ತುಮಕೂರು ಜಿಲ್ಲೆಯ ದಿಬ್ಬೂರಿನಲ್ಲಿರುವ ಆರ್ಟಿಒ ಬ್ರೋಕರ್ ಸತೀಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಜನವರಿ 8ರಂದು ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ನಿವೃತ್ತ ಆರ್ಟಿಒ ಅಧಿಕಾರಿ ರಾಜು ಅವರ ಬೆಂಗಳೂರಿನ ಮನೆ ಮೇಲೆ ದಾಳಿ ನಡೆದಿತ್ತು. ಸತೀಶ್ ಎಂಬಾತ ಆರ್ಟಿಒ ಅಧಿಕಾರಿ ರಾಜು ಅವರ ಆಪ್ತ ಎನ್ನಲಾಗಿದ್ದು, ಇದೇ ಕಾರಣಕ್ಕೆ ಸತೀಶ್ ಅವರ ಮನೆಯ ಮೇಲೆ ಲೋಕಾಧಿಕಾರಿಗಳು ದಾಳಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಪೊಲೀಸರ ಕಿರುಕುಳದಿಂದ ವ್ಯಕ್ತಿ ಸಾವು; ಪತ್ನಿಯಿಂದ ದೂರು
ಲೋಕಾಯುಕ್ತ ಎಸ್ಪಿ ಲಕ್ಷ್ಮಿನಾರಾಯಣ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಸುಮಾರು 8 ಅಧಿಕಾರಿಗಳ ತಂಡ ಆರ್ಟಿಒ ಬ್ರೋಕರ್ ಸತೀಶ್ ಮನೆಯಲ್ಲಿ ಹಲವು ದಾಖಲೆಗಳನ್ನು ಪರಿಶೀಲಿಸಿದೆ.
