ತುಮಕೂರು | ತೇಜಸ್ವಿಯವರ ವೈಚಾರಿಕ ಚಿಂತನೆಗಳನ್ನು ಜನರು ಸ್ವೀಕರಿಸಬೇಕು: ಮಲ್ಲಿಕಾ ಬಸವರಾಜು

Date:

Advertisements

ತೇಜಸ್ವಿಯವರ ಬರಹಗಳನ್ನು ಓದಿದರೆ, ನಮ್ಮ ಅಹಂಕಾರವೆಲ್ಲಾ ಕರಗಿ, ಅಗಾಧವಾದ ಪ್ರಕೃತಿಯಲ್ಲಿ ನಾವು ಒಂದು ಅಣುಮಾತ್ರ ಅನಿಸುತ್ತದೆ. ಕುವೆಂಪು ಅವರ ವೈಚಾರಿಕ ಚಿಂತನೆಗಳಿಗೆ ಜೀವ ಬಂದಂತೆ ತೇಜಸ್ವಿಯವರು ಬದುಕಿದರು ಎಂದು ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಅಭಿಪ್ರಾಯಪಟ್ಟರು.

ತುಮಕೂರು ನಗರದ ಜನ ಚಳುವಳಿ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ, ವಿಚಾರ ಮಂಟಪ ಸಹಯೋಗದಲ್ಲಿ ,ಕೆ.ಪಿ.ಪೂರ್ಣಚಂದ್ರ ತೇಜಸ್ವಿ ರವರ ನೆನಪಿನ ” ನನ್ನ ಗ್ರಹಿಕೆಯ ತೇಜಸ್ವಿ ” ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿಯನ್ನು ಅದು ಹೇಗಿದೆಯೋ ಹಾಗೆ ಉಳಿಸಿಕೊಳ್ಳಬೇಕಾದ ಅಗತ್ಯವನ್ನು ತಿಳಿಸಿದರು .ಇಂದಿನ ಬಹುಪಾಲು ಯುವಜನತೆ ,ತೇಜಸ್ವಿಯವರ ನಿರ್ಭಯ ನಡೆ ,ಚಾರಣಕ್ಕೆ ಮಾರುಹೋದ ಹಾಗೆ ,ಅವರ ವೈಚಾರಿಕ ಚಿಂತನೆಗಳಿಗೆ ,ಜಾತ್ಯಾತೀತ ನಡೆಗೆ ಕನೆಕ್ಟ್ ಆಗ್ತಾ ಇಲ್ಲ . ತೇಜಸ್ವಿರವರ ವೈಚಾರಿಕತೆಯ ನ್ನೂ ನಾವು ರೂಢಿಸಿಕೊಳ್ಳಬೇಕಿದೆ ” ಎಂದರು

ಡಾ. ರೇಖಾ ಹಿಮಾನಂದ್ ಮಾತನಾಡಿ ” ತೇಜಸ್ವಿರವರು ಇಂದು ಇದ್ದಿದ್ದರೆ ,80 ರ ಹಿರಿಯರಾಗಿರುತ್ತಿದ್ದರು . ಅವರ ಬರಹದಲ್ಲಿ ಸ್ಥಳೀಯತೆಗೆ ಒತ್ತು ಕೊಟ್ಟರು .ಅವರು ಗುರು ,ಗೆಳೆಯ ,ಅನುಭಾವಿ ಏನೆಲ್ಲಾ ಆಗಿದ್ದರು .ಅವರೊಳಗೊಬ್ಬ ಸಾಹಸಿ ಇದ್ದರು .ಎಲ್ಲವನ್ನೂ ಸದಾ ಕುತೂಹಲದಿಂದ ಗಮನಿಸುತ್ತಿದ್ದರು.ಪ್ರಕೃತಿ ಮತ್ತು ಮನುಷ್ಯನ ನಡುವೆ ಇರುವ ಅಂತರವನ್ನೇ ತೆಗೆದು ಹಾಕಿದರು. ಕುವೆಂಪುರವರ ಮೂಲಕ ಗುರುತಿಸಿಕೊಳ್ಳದೇ ,ತಮ್ಮದೇ ಸ್ವತಂತ್ರ ಅಭಿವ್ಯಕ್ತಿ ಕಂಡುಕೊಂಡರು .ತೇಜಸ್ಚಿ ರವರು ಕನ್ನಡ ಸಾಹಿತ್ಯ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿರುವರು .ಅವರ ಮಿಲೇನಿಯಂ ಸರಣಿಯ ಪುಸ್ತಕಗಳು ಅದ್ಭುತವಾಗಿವೆ ” ಎಂದರು.

Advertisements

ತುಮಕೂರು ವಿವಿ ಹಿರಿಯ ಸಂಶೋಧನಾರ್ಥಿ ಧನುಷ್ ಎಚ್ ಶೇಖರ್ ಮಾತನಾಡಿ ” ತೇಜಸ್ವಿ ಬಹುದೊಡ್ಡ ಕಥೆಗಾರರು . ಇವರ ಕಥೆಗಳಲ್ಲಿ ಇರುವ ಪ್ರಾದೇಶಿಕತೆ ಬಹಳ ಮುಖ್ಯ. ಪ್ರಶಸ್ತಿ ಗಳಿಗಾಗಿ ಹಾತೊರೆಯದೆ ಪ್ರಕೃತಿಯ ನಡುವೆ ಬದುಕುತ್ತಾ ಅಲ್ಲಿನ ಮೌನವನ್ನು ಧ್ಯಾನಿಸಿದರು . ಅಧಿಕಾರದ ಸ್ಥಾನಗಳಿಂದ ಅಂತರ ಕಾಯ್ಧುಕೊಂಡರು .ಸೈದ್ದಾಂತಿಕ ಭಿನ್ನತೆಗಳ ನಡುವೆಯೂ ಮನುಷ್ಯ ಸಂಬಂಧಗಳನ್ನು ಉಳಿಸಿಕೊಂಡರು ಎಂದು ಹೇಳಿ ಅನಂತಮೂರ್ತಿ ಮತ್ತು ತೇಜಸ್ವಿರವರ ಸಂಬಂಧದ ಬಗ್ಗೆ ಪ್ರಸ್ತಾಪಿಸಿದರು.

ಸಂಶೋಧನಾರ್ಥಿ ನವೀನ್ ಮಾತನಾಡಿ” ಯಾರನ್ನೂ ಮೆಚ್ಚಿಸುವ ಇರಾದೆ ತೇಜಸ್ವಿರವರಿಗೆ ಇರಲಿಲ್ಲ .
ತೇಜಸ್ವಿರವರನ್ನು ಕಾಡು ,ಫೋಟೊಗ್ರಫಿ ,ಚಾರಣ ಕ್ಕಷ್ಟೇ ಸೀಮಿತಗೊಳಿಸಬಾರದು .ಅವರೊಳಗಿದ್ದ ವೈಚಾರಿಕತೆಯನ್ನು ಜನರು ಸ್ವೀಕರಿಸಬೇಕು ಎಂದು ಹೇಳುತ್ತಾ ,ತೇಜಸ್ವಿರವರು ತಮ್ಮ ತಂದೆ ಕುವೆಂಪುರವರ ಚಿತೆಗೆ ಬಲಗೈನಲ್ಲಿ ಅಗ್ನಿಸ್ಪರ್ಶ ಮಾಡಿದ್ದನ್ನು ನೆನಪಿಸಿಕೊಂಡರು.

ಹರ್ಷಚರ್ಧನ್ ” ತೇಜಸ್ವಿರವರ ಕಥೆಗಳು ,ನಮ್ಮ ಸುತ್ತಲಿನ ಬದುಕನ್ನು ತೆರೆದಿಡುವಂತಹವೇ ಆಗಿವೆ .ಅವರ ಮಿಲೇನಿಯಂ ಸರಣಿ ಪುಸ್ತಕಗಳು ಅಧ್ಬುತ ವಾಗಿ ಮೂಡಿಬಂದಿವೆ” ಎಂದರು.

“ಸಮಾಜದ ದೃಷ್ಟಿಯಲ್ಲಿ ಪ್ರಾಮುಖ್ಯವೆನಿಸದ ,ಕಟ್ಟಕಡೆಯ ವ್ಯಕ್ತಿ ಮಂದಣ್ಣನಂಥವರನ್ನೂ ತೇಜಸ್ವಿ ತಮ್ಮ ಬರಹದಲ್ಲಿ ಅಧ್ಬುತವಾಗಿ ಕಟ್ಟಿಕೊಟ್ಟಿರುವರು” ಎಂದು ಪುನೀತ್ ತಿಳಿಸಿದರು.

ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ,ಪಿಎಚ್ ಡಿ ಸಂಶೋಧನಾರ್ಥಿಗಳು ,ಉಪನ್ಯಾಸ ಕರು ಮತ್ತು ಲೇಖಕಿಯರು ತಮ್ಮ ,ತಮ್ಮ ಗ್ರಹಿಕೆಗೆ ಸಿಕ್ಕ ತೇಜಸ್ವಿರವರನ್ನು ಕುರಿತು ಮಾತನಾಡಿದರು .

ಕಾರ್ಯಕ್ರಮದಲ್ಲಿ ಡಾ. ಆಶಾರಾಣಿ ಬಗ್ಗನಡು, ತರಂಗಿಣಿ ,ಮಾರುತಿ ,ಪಾರ್ವತಿ ,ನಂದನ್,ವಿಚಾರ ಮಂಟಪದ ವರುಣ್ ರಾಜ್ ಭಾಗವಹಿಸಿದ್ದರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X