ಬೆಂಗಳೂರಿನ ಈ ಪ್ರದೇಶದಲ್ಲಿ ವಾರಕ್ಕೆ 2 ಗಂಟೆ ಮಾತ್ರ ನೀರು; ಹೇಳೋರಿಲ್ಲ-ಕೇಳೋರಿಲ್ಲ

Date:

ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಚಿಕ್ಕ ಬಾಣಸವಾಡಿಯ ಕೊಳಗೇರಿ ಪ್ರದೇಶಗಳಲ್ಲಿ ಈ ಹಿಂದೆ ಪ್ರತಿದಿನ 24 ಗಂಟೆಗಳ ಕಾಲ ನಿರಂತರ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈಗ ವಾರಕ್ಕೆ ಕೇವಲ ಎರಡು ಗಂಟೆ ನೀರು ಸಿಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ನೀರು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಅವರು ದುಡಿಯುವ ಅರ್ಧದಷ್ಟು ಹಣವನ್ನು ಪ್ರತಿದಿನ ನೀರು ಖರೀದಿಸಲು ಖರ್ಚು ಮಾಡುವಂತಾಗಿದೆ.

- Advertisement -

ಲೋಕಸಭೆ ಚುನಾವಣೆ ಹಿನ್ನೆಲೆ, ಯಾರಾದರೂ ನಾಯಕರು ಬಂದು ನಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವು. ಆದರೆ, ನಮ್ಮ ಮತದಾನದ ಹಕ್ಕು ಬೇರೆ ಪ್ರದೇಶದಲ್ಲಿ ಇರುವುದರಿಂದ, ನಮ್ಮನ್ನು ಇಲ್ಲಿ ಆದ್ಯತೆಯ ನಾಗರಿಕರೆಂದು ಪರಿಗಣಿಸಲಾಗುತ್ತಿಲ್ಲ”ಎಂದು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರೊಬ್ಬರು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

ಬೆವರಿನ ಹಣಕ್ಕೆ ಮೋದಿ ಸರ್ಕಾರದ ಕಂಟಕ: ಹೊಸ ಪಿಎಫ್...

ತಮ್ಮದೇ ಬೆವರಿನ ಗಳಿಕೆ, ತುರ್ತು ಬದುಕಿನ ಆಸರೆ ಪಿಎಫ್. ಆದರೆ ಇಂದು ಆ ಹಣವನ್ನು ಪಡೆಯಲಾಗದೆ ಗಾರ್ಮೆಂಟ್ಸ್ ಕಾರ್ಮಿಕರು ಕಣ್ಣೀರು ಹಾಕುವಂತಾಗಿದೆ. ಬಟ್ಟೆ ಕಾರ್ಖಾನೆಗಳ ಶ್ರಮಿಕರ ಬದುಕಿಗೆ ಕೇಂದ್ರದ ಮೋದಿ ಸರ್ಕಾರದ ಹೊಸ...

“ಆರಂಭದಲ್ಲಿ ಕೆಲವು ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದರು. ಆದರೆ, ಈಗ ನಾವು ನಮ್ಮ ದೈನಂದಿನ ಕೆಲಸಗಳಲ್ಲಿ ನಮಗೆ ಸಹಾಯ ಮಾಡಲು, ನೀರನ್ನು ತರುವ ಕೆಲಸ ಮಾಡುತ್ತಿದ್ದಾರೆ. ನೀರಿನ ಗುಣಮಟ್ಟವನ್ನು ಲೆಕ್ಕಿಸದೆ ಕಡಿಮೆ ದುಡ್ಡಿಗೆ ನೀರು ಮಾರಾಟ ಮಾಡುವವರಿಂದ ನಾವು ನೀರನ್ನು ಖರೀದಿಸುತ್ತೇವೆ” ಎಂದರು.

“ಈ ದಿನಗಳಲ್ಲಿ ನನ್ನ ಆಟೋ ವಾಶ್ ವ್ಯಾಪಾರವು ಯಾವುದೇ ಆದಾಯವನ್ನು ಗಳಿಸುತ್ತಿಲ್ಲ. ಹಾಗಾಗಿ, ನನ್ನ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲು ನನಗೆ ಸಾಧ್ಯವಾಗುತ್ತಿಲ್ಲ” ಎಂದು ಅವರು ಹೇಳಿದರು.

ಸುಮಾರು 40-50 ಜನರು ವಾಸಿಸುವ ಡಿಜೆ ಹಳ್ಳಿಯಲ್ಲಿ ವಾರಕ್ಕೆ ಎರಡು ಗಂಟೆ ನೀರು ಸಿಗುತ್ತದೆ. ಒಂದು ಗಂಟೆ ಕುಡಿಯುವ ನೀರಿಗಾಗಿ ಮೀಸಲಿಟ್ಟರೆ, ಇನ್ನೊಂದು ಗಂಟೆ ಪ್ರತ್ಯೇಕ ದಿನಗಳಲ್ಲಿ ಶುದ್ಧೀಕರಿಸಿದ ನೀರಿಗಾಗಿ ಮೀಸಲಿಡಲಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ರೇಷ್ಮಾ.

“ನಾವು ನೆಲೆಸಿರುವ ಪ್ರದೇಶ ತುಂಬಾ ಕಿರಿದಾಗಿದೆ. ಹಾಗಾಗಿ, ನೀರಿನ ಟ್ಯಾಂಕರ್‌ಗಳನ್ನು ಒಳಗೆ ಬರಲು ಸಾಧ್ಯವಿಲ್ಲ. ಹೆಚ್ಚಿನ ಹಣವನ್ನು ನೀರು ಖರೀದಿ ಮಾಡಲು ಸಾಧ್ಯವಿಲ್ಲ”ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಬಹುತೇಕ ಮಂದಿ ಮಾಂಸದ ಅಂಗಡಿಗಳು, ಪೀಠೋಪಕರಣಗಳ ಅಂಗಡಿ ಹಾಗೂ ಬಣ್ಣದ ಹೊಡೆಯುವ ಕಾರ್ಮಿಕರು ನೆಲೆಸಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ದೈನಂದಿನ ಆದಾಯವನ್ನು ಅವಲಂಬಿಸಿದ್ದಾರೆ. ಆಗಾಗ ನೀರು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬದಿಂದ ನಿತ್ಯದ ದಿನಚರಿಗೆ ತೊಂದರೆಯಾಗುತ್ತಿದ್ದು, ಆದಾಯದ ಮೇಲೆ ನೇರ ಪರಿಣಾಮ ಬೀರುತ್ತಿದೆ” ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮುಂಗಾರು ಮಳೆ ನಿರ್ವಹಣೆಗೆ ಸಜ್ಜಾಗುತ್ತಿರುವ ಪಾಲಿಕೆ; ಚರಂಡಿ ಸ್ವಚ್ಛತಾ ಕಾರ್ಯದಲ್ಲಿ ನಿರತ

ಚಿಕ್ಕ ಬಾಣಸವಾಡಿಯ ನಿವಾಸಿ ರಮೇಶ್, “ನಮ್ಮ ಮನೆಗೆ ದಿನಕ್ಕೆ ಸುಮಾರು 20 ಬಿಂದಿಗೆ ನೀರು ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಹಣ ಖರ್ಚು ಮಾಡಬೇಕಾಗಿದೆ. ಸಮೀಪದ ಸಾರ್ವಜನಿಕ ಬೋರ್‌ವೆಲ್ ಕೂಡ ಬತ್ತಿ ಹೋಗಿದೆ. ಪರ್ಯಾಯ ವ್ಯವಸ್ಥೇ ಇಲ್ಲದ ಕಾರಣ ಕಳಪೆ ಗುಣಮಟ್ಟದ ನೀರು ಸಿಕ್ಕರೂ ಅದನ್ನು ಬಳಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನೀರಿನ ಕೊರತೆಯ ಸಮಸ್ಯೆಯನ್ನು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರ ಗಮನಕ್ಕೆ ತಂದಾಗ, ಅವರು ಸಮಸ್ಯೆಯನ್ನು ತಳ್ಳಿಹಾಕಿದರು. ಈ ಕೊಳಗೇರಿ ಪ್ರದೇಶಗಳಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದರು.

“ನೀರಿನ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಲು ತಪಾಸಣೆ ಹಾಗೂ ಆಗಾಗ ಸಭೆಗಳನ್ನು ನಡೆಸಲಾಗುತ್ತಿದೆ” ಎಂದು ಹೇಳಿದರು.

ಮೂಲ : ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ನೆಟ್‌ವರ್ಕ್ ಸಮಸ್ಯೆ ಬಗೆಹರಿಸಿ, ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡಿ: ಕೋಟ ಶ್ರೀನಿವಾಸ ಪೂಜಾರಿ

ಬಿ.ಎಸ್.ಎನ್.ಎಲ್. ಸಂಸ್ಥೆಯು ನೆಟ್‌ವರ್ಕ್ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಿ, ಖಾಸಗಿ ಟೆಲಿಕಾಂ ಕಂಪನಿಗಳಿಗೆ...

ಕಾರವಾರ | ಅಕ್ಟೋಬರ್ 16ರಂದು ಹಾರವಾಡದಿಂದ ಮಾಜಾಳಿವರೆಗೆ ಮೀನುಗಾರಿಕೆಗೆ ನಿರ್ಬಂಧ

ಕಾರವಾರ: ಗೌರವಾನ್ವಿತ ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಅಕ್ಟೋಬರ್ 16ರಂದು ಉತ್ತರ ಕನ್ನಡ...

ಕೋಲಾರ | 108 ಆಂಬ್ಯುಲೆನ್ಸ್ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿ: ಕೆ.ನಾರಾಯಣಗೌಡ

ಅಪತ್ಬಾಂಧವರೆಂದೇ ಕರೆಯಲಾಗುವ 108 ಆಂಬ್ಯುಲೆನ್ಸ್ ನೌಕರರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ...