ಹುಟ್ಟಿನಿಂದಲೇ ಯಾರೂ ಮಾನಸಿಕರೋಗಿಗಳಾಗಿರುವುದಿಲ್ಲ. ಅವರ ಸುತ್ತ ಮುತ್ತಲಿನ ಪರಿಸರ ಅವರನ್ನು ಮಾನಸಿಕ ರೋಗಿಯಾಗಿ ಪರಿವರ್ತಿಸುತ್ತದೆ ಎಂದು ಲಯನ್ಇಂಟರ್ ನ್ಯಾಷನಲ್ ಪಿ.ಎಂ.ಜಿ.ಎಫ್. ಸಂಸ್ಥೆಯ ಮುಖ್ಯಸ್ಥ ಬಿ.ಎಸ್. ರಾಜಶೇಖರ್ ಅಭಿಪ್ರಾಯಪಟ್ಟರು.
ನಗರದ ಸ್ನೇಹ ಮನೋವಿಕಾಸ ಕೇಂದ್ರ, ಸೇಜಲ್ ನ್ಯೂ ಲೈಫ್ ಪೌಂಡೇಶನ್ ಹಾಗೂ ತುಮಕೂರು ವಿವಿಯ ಎಂಎಸ್ ಡಬ್ಲ್ಯೂ ವಿದ್ಯಾರ್ಥಿಗಳ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪ್ರದೇಶವಾರು ಮಹಿಳಾ ಸಬಲೀಕರಣ ಉಪಕ್ರಮ -1 ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾನಸಿಕ ರೋಗಿಗಳಿಗೆ ಎರಡು ಹೊಲಿಗೆ ಯಂತ್ರವನ್ನು ಉಚಿತವಾಗಿ ವಿತರಿಸಿ ಮಾತಾನಾಡಿದ ಅವರು ಮಾನಸಿಕವಾಗಿ ಗೊಂದಲಕ್ಕೆ ಒಳಗಾದವರನ್ನು ಸರಿ ದಾರಿಗೆ ತರುವ ಕೆಲಸ ಅಷ್ಟು ಸುಲಭದಲ್ಲ. ಬಹಳಷ್ಟು ಸಂಯಮ ಇರಬೇಕಾಗುತ್ತದೆ. ಇಲ್ಲಿನ ವಾತಾವರಣ ಮಾನಸಿಕ ರೋಗಿಗಳು ಗುಣವಾಗಲು ಪೂರಕವಾಗಿದೆ. ಮಹಿಳಾ ಸಬಲೀಕರಣ ಉದ್ದೇಶದಿಂದ ಈ ಮನೋ ಕೇಂದ್ರಕ್ಕೆ ಎರಡು ಹೊಲಿಗೆ ಯಂತ್ರಗಳನ್ನು ನೀಡುತ್ತಿರುವುದು ಖುಷಿಯಾಗುತ್ತಿದೆ ಎಂದರು.
ಸ್ನೇಹ ಮನೋ ವಿಕಾಸ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಲೋಕೇಶ್ ಬಾಬು ಮಾತನಾಡಿ, ಮುಖ್ಯವಾಗಿ ಮಾನಸಿಕ ರೋಗಿಗಳು ಸಮಾಜದಿಂದ ನಗೆ ಪಟಾಲಿಗೆ ಗುರಿಯಾಗುತ್ತಾರೆ. ಅವರ ಮನೆಯವರು ಅವರನ್ನು ಪ್ರೀತಿಸಬೇಕು. ಆದರೆ ಮನೆಯವರೇ ಅವರನ್ನು ಹೀಯಾಳಿಸುತ್ತಾರೆ ಇದು ಸರಿಯಲ್ಲ ಎಂದರು.
ಕಾರ್ಯಕ್ರಮದಲ್ಲಿ ಲಯನ್ ಇಂಟರ್ ನ್ಯಾಷನಲ್ ತಂಡದ ಜಿಲ್ಲಾ ಸಂಯೋಜಕರಾದ ರವಿಚಂದ್ರನ್, ಲಯನ್ಸ್ ನ ಮಹಿಳಾ ಸಬಲೀಕರಣ ಜಿಲ್ಲಾ ಮುಖ್ಯಸ್ಥರಾದ ಶಾರದಾ ವಿ ಮುಳಗುಂದ, ಸೇಜಲ್ ನ್ಯೂ ಲೈಫ್ ಪೌಂಡೇಶನ್ ಕಾರ್ಯದರ್ಶಿ ಡಾ. ಪದ್ಮಾಕ್ಷಿ ಲೋಕೇಶ್, ಲಯನ್ಸ್ ನ ಪ್ರಾದೇಶಿಕ ಕಾರ್ಯದರ್ಶಿಯಾದ ದೇವತ ಬಿ.ಎನ್, ಅಮೃತ ಹಾಗೂ ಕಾವ್ಯಶ್ರೀ ಉಪಸ್ಥಿತರಿದ್ದರು.
