್ಬಂದಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದು ಹೊಡೆದಾಡಿಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ತಲೆ ಹೊಡೆದು ರಕ್ತ ಸುರಿಯುತ್ತಿದ್ದರೂ ಅಧಿಕಾರಿಗಳು ಪರಸ್ಪರ ಬಡಿದಾಡಿಕೊಂಡಿದ್ದಾರೆ. ಕಳೆದ ಗುರುವಾರ ಪಾವಗಡ ಪಟ್ಟಣದ ಹೊರವಲಯದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಜೂನಿಯರ್ ಎಂಜಿನಿಯರ್‌ಗಳಾದ ಶ್ರೀನಿವಾಸ್, ವಾದಿರಾಜ್, ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ ಮತ್ತು ಸಂತೋಷ್ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಆಶ್ರಯ ಮನೆ ಕೊಡಿಸುತ್ತೇನೆಂದು ಗ್ರಾ.ಪಂ ಅಧ್ಯಕ್ಷೆ ಪುತ್ರನಿಂದ ಮಹಿಳೆ ಮೇಲೆ ನಿರಂತರ ಅತ್ಯಾಚಾರ
ಬಟ್ಟೆ ಬಿಚ್ಚಿಕೊಂಡು ಬೀದಿರೌಡಿಗಳಂತೆ ಕಾಳಗ ನಡೆಸಿದ್ದಾರೆ. ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಕೆಲಸಕ್ಕೆ ಕುತ್ತು ಬರಬಹುದು ಎಂಬ ಭೀತಿಯಿಂದ ಗಾಯದ ನೋವಿನಲ್ಲೇ ನಾಲ್ವರೂ ಕೆಲಸ ಮಾಡುತ್ತಿದ್ದಾರೆ. ಸದ್ಯ ನಾಲ್ವರಿಗೂ ಮೇಲಾಧಿಕಾರಿಗಳು ನೋಟಿಸ್ ನೀಡಿದ್ದು, ಕಾರಣ ಕೇಳಿದ್ದಾರೆ.
