ಓದು ಬರಹದ ಕಡೆ ಮಕ್ಕಳನ್ನು ರೂಪಿಸುವ ಜೊತೆಗೆ ಸಾಂಸ್ಕೃತಿಕ, ಕಲಾತ್ಮಕ ವ್ಯಕ್ತಿತ್ವಗಳನ್ನಾಗಿ ಮಾಡಬೇಕು ಎನ್ನುವ ಆಸೆ ನಿಮ್ಮದಾಗಿದ್ದರೆ ನಿಮ್ಮೂರಿನಲ್ಲಿಯೇ ಈಗ ರಂಗಾಯಣ ಪದವೀಧರರಿಂದ ‘ಕುಣಿಯೋಣು ಬಾರ- ಕಲಿಯೋಣ ಬಾರ’ ಎನ್ನುವ ಮಕ್ಕಳ ಬೇಸಿಗೆ ರಂಗ ಶಿಬಿರ ಪ್ರಾರಂಭವಾಗುತ್ತಿದೆ ಬನ್ನಿ ನೋಂದಾಯಿಸಿಕೊಳ್ಳಿ.
ತುಮಕೂರು ವಿಶ್ವವಿದ್ಯಾ ನಿಲಯದ ಸಹಕಾರದೊಂದಿಗೆ ರಂಗಾಯಣ ಪದವೀಧರರಿಂದ 40 ದಿನಗಳ ಕಾಲ ಕುಣಿಯೋಣ ಬಾರಾ- ಕಲಿಯೋಣ ಬಾರಾ ಮಕ್ಕಳ ಬೇಸಿಗೆ ಶಿಬಿರ ನಡೆಯುತ್ತಿದ್ದು ಶಿಬಿರದಲ್ಲಿ ಅಭಿನಯ ತರಗತಿ, ರಂಗ ವ್ಯಾಯಾಮ, ರಂಗಾಟಗಳು, ರಂಗಗೀತೆ, ಜಾನಪದ ಗೀತೆ, ಕೋಲಾಟ ಗಳ, ನಾಟಕಗಳ ಗ್ರಹಿಕೆ, ಸಾಂಸ್ಕೃತಿಕ ವ್ಯಕ್ತಿತ್ವ ವಿಕಸನ, ಇಂತಹ ಎಲ್ಲಾ ಬಗೆಯ ಕಲೆಗಳ ಬಗ್ಗೆ ಮಕ್ಕಳಿಗೆ ಹೇಳಿಕೊಡಲಾಗುತ್ತದೆ.
10ರಿಂದ15 ವರ್ಷದೊಳಗಿನ ಮಕ್ಕಳಿಗೆ ಮಾತ್ರ ಈ ಶಿಬಿರದಲ್ಲಿ ಕಲಿಕೆ ಅವಕಾಶ ಪ್ರತಿದಿನ ಬೆಳಿಗ್ಗೆ 6:30 ರಿಂದ 9:30ವರೆಗೆ ಮೂರು ಗಂಟೆಗಳ ಕಾಲ ತರಗತಿ ನಡೆಸಲಾಗುತ್ತದೆ .ಆಸಕ್ತಿ ಉಳ್ಳವರು ಮಾರ್ಚ್ 25ರ ಒಳಗೆ ನೋಂದಾಯಿಸಿಕೊಳ್ಳಿ ಏಪ್ರಿಲ್ 2ರಿಂದ ತರಗತಿಗಳು ಪ್ರಾರಂಭವಾಗುತ್ತದೆ .ಶಿಬಿರದ ತರಗತಿಗಳನ್ನು’ ರಮಣ ಮಹರ್ಷಿ ಧ್ಯಾನಪೀಠ’ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಸಲಾಗುತ್ತದೆ ಎಂದು ರಂಗಾಯಣದ ಪದವೀಧರ ಹಾಗೂ ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿ ಮಾರುತೇಶ ಕಸಾಪುರ ರವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಶಿಬಿರದ ನಿರ್ದೇಶಕ ಮಾರುತೇಶ ಕಸಾಪುರ ಹಾಗೂ ಶಿಬಿರದ ನಿರ್ವಾಹಕರಾದ ನವೀನ ಕುಮಾರ್. ಎನ್. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 8722662258. 9741683284.9483762455
