ತುಮಕೂರು | ಮೇ 9ರಿಂದ ವೀರಶೈವ ಧರ್ಮ ಸಮ್ಮೇಳನ

Date:

Advertisements

ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ(ರಿ) ಹಾಗೂ ವಿವಿಧ ವೀರಶೈವ ಸಂಘ, ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಶಿವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಬಸವಜಯಂತಿ ಅಂಗವಾಗಿ ಮೇ 9 ಮತ್ತು ಮೇ 10 ರಂದು ವೀರಶೈವ ಧರ್ಮ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ ಶೇಖರ್ ತಿಳಿಸಿದರು.

ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. “1963ರಲ್ಲಿ ಆರಂಭವಾದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಂದಿನಿಂದಲೂ ಇಂದಿನವರೆಗೂ ಬಸವ ಜಯಂತಿಯನ್ನು ಚಾಚೂ ತಪ್ಪದೆ ಆಚರಿಸಿಕೊಂಡು ಬರಲಾಗುತ್ತಿದೆ. ಕಳೆದ 10 ವರ್ಷಗಳಿಂದ ಸಮಾಜ ಭಾಂಧವರ ತೀರ್ಮಾನದಂತೆ ಬಸವ ಜಯಂತಿಯ ಉತ್ಸವದ ಜೊತೆಗೆ, ಶ್ರೀರೇಣುಕಾಚಾ ರ್ಯರರು ಮತ್ತು ಶ್ರೀಗುರು ಸಿದ್ದರಾಮೇಶ್ವರರ ಉತ್ಸವಗಳನ್ನು ಜಯಂತಿಗಳನ್ನು ಒಟ್ಟಿಗೆ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಮೇ.9ರಂದು ವೀರಶೈವ ಧರ್ಮ ಸಮ್ಮೇಳನವನ್ನು ವೀರಶೈವ ಕಲ್ಯಾಣ ಮಂಟಪದಲ್ಲಿ ಹಾಗೂ ಮೇ.10ರಂದು ಬಸವೇಶ್ವರರು, ಶ್ರೀರೇಣುಕಾಚಾರ್ಯರು ಹಾಗೂ ಶ್ರೀಗುರು ಸಿದ್ದರಾಮೇಶ್ವರರ ಉತ್ಸವವನ್ನು ಆಯೋಜಿಸಲಾಗಿದೆ” ಎಂದರು.

“ವೀರಶೈವ ಸಮಾಜದ ಬಸವೇಶ್ವರರು, ರೇಣುಕಾಚಾರ್ಯರು ಹಾಗೂ ಗುರು ಸಿದ್ದರಾಮೇಶ್ವರರ ಜಯಂತಿ ಉತ್ಸವಕ್ಕೆ ವೀರಶೈವ ಸಮಾಜದ ಅಂಗ ಸಂಸ್ಥೆಗಳಾದ ವೀರಶೈವ ಕೋ-ಅಪರೇಟಿವ್ ಬ್ಯಾಂಕ್(ನಿ), ತುಮಕೂರು ಬಸವೇಶ್ವರ ಕ್ರೆಡಿಟ್ ಕೋ-ಅಪರೇಟಿವ್ ಸೋಸೈಟಿ(ಲಿ),ಸ್ನೇಹ ಸಂಗಮ ಸೌಹಾರ್ಧ ಪತ್ತಿನ ಸಹಕಾರಿ(ನಿ), ಶ್ರೀರೇಣುಕಾ ವಿದ್ಯಾಪೀಠ, ಮೈತ್ರಿ ವೀರಶೈವ ಮಹಿಳಾ ಸಂಘ, ವೀರಶೈವ ಉಚಿತ ವೈದ್ಯಕೀಯ ಸೇವಾ ಕೇಂದ್ರ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹಕಾರ ನೀಡಿವೆ.ಎಲ್ಲರೂ ವೀರಶೈವ ಧರ್ಮ ಸಮ್ಮೇಳನ ಮತ್ತು ತ್ರಿವಳಿ ರತ್ನಗಳ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು” ಎಂದು ಟಿ.ಬಿ.ಶೇಖರ್ ಮನವಿ ಮಾಡಿದರು.

Advertisements

ಮೇ.9ರ ಗುರುವಾರ ಬೆಳಗ್ಗೆ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ವೀರಶೈವ ಧರ್ಮ ಸಮ್ಮೇಳನದ ವಿವರ ನೀಡಿದ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಗೌರವ ಕಾರ್ಯದರ್ಶಿ ಅತ್ತಿ ರೇಣುಕಾನಂದ, “ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಿವಗಂಗೆ ಮೇಲಣಗವಿ ಮಠದ ಶ್ರೀವಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಗಳು ವಹಿಸಲಿದ್ದು,ಉದ್ಘಾಟನೆಯನ್ನು ಮಾಜಿ ಐಪಿಎಸ್ ಅಧಿಕಾರಿ ಶಂಕರ ಮಹಾದೇವ ಬಿದರಿ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್ ವಹಿಸಲಿದ್ದು,ಸಂಸದ ಜಿ.ಎಸ್.ಬಸವರಾಜು,ಶಾಸಕ ಜಿ.ಬಿ.ಜೋತಿಗಣೇಶ್, ಮಾಜಿ ಸಚಿವರಾದ ಎಸ್.ಶಿವಣ್ಣ ಅವರುಗಳು ಗೌರವ ಉಪಸ್ಥಿತರಿ ರುವರು.ಮುಖ್ಯ ಅತಿಥಿಗಳಾಗಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಮಾಜಿ ಅಧ್ಯಕ್ಷರುಗಳಾದ ಕೈ.ವೈ.ಸಿದ್ದಲಿಂಗಮೂರ್ತಿ, ಟಿ.ಕೆ.ನಂಜುಂಡಪ್ಪ, ಸಿ.ವಿ.ಮಹದೇವಯ್ಯ ಉಪಸ್ಥಿತರಿರುವರು. ಮೈತ್ರಿ ಮಹಿಳಾ ಬಳಗದಿಂದ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ತುಮಕೂರು ಜಿಲ್ಲಾ ವೀರಶೈವ ಸಮಾಜ ಸೇವಾ ಸಮಿತಿಯ ಉಪಾಧ್ಯಕ್ಷ ಎಸ್.ಜಿ.ಚಂದ್ರಮೌಳಿ ಬಹುಮಾನ ವಿತರಿಸುವರು” ಎಂದು ತಿಳಿಸಿದರು.

ವೀರಶೈವ ಸಮಾಜದ ಸಾಮಾಜಿಕ ಶೈಕ್ಷಣಿಕ, ಅರ್ಥಿಕ ಅಭಿವೃದ್ದಿಗೆ ದುಡಿದ ಸಮಾಜದ ಹಿರಿಯರಾದ ಜಿ.ಎಸ್.ಪರಮಶಿವಯ್ಯ,ಟಿ.ಎಸ್.ಜಗನ್ನಾಥ್,ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾವರ್ತಮ್ಮ ಜಗದೀಶ್, ಎನ್.ಬಿ.ಪ್ರದೀಪಕುಮಾರ್, ಹೆಚ್.ಎನ್.ಚಂದ್ರಶೇಖರ್, ಸಾವಿತ್ರಮ್ಮ ಮುದ್ದಪ್ಪ, ಕೆ.ಎಲ್.ಗೀತಾ ಅವರುಗಳನ್ನು ಸಮಾಜದ ವತಿಯಿಂದ ಸನ್ಮಾನಿಸಲಾಗುವುದು ಎಂದು ಅತ್ತಿ ರೇಣುಕಾನಂದ ತಿಳಿಸಿದರು.

ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಚಂದ್ರಮೌಳಿ ಮಾತನಾಡಿ,ಮೇ.10ರ ಶುಕ್ರವಾರ ಮದ್ಯಾಹ್ನ 2.30ಕ್ಕೆ ಎಸ್.ಐ.ಟಿ. ಆವರಣದಲ್ಲಿರುವ ಶಿವ ಗಣಪತಿ ದೇವಾಲಯದಿಂದ ಆರಂಭವಾಗು ಜಗದ್ಗುರು ಶ್ರೀರೇಣುಕಾಚಾರ್ಯರ,ಶ್ರೀ ಜಗಜೋತಿ ಶ್ರೀಬಸವೇಶ್ವರರ ಮತ್ತು ಕಾಯಕಯೋಗಿ ಶ್ರೀ ಸಿದ್ದರಾಮೇಶ್ವರರ ವೈಭವದ ಉತ್ಸವಕ್ಕೆ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀಶ್ರೀಸಿದ್ದಲಿಂಗ ಮಹಾಸ್ವಾಮೀಜಿಗಳು ಚಾಲನೆ ನೀಡುವರು.

ಕಾರ್ಯಕ್ರಮದಲ್ಲಿ ಕರಿಬಸವಸ್ವಾಮಿ ಮಠದ ಚನ್ನಬಸವರಾಜೇಂದ್ರ ಸ್ವಾಮೀಜಿ, ಚಿಕ್ಕತೊಟ್ಲುಕೆರೆ ಅಟವಿ ಸುಕ್ಷೇತ್ರದ ಶ್ರೀಅಟವಿ ಶಿವಲಿಂಗಸ್ವಾಮೀಜಿ, ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು, ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯಸ್ವಾಮೀಜಿಗಳು, ಮಾಕನಹಳ್ಳಿ ಜಂಗಮಮಠದ  ಗಂಗಾಧರಸ್ವಾಮೀಜಿ, ಶಿವಗಂಗೆಯ ಹೊನ್ನಮ್ಮಗವಿಮಠದ  ರುದ್ದಮುನಿ ಶಿವಾಚಾರ್ಯ ಸ್ವಾಮೀಜಿ,ಕಂಬಾಳಿ  ಚನ್ನವೀರ ಶಿವಾಚಾರ್ಯ ಸ್ವಾಮೀಜಿ, ಬೆಳ್ಳಾವೆಯ ಶ್ರೀಕಾರದ ವೀರಬಸವ ಸ್ವಾಮೀಜಿ, ಹರಳೂರಿನ  ಚನ್ನಬಸವ ಸ್ವಾಮೀಜಿಗಳು ದಿವ್ಯಸಾನಿಧ್ಯ ವಹಿಸಲಿದ್ದಾರೆ.

ಕಲಾತಂಡಗಳ ಪ್ರದರ್ಶನಕ್ಕೆ ಎಸ್.ಐ.ಟಿ. ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ, ಟಿ.ಕೆ.ನಂಜುಂಡಪ್ಪ,ಜಂಟಿ ಕಾರ್ಯದರ್ಶಿ ಡಾ.ಶಿವಕುಮಾರಯ್ಯ, ಎಸ್.ಐ.ಟಿ. ಪ್ರಾಂಶುಪಾಲರಾದ ಡಾ.ಎಸ್.ಬಿ..ದಿನೇಶ್ ಅವರುಗಳು ಚಾಲನೇ ನೀಡಲಿದ್ದಾರೆ.ಸಮಾರಂಭದಲ್ಲಿ ಮಾಜಿ ಕಾರ್ಪೋರೇಟರ್ ಗಳು ಭಾಗವಹಿಸಲಿದ್ದಾರೆ ಎಂದು ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ (ರಿ)ನ ಜಂಟಿ ಕಾರ್ಯದರ್ಶಿ ರುದ್ರೇಶ್, ಖಜಾಂಚಿ ಶ್ರೀಮತಿ ಶಿವಲಿಂಗಮ್ಮ, ಅಡಳಿತಾಧಿಕಾರಿ ಎ.ಎಸ್.ರುದ್ರಕುಮಾರ್ ಅರಾಧ್ಯ, ನಿರ್ದೇಶಕರಾದ ಟಿ.ಆರ್.ನಟರಾಜು, ಕೆ.ಎಸ್.ವಿಶ್ವನಾಥ್, ಹೆಚ್.ಬಿ.ನಾಗರಾಜು, ಬಿ.ಉಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X