ತಿಪಟೂರು | ಎಸ್ ಐಆರ್ ನಿಂದ ದೇಶ ವಿಭಜಿಸುವ ಹುನ್ನಾರ : ಕೆ. ಪ್ರಕಾಶ್

Date:

ತಿಪಟೂರು ನಗರದ ರೋಟರಿ ಭವನದಲ್ಲಿ ಸೌಹಾರ್ದ ತಿಪಟೂರು ಹಾಗೂ ಇತರೆ ಪ್ರಗತಿಪರ ಸಂಘಟನೆ ಗಳಿಂದ ‘ನನ್ನ ಮತ ನನ್ನ ಹಕ್ಕು’ ಹಾಗೂ ಎಸ್‌ಐಆ‌ರ್ ಹೆಸರಿನಲ್ಲಿ ಅಧಿಕಾರ ನಿರಾಕರಣೆ ಕುರಿತು ವಿಚಾರಗೋಷ್ಠಿ ಮತ್ತು ಸಂವಾದ ಸೋಮವಾರ ನಡೆಯಿತು.

- Advertisement -

ಎಸ್‌ಐಆರ್, ಎನ್‌ಆರ್‌ಸಿ, ನಾಗರಿಕ ಪೌರತ್ವದ ಬಗ್ಗೆ, ಮತದಾರ ಗುರುತಿನ ಚೀಟಿಯ ದಾಖಲಾತಿ ಬಗ್ಗೆ ಪರ- ವಿರೋಧ ಸಂವಾದ ಜರುಗಿತು. ಸಂವಾದದಲ್ಲಿ ಸಿಪಿಐಎಂ ರಾಜ್ಯ  ಪ್ರಧಾನ ಕಾರ್ಯದರ್ಶಿ ಕೆ. ಪ್ರಕಾಶ್  ಮಾತನಾಡಿ, ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ದೇಶದಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ದೇಶವನ್ನು ವಿಭಜಿಸುವ ತಂತ್ರ ಅಡಗಿದೆ. ವಿಭಜಿಸುವ ಎಸ್‌ಐಆ‌ರ್ ಕೈಬಿಡಲು ರಾಜ್ಯ ಸರ್ಕಾರ ಒತ್ತಾಯಿಸಬೇಕು. ಇದನ್ನು ವಿರೋಧಿಸಿ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ...

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ ಮಾಡುವುದು, ಅವುಗಳನ್ನು ಸಂಗ್ರಹಿಸುವುದು ಹಾಗೂ ಮುಂದಿನ ಋತುವಿಗೆ ಉಳಿಸುವುದೂ ಕೃಷಿಯ ಅವಿಭಾಜ್ಯ ಅಂಗ ಎನ್ನುತ್ತಿದ್ದ ರಾಮನ್, ತಮ್ಮ ಇಡೀ ಜೀವನವನ್ನೇ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ ಸಮರ್ಥನೆ; ಇತಿಹಾಸದ ಹೆಸರಿನಲ್ಲಿ ವಿವಾದ, ಆಡಳಿತದ ನಡೆಗೆ ಸಾರ್ವಜನಿಕರ ಪ್ರಶ್ನೆ. ರಾಜ್ಯದ ಜನತೆ ಬರಗಾಲದ ಸಂಕಷ್ಟ ಎದುರಿಸುತ್ತಿರುವಾಗ, ರೈತರು ಮಳೆ-ಬೆಳೆಯಿಲ್ಲದೆ ಕಂಗಾಲಾಗಿರುವಾಗ,...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ ಜನರಿಗೆ ಮರಳಿ ಕೊಡಿಸುವುದಕ್ಕಾಗಿ, ಗಾಂಧೀಜಿಯವರ ಮಾತುಗಳು ಮತ್ತು ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿರುವ ನಿಜವಾದ ಹೋರಾಟಗಾರರು. ಸರ್ಕಾರದ...

ಎಸ್ ಐಆರ್ ನಿಂದ ಅತಿ ಹೆಚ್ಚು  ಸಮಸ್ಯೆ ಎದುರಿಸುವವರು ಬಡವರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಹಿಂದುಳಿದವರು. ಪೌರತ್ವ ನೀಡುವುದಕ್ಕೆ ಧರ್ಮ ಆಧಾರವಾಗುತ್ತಿರುವುದು ಆಪಾಯಕಾರಿ ಬೆಳವಣಿಗೆ. ಕರ್ನಾಟಕದಲ್ಲಿ ಜೂನ್ 30ರಿಂದ ಪ್ರಾರಂಭವಾಗಲಿರುವ ಎಸ್‌ಐಆರ್‌ನಲ್ಲಿ ಹೊಸ ಪದ್ಧತಿಯಿದ್ದು, ಅದರಲ್ಲಿ ‘ತಾರ್ಕಿಕವಾಗಿ ಹೊಂದಿಕೆಯಾಗದವರು’ ಎಂದಿದೆ. ಅದರಡಿ ಇನ್ನೂ ಅನೇಕರ ಹೆಸರುಗಳು ಪತದಾರರ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂದರು

ಜನಸ್ಪಂದನಾ ಟ್ರಸ್ಟ್ ಅಧ್ಯಕ್ಷ  ಸಿ.ಬಿ.ಶಶಿಧರ್ ಮಾತನಾಡಿ ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ, ಎಚ್ಚರಿಕೆಯಿಂದ 7.66 ಕೋಟಿ ಮತದಾರರಲ್ಲಿ 90.83 ಲಕ್ಷ ಜನರನ್ನು ಎಸ್‌ಐಆರ್‌ನಿಂದ ಹೊರಗಿಡಲಾಯಿತು. ಅದರಲ್ಲಿ 27 ಲಕ್ಷ ಜನರನ್ನು ಹೊರಗಿಟ್ಟಿದ್ದು ಮತದಾನದಿಂದ ತೀರ್ಮಾನಕ್ಕೆ ಬಾಕಿ ಇರುವವರು ಎಂದು ಪರಿಗಣಿಸಲಾಯಿತು. ಪಶ್ಚಿಮ ಬಂಗಾಳದ ಚುನಾವಣೆಗೆ ಬೇಕಾದ  ಚುನಾವಣಾ ಅಧಿಕಾರಿಗಳನ್ನು ಹೊರ ರಾಜ್ಯಗಳಿಂದ ಕರೆತರಲಾಯಿತು ಎಂದು ಆರೋಪಿಸಿದರು

1003364426

ಎಸ್ ಐ ಆರ್ ವಿಚಾರದಲ್ಲಿ  ಕೋರ್ಟ್ ಸಹ ಮತದಾರರ ಪರವಾಗಿ ಇರಲಿಲ್ಲ  ಎಂಬುದು ಆತಂಕದ ವಿಚಾರ. ಮತದಾರರನ್ನು ಹುಡುಕಿ ಸೇರಿಸಬೇಕಿದ್ದ ಚುನಾವಣಾ ಆಯೋಗ ಹುಡುಕಿ ಹುಡುಕಿ ಡಿಲೀಟ್ ಮಾಡುತ್ತಿದೆ ಎಂದು ಆಪಾದಿಸಿದರು.

 ಎಸ್‌ಐಆರ್ ವಿಚಾರಗಳನ್ನು ಪರಿಶೀಲಿಸಲು ಸುಪ್ರೀಂಕೋರ್ಟ್ 250 ಜಡ್ಜ್‌ ಗಳಿರುವ ಮಂಡಳಿ ರಚಿಸಿದ್ದು, ಅದು ಎಲ್ಲ ವಿಚಾರಗಳನ್ನು ಪರಿಶೀಲಿಸಿ ತೀರ್ಪು ನೀಡಲು ಬಹಳ ದಿನ ಬೇಕಾಗುತ್ತದೆ. ಆದರೆ ಬಂಗಾಳದ ಚುನಾವಣೆಯಲ್ಲಿ ಬಹಳಷ್ಟು ಕ್ಷೇತ್ರಗಳಲ್ಲಿ ಗೆಲುವಿನ ಅಂತರಕ್ಕಿಂತ ಎಸ್‌ಐಆರ್‌ನಿಂದ ಡಿಲೀಟ್ ಆದ ಮತಗಳೇ ಹೆಚ್ಚಿದ್ದವು ಎಂಬುದನ್ನು ಗಮನಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಬಸವರಾಜಪ್ಪ, ಪ್ರಾಂತ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಆರ್.ಎಸ್.ಚನ್ನಬಸವಣ್ಣ, ಕರ್ನಾಟಕ ರಾಜ್ಯ ರೈತಸಂಘದ ಟಿ.ಬಿ.ಜಯಾನಂದಯ್ಯ, ಬೆಲೆಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಅನುಸೂಯ ಹಾಗೂ ಸಮೀಉಲ್ಲಾ, ಸೌಹಾರ್ಧದ ಅಲ್ಲಾಬಕಾಶ್, ತಿಮ್ಲಾಪುರ ದೇವರಾಜು, ಪ್ರಕಾಶ್, ಶರತ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಜ್ಯದ 4 ಉತ್ಪನ್ನಗಳಿಗೆ ನಬಾರ್ಡ್ ಬೆಂಬಲ: ತಿಪಟೂರು ತೆಂಗಿಗೆ ಜಿಐ ಟ್ಯಾಗ್‌

ಕರ್ನಾಟಕದ ಸಾಂಪ್ರದಾಯಿಕ ಕೃಷಿ ಉತ್ಪನ್ನಗಳು ಮತ್ತು ಕರಕುಶಲ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ...

ತಿಪಟೂರು | ಎಸ್ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಅರ್ಹ ಮತದಾರರ ಹಕ್ಕು ಕಸಿದುಕೊಳ್ಳುವ ಆತಂಕ : ಡಾ. ಎಚ್. ವಿ. ವಾಸು

ಮತದಾರರ ಪಟ್ಟಿಯ ಶುದ್ಧೀಕರಣಕ್ಕೆ ವಿರೋಧವಿಲ್ಲ. ಆದರೆ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)...

ತಿಪಟೂರು | ಎಸ್ಐಆರ್ ಪ್ರಕ್ರಿಯೆಯಿಂದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು : ಸಿ. ಬಿ. ಶಶಿಧರ್ (ಟೂಡ)

 ಚುನಾವಣಾ ಆಯೋಗ ಹಮ್ಮಿಕೊಂಡಿರುವ ಈ ಎಸ್ಐಆರ್-ಪ್ರಕ್ರಿಯೆಯಿಂದಾಗಿ ಕ್ಷೇತ್ರದ ಯಾವೊಬ್ಬ ಮತದಾರನೂ ಹೊರಗುಳಿಯಬಾರದು....

ತಿಪಟೂರು | ಜೂನ್ 22ಕ್ಕೆ ರೈತರ ಬೃಹತ್ ಪ್ರತಿಭಟನಾ ಕಾಲ್ನಡಿಗೆ ಜಾಥಾ

 ಖಾತೆದಾರರು ಮತ್ತು ಬಗರ್ ಹುಕುಂ ಸಾಗುವಳಿದಾರರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ...