ಭಯೋತ್ಪಾದನೆ ಮನುಷ್ಯ ವಿರೋಧಿ ನಡೆ. ಕಾಶ್ಮೀರ ಭಯೋತ್ಪಾದನೆ ಕೃತ್ಯವನ್ನು ನಾಗರಿಕ ಸಮಾಜ ಖಂಡಿಸಬೇಕು. ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಗೊಳಿಸುವುದು ಈ ಷಡ್ಯಂತ್ರದ ಭಾಗವಾಗಿದೆ ಎಂದು ಹಿರಿಯ ಹೋರಾಟಗಾರ ಸಿ.ಯತಿರಾಜು ಆರೋಪಿಸಿದರು.
ತುಮಕೂರು ನಗರದ ಟೌನ್ ಹಾಲ್ ವೃತ್ತದಲ್ಲಿ ಗುರುವಾರ ಸಂಜೆ ಸಿಪಿಐ(ಎಂ) ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಜಂಟಿಯಾಗಿ ಭಯೋತ್ಪಾದಕತೆ ವಿರೋಧಿಸಿ ನಡೆದ ಕ್ಯಾಂಡಲ್ ಲೈಟ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದಕತೆಯನ್ನು ಸ್ಥಳೀಯರು ಪ್ರಬಲ ಪ್ರತಿರೋಧ ಒಡ್ಡಿರುವುದು ಗುರುತಿಸಬೇಕೆಂದರು. ಇಂತಹ ಘಟನೆಗಳು ಮರುಕಳಿಸಿದಂತೆ ಕ್ರಮ ವಹಿಸಲು ಆಗ್ರಹಿಸಿದರು.
ಎಐಕೆಎಸ್ ನ ಕಂಬೇಗೌಡ ಮಾತನಾಡಿ ಭಯೋತ್ಪಾದಕತೆಯನ್ನು ಮೂಲದಿಂದಲೇ ಇಲ್ಲದಂತೆ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಯ್ಯದ್ ಮುಜೀಬ್ ಮಾತನಾಡಿ ಮೃತ ಸದಸ್ಯರ ಕುಟುಂಬಗಳಿಗೆ ಸ್ವಾಂತನ ಹೇಳಿ, ಭಯೋತ್ಪಾದಕರಿಗೆ ಧರ್ಮವಿಲ್ಲ. ಕಾಶ್ಮೀರದಲ್ಲಿ ಹಿಂದೂ, ಮುಸ್ಲಿಂ ಇಬ್ಬರನ್ನು ಕೊಲ್ಲಲಾಗಿದೆ. ಈ ಘಟನೆ ಹಿಂದೆ ಭದ್ರತಾ ವೈಫಲ್ಯದ ಬಗ್ಗೆ ಸಹ ತನಿಕೆಗೆ ಆಗ್ರಹಿಸಿದರು.
ಸ್ಲಂ ಜನಾಂದೋಲನ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ ರಕ್ಷಣೆ ನೀಡಬೇಕಾದ ಕೇಂದ್ರ ಸರ್ಕಾರ ವಿಫಲತೆಯಿದೆ. ಭಯೋತ್ಪಾದಕತೆ ಬಗ್ಗು ಬಡೆಯಲು ಎಲ್ಲಾ ಪ್ರಯತ್ನ ನಡೆಸಬೇಕೆಂದರು.
ಡಿಎಸ್ಎಸ್ ನ ಪಿ.ಎನ್.ರಾಮಯ್ಯ, ಸಮಾಜಸೇವಕ ತಾಜುದ್ದೀನ್, ಅಪ್ಸರ್‌ಖಾನ್, ಸಿಐಟಿಯುನ ಬಿ .ಉಮೇಶ್, ವಕೀಲ ಮುಹ್ಮದ್‌ಆಲಿ,ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್. ಕೆ. ಸುಬ್ರಹ್ಮಣ್ಯ, ಟಿ.ಆರ್.ಕಲ್ಪನಾ, ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಸಿ.ಅಜ್ಜಪ್ಪ, ಕಟ್ಟಡ ಕಾರ್ಮಿಕ ಸಂಘಟನೆಯ ಕಲೀಲ್, ಸಿಐಟಿಯು ತಾಲೂಕು ಮುಖಂಡ ರಂಗಧಾಮಯ್ಯ, ಪಿಂಚಣಿದಾರ ಸಂಘದ ಶಿವಲಿಂಗಯ್ಯ ವಕೀಲ ಸತ್ಯನಾರಾಯಣ್ ಆಟೋ ಚಾಲಕರ ಸಂಘದ ಇಂತಿಯಾಜ್,ಡಿವೈಎಫ್‌ಐ ಮಂಜುನಾಥ್ ,ರಾಘವೇಂದ್ರ, ಪಂಡಿತ್ ಜವಹಾರ್,ಎ.ಲೋಕೇಶ್ ಇತರರು