ತುಮಕೂರು | ರಸ್ತೆ ಬದಿ ಸಸಿ ಪೋಷಣೆಗೆ ಸಾರ್ವಜನಿಕರ ಸಹಕರ ಕೇಳಿದ ಅರಣ್ಯ ಇಲಾಖೆ

Date:

Advertisements

ಬಿಸಿಲಿನ ಝಳಕ್ಕೆ ಹೈರಾಣಾದ ಜನ, ಜಾನುವಾರುಗಳ ರಕ್ಷಣೆಗೆ ಮುಂದಾದ ಸಾಮಾಜಿಕ ಅರಣ್ಯ ಇಲಾಖೆ, ಗುಬ್ಬಿ ತಾಲೂಕಿನಲ್ಲಿ ರಸ್ತೆ ಬದಿಯಲ್ಲಿ ನೆಟ್ಟ ಸಸಿಗಳಿಗೆ ನೀರು ಹಾಕಿ ಪೋಷಿಸುವ ಕೆಲಸ ಮಾಡುತ್ತಿದೆ. ಪೋಷಣೆ ಕಾರ್ಯಕ್ಕೆ ಅರಣ್ಯ ಇಲಾಖೆ ಸಾರ್ವಜನಿಕರ ಸಹಕಾರ ನೀಡುವಂತೆ ಕರೆ ನೀಡಿದೆ.

ಗ್ರಾಮೀಣ ಭಾಗದಲ್ಲಿನ ರಸ್ತೆಯ ಬದಿಯಲ್ಲಿ ನೆಟ್ಟ ಸಾಂಪ್ರದಾಯಿಕ ಸಸಿಗಳನ್ನು ಎರಡು ವರ್ಷಗಳ ಕಾಲ ಪೋಷಣೆ ಮಾಡಿದ ಸಾಮಾಜಿಕ ಅರಣ್ಯ ಇಲಾಖೆ ಸಿಬ್ಬಂದಿ, ಈಗಿನ ತಾಪಮಾನಕ್ಕೆ ಸಸಿ ಉಳಿಸುವ ನಿಟ್ಟಿನಲ್ಲಿ ಐದಾರು ವರ್ಷ ಬೆಳೆದು ನಿಂತ ದೊಡ್ಡ ಗಿಡಕ್ಕೂ ನೀರು ನೀಡುತ್ತಿದ್ದಾರೆ. ಈಚೆಗೆ ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುವ ಬೆಂಕಿಗೆ ಆಹುತಿಯಾದ ದೊಡ್ಡ ಗಿಡಗಳನ್ನು ಮತ್ತೇ ಬೆಳೆಸುವ ಪ್ರಯತ್ನ ಮಾಡಿ, ಇಂದು ಶೇ. 75ರಷ್ಟು ಗಿಡಗಳನ್ನು ಉಳಿಸಿ ಬೆಳೆಸಲಾಗುತ್ತಿದೆ ಎಂದು ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ ತಿಳಿಸಿದ್ದಾರೆ.

ಸರ್ಕಾರಿ ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿ ಕೇಂದ್ರಗಳು, ಉದ್ಯಾನವನಗಳು ಸೇರಿದಂತೆ ಸರ್ಕಾರಿ ಕಚೇರಿ ಆವರಣ ಹಾಗೂ ಸರ್ಕಾರಿ ಜಾಗದಲ್ಲಿ ಸಸಿ ನೆಟ್ಟು ಪೋಷಿಸಲಾಗಿದೆ. ಆದರೆ, ಈ ಸಸಿಗಳನ್ನು ಉಳಿಸಿಕೊಳ್ಳುವ ಕೆಲಸಕ್ಕೆ ಸಮುದಾಯ ಸಹಕಾರ ನೀಡಬೇಕು. ತಮ್ಮ ತೋಟದ ಗಿಡಮರಗಳನ್ನು ಪೋಷಿಸುವ ರೀತಿಯಲ್ಲೇ ಊರಿನ ರಸ್ತೆ ಬದಿಯ ಮರಗಳು, ಪಾರ್ಕ್ ಗಳು, ಅರಣ್ಯ ಪ್ರದೇಶಗಳು, ಗುಂಡು ತೋಪುಗಳು ಉಳಿಸಿಕೊಳ್ಳುವ ಕೆಲಸ ಇಲಾಖೆ ಮಾಡುತ್ತದೆ. ಈ ಕಾರ್ಯಕ್ಕೆ ಸಾರ್ವಜನಿಕರು ಸಂಪೂರ್ಣ ಬೆಂಬಲ ನೀಡಿ ಜೊತೆಗೆ ನಿಲ್ಲಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ.

Advertisements

ಶೇ. 17ರ ಪ್ರಮಾಣಕ್ಕೆ ಇಳಿದ ಅರಣ್ಯ ಪ್ರದೇಶ ಶೇಕಡಾ 33ಕ್ಕೆ ಏರಬೇಕಿದೆ. ಬಿಸಿಲಿನ ತಾಪಮಾನ ದಾಖಲೆಯಲ್ಲಿ ಸಾಗುತ್ತಿದೆ. ಈ ಮೊದಲು ಬೇಸಿಗೆಯಲ್ಲಿ 33 ಅಥವಾ 34 ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದ ತಾಪಮಾನ ಇಂದು 50ರ ಗಡಿ ಮುಟ್ಟಿದೆ. ದಿನ ಕಳೆದಂತೆ ಏರುಮುಖದಲ್ಲಿ ಸಾಗುವ ಬಿಸಿಲು ಮುಂದಿನ ದಿನಮಾನದಲ್ಲಿ 60ಡಿಗ್ರಿ ಸೆಲ್ಸಿಯಸ್ ಮುಟ್ಟುವ ಆತಂಕ ಎದುರಾಗಿದೆ. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಪ್ರತಿ ವ್ಯಕ್ತಿ ಎರಡು ಸಸಿ ನೆಟ್ಟು ಪೋಷಿಸುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕಿದೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಸ್ಲೋಗನ್ ನಿಜಾರ್ಥ ಈಗ ಜನರ ಮನದಲ್ಲಿ ಮೂಡುತ್ತಿದೆ. ಈ ನಿಟ್ಟಿನಲ್ಲಿ ಹಸಿರು ಕ್ರಾಂತಿ ಮಾಡಲು ಸಾಮಾಜಿಕ ಸಂಘ ಸಂಸ್ಥೆಗಳು, ಪರಿಸರ ಪ್ರೇಮಿಗಳು ಹಾಗೂ ರೈತಾಪಿ ವರ್ಗ ಮುನ್ನುಗ್ಗಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡದೆ.

ಗುಬ್ಬಿ ತಾಲೂಕಿನ ಯಡವನಹಳ್ಳಿ ರಸ್ತೆಯ ಬದಿಯಲ್ಲಿದ್ದ ದೊಡ್ಡ ಸಸಿಗಳು ಬೆಂಕಿಗೆ ಆಹುತಿಯಾಗಿತ್ತು. ಕೂಡಲೇ ನೀರು ಹಾಕಿ ಸಸಿ ಪೋಷಣೆ ನಡೆಸಿ ಬಹುತೇಕ ಸಸಿಗಳನ್ನು ಉಳಿಸಿದ್ದೇವೆ. ರಸ್ತೆ ಬದಿಯಲ್ಲಿ ಮರಗಿಡಗಳ ಬುಡದಲ್ಲಿ ಬೆಂಕಿ ಹಚ್ಚುವ ಕೆಟ್ಟ ಕೆಲಸ ಮಾಡಬಾರದು  ಎಂದು ಗುಬ್ಬಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಮೇಘನಾ ಹೇಳಿದರು.

ಬಿಸಿಲಿನ ಹೆಚ್ಚಳದ ಬಗ್ಗೆ ಜಾಗೃತಿ ಮೂಡಬೇಕಿದೆ. ಹಸಿರು ಬೆಳೆಸುವ ಕಾರ್ಯ ಸಾಮಾಜಿಕ ಜವಾಬ್ದಾರಿ ಹೊತ್ತು ಜನರು ಮಾಡಬೇಕಿದೆ. ತಮ್ಮೂರಿನ ಖಾಲಿ ಜಾಗದಲ್ಲಿ ಸಸಿ ನೆಟ್ಟು ಬೆಳೆಸುವ ಕೆಲಸ ಮಾಡಬೇಕು. ಈ ಕಾರ್ಯಕ್ಕೆ ಹಲವು ಸಾಮಾಜಿಕ ಸಂಘ, ಸಂಸ್ಥೆಗಳು ಕೈ ಜೋಡಿಸಲಿದೆ ಎಂದು ಗುಬ್ಬಿ ಸಾಮಾಜಿಕ ಹೋರಾಟಗಾರ ನಾಗಸಂದ್ರ ವಿಜಯ್ ಕುಮಾರ್ ಹೇಳಿದರು.

ವರದಿ ಎಸ್. ಕೆ. ರಾಘವೇಂದ್ರ, ಸಿಟಿಜನ್ ಜನರ್ಲಿಸ್ಟ್, ಗುಬ್ಬಿ

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X