ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಲ್ಲಿ 11 ಮಂದಿ ದುರ್ಮರಣ ಹಿನ್ನೆಲೆ, ಕುಣಿಗಲ್ ಮೂಲದ ಮೃತ ಮನೋಜ್ ಕುಟುಂಬಕ್ಕೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಪರಿಹಾರದ 25 ಲಕ್ಷದ ಚೆಕ್ ವಿತರಣೆ ಮಾಡಿದರು.
ಎಷ್ಟು ಹಣ ಕೊಟ್ಟರೇನು ನಮ್ಮ ಮಗ ವಾಪಸ್ ಬರ್ತಾನ ಎಂದು ಕಣ್ಣೀರು ಹಾಕಿದ ಮನೋಜ್ ತಂದೆ ದೇವರಾಜು ಅವರು ಮಗನ ಎಜುಕೇಶನ್ ಇನ್ನೆರಡು ವರ್ಷದಲ್ಲಿ ಮುಗಿಯುತ್ತಿತ್ತು. ಫಾರಿನ್ ಗೆ ಹೋಗಿ ದುಡಿಬೇಕು ಅಂದುಕೊಂಡಿದ್ದ.ಜುಲೈ 27ರಂದು ಮನೋಜ್ ಬರ್ತ್ ಡೆ ಇತ್ತು. ಅವನ ಬರ್ತ್ ಡೆಗೆ ಬೈಕ್ ಗಿಫ್ಟ್ ಕೊಡ್ಬೇಕು ಅಂದುಕೊಂಡಿದ್ದೆ. ಹೀಗಾದರೆ ಒಬ್ಬಬ್ಬರೇ ಮಕ್ಕಳಿರುವ ತಂದೆ ತಾಯಿಯ ಗತಿ ಏನು. ದಯವಿಟ್ಟು ಮುಂದಿನ ದಿನಗಳಲ್ಲಿ ಈತರಹದ ಕಾರ್ಯಕ್ರಮ ನಡೆಸುವಾಗ ಮುನ್ನೆಚ್ಚರಿಕೆಯಿಂದ ಮಾಡಿ ಎಂದು ಮನೋಜ್ ತಂದೆ ದೇವರಾಜು ಸರ್ಕಾರಕ್ಕೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಹಾಗೂ ಕುಣಿಗಲ್ ತಹಸೀಲ್ದಾರ್ ರಶ್ಮಿ ಇದ್ದರು.