ತುಮಕೂರು ನಗರದ ಎಂ.ಜಿ ರಸ್ತೆಯ ಭಾರತಿ ಟೀ ಶಾಪ್‌ನಲ್ಲಿ ಕೋಕಾಕೋಲಾ ಕಂಪನಿಯ ಉತ್ಪನ್ನವಾಗಿರುವ ಸ್ಪ್ರೈಟ್ ಕೂಲ್ ಡ್ರಿಂಕ್‌ನಲ್ಲಿ ಹುಳ ಪತ್ತೆಯಾಗಿದೆ.
ಸ್ಪ್ರೈಟ್(Sprite) ಕೂಲ್ ಡ್ರಿಂಕ್‌ನಲ್ಲಿ ಜೇಡ ರೂಪದ ಹುಳ ಪತ್ತೆಯಾಗಿರುವುದು ಕೂಲ್ ಡ್ರಿಂಕ್ಸ್ ಪ್ರಿಯರನ್ನು
ಬೆಚ್ಚಿಬಿಳಿಸಿದೆ.
ಗ್ರಾಹಕ ರಕ್ಷಿತ್ ಎಂಬುವವರು ಖರೀದಿಸಿದ ಸ್ಪ್ರೈಟ್‌ನಲ್ಲಿ ಹುಳ ಪತ್ತೆಯಾಗಿತ್ತು. ರಕ್ಷಿತ್ ಆಹಾರ ಸುರಕ್ಷತಾ ಇಲಾಖೆಗೆ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಿಂದ ಟೀ ಶಾಪ್‌ನಲ್ಲಿ ಪರಿಶೀಲನೆ ನಡೆಸಿದ್ದು, ಉಳಿದಿದ್ದ ಸ್ಪ್ರೈಟ್ ಬಾಟಲಿಗಳನ್ನ ವಶಕ್ಕೆ ಪಡೆದು ಅಧಿಕಾರಿಗಳು ಪರೀಕ್ಷೆಗೆ ಕಳುಹಿಸಿದ್ದಾರೆ. ಅಂಗಡಿ ಮಾಲೀಕರು, ವಿತರಕ ಹಾಗೂ ಕಂಪನಿ ವಿರುದ್ಧ ದೂರು ದಾಖಲಿಸಿದ್ದಾರೆ.
ತುಮಕೂರು ನಗರದ ಎಂ.ಜಿ ರಸ್ತೆಯ ಭಾರತಿ ಟೀ ಶಾಪ್ ನಲ್ಲಿ ಕೋಕೊ ಕೋಲಾ ಕಂಪನಿಯ ಪ್ರಾಡಕ್ಟ್ ಸ್ಪ್ರೈಟ್ ಕೂಲ್ ಡ್ರಿಂಕ್ ನಲ್ಲಿ ಹುಳ ಪತ್ತೆಯಾಗಿದೆ. ಸ್ಪ್ರೈಟ್( Sprite) ಕೂಲ್ ಡ್ರಿಂಕ್ ನಲ್ಲಿ ಜೇಡ ರೂಪದ ಹುಳ ಪತ್ತೆಯಾಗಿದೆ. ಗ್ರಾಹಕರ ದೂರಿನ ಮೇರೆಗೆ ಪರಿಶೀಲನೆ ನಡೆಸಿದ ತುಮಕೂರು ತಾಲೂಕು ಆಹಾರ ಸಂರಕ್ಷಣಾಧಿಕಾರಿ ಎಸ್ ನಾರಯಣಪ್ಪ. pic.twitter.com/4hY4X4BqBv
— eedina.com ಈ ದಿನ.ಕಾಮ್ (@eedinanews) July 5, 2024
“ಗ್ರಾಹಕರು ಫೋನ್ ಕರೆ ಮಾಡಿ ನೀಡಿದ ಮಾಹಿತಿ ಆಧರಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಒಂದು ಬಾಟಲ್‌ನಲ್ಲಿ ಹುಳ ಪತ್ತೆಯಾಗಿದೆ. ಅಂಗಡಿಯಲ್ಲಿದ್ದ ಉಳಿದ 22 ಕೂಲ್ ಡ್ರಿಂಕ್ ಬಾಟಲಿಗಳನ್ನು ವಶಕ್ಕೆ ಪಡೆದು ಗುಣಮಟ್ಟ ಪರೀಕ್ಷೆಗೆ ಕಳಿಸಲಾಗಿದೆ. ಸಂಬಂಧಿಸಿದ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಗುಣಮಟ್ಟದ ವರದಿ ಬಂದ ನಂತರ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರಾಥಮಿಕವಾಗಿ ಈಗಾಗಲೇ ದಂಡ ವಿಧಿಸಲಾಗಿದೆ” ಎಂದು ತುಮಕೂರು ತಾಲೂಕು ಆಹಾರ ಸಂರಕ್ಷಣಾಧಿಕಾರಿ ಎಸ್ ನಾರಯಣಪ್ಪ ಈ ದಿನ.ಕಾಮ್‌ಗೆ ಮಾಹಿತಿ ನೀಡಿದ್ದಾರೆ.
