ತುರುವೇಕೆರೆ | ತಾಯಿಯನ್ನು ಸಾಕಲಾರದಷ್ಟು ಕಟುಕ ನಾನಲ್ಲ : ಎಲ್.ಮಂಜಯ್ಯಗೌಡ

Date:

Advertisements

ಮನೆ ಅಂದ ಮೇಲೆ ಒಂದಲ್ಲಾ ಒಂದು ಸಮಸ್ಯೆ ಇರುತ್ತೆ. ಎಲ್ಲರ ಮನೆಯಲ್ಲಿ ಇದ್ದ ಹಾಗೇ ನಮ್ಮ ಮನೆಯನ್ನೂ ಸಮಸ್ಯೆ ಆಗಿದೆ. ನಾನು ನನ್ನಮ್ಮ ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನೋಡಿಕೊಂಡಿದ್ದೇನೆ. ಅವರಿಗೆ ಯಾವುದೇ ನೋವು ಆಗಿರಲಿಲ್ಲ. ಈಗ ಕೇವಲ ಐದಾರು ತಿಂಗಳಿನಿಂದ ನಾನು ಅಮ್ಮನಿಗೆ ಬೇಡವಾಗಿದ್ದೇನಾ?. ನಾನು ಅಮ್ಮನನ್ನು ದೂರ ಮಾಡಿದ್ದೇನಾ? ಎಂದು ದಬ್ಬೇಘಟ್ಟ ಹೋಬಳಿ ಕನ್ನಡ  ಸಮ್ಮೇಳನಾಧ್ಯಕ್ಷ ಎಲ್.ಮಂಜಯ್ಯಗೌಡ ತಮ್ಮ ಮನದಾಳದ ಮಾತುಗಳನ್ನು ಆಡಿದರು. 

 ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನನ್ನಮ್ಮನನ್ನು ಸಾಕುವುದು ಧರ್ಮ ಹಾಗೂ ಕರ್ತವ್ಯ. ಕಳೆದ ಐದಾರು ತಿಂಗಳಿನಿಂದ ಮನೆಯಲ್ಲಿ ಆದ ಆಸ್ತಿ ಹಂಚಿಕೆ ಸಂಬಂಧ ಸಹೋದರರ ನಡುವೆ ಒಂದಿಷ್ಟು ಸಮಸ್ಯೆ ಇತ್ತು. ಇದು ಸಹಜ ಪ್ರಕ್ರಿಯೆ. 

 ಯಾರದೋ ಚಿತಾವಣೆಗೆ ನಮ್ಮಮ್ಮ ಸಣ್ಣಮ್ಮ, ನನ್ನಿಂದ ಕಳೆದ ಐದಾರು ತಿಂಗಳಿನಿಂದ ದೂರವಾದರು. ನಾನು ಮುವತ್ತು ವರ್ಷಗಳಿಗೂ ಹೆಚ್ಚು ಕಾಲ ಗೌರವಯುತವಾಗಿ ನೋಡಿಕೊಂಡಿದ್ದೇನೆ. ಯಾವತ್ತೂ ಅವರ ಗೌರವಕ್ಕೆ ಚ್ಯುತಿ ತಂದಿಲ್ಲ. ಅಮಾಯಕರಾದ ನನ್ನಮ್ಮನನ್ನು ಕೆಲವರು ತಪ್ಪು ಮಾಹಿತಿ ಮಾಡಿ ನನ್ನಿಂದ ದೂರ ಮಾಡಿದರು. ಸಹೋದರರ ನಡುವೆ ಮಾತಿನ ಚಕಮಕಿ ಆಗಿದ್ದ ವೇಳೆ ಎರಡೂ ಕಡೆಯೂ ಕೋಪದಿಂದ ಮಾತುಗಳು ಹೊರಬಂದಿವೆ. ಅದು ಗ್ರಾಮಾಂತರ ಪ್ರದೇಶದಲ್ಲಿ ಸಹಜ. ಅಂತಿಮವಾಗಿ ಗ್ರಾಮದ ಹಿರಿಯರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

Advertisements

 ಕೆಲವರ ಮಾತಿಗೆ ಸಿಲುಕಿ ನನ್ನಮ್ಮ ನನ್ನ ಮನೆಯಲ್ಲಿ ಇರುವುದಿಲ್ಲ ಎಂದು ನನ್ನ ಸಹೋದರನ ಮನೆಗೆ ತೆರಳಿದರು. ಸಹೋದರರ ನಡುವಿನ ಆಸ್ತಿ ಹಂಚಿಕೆ ಸಂಬಂಧ ವಿವಾದ ನ್ಯಾಯಾಲಯದಲ್ಲಿ ಇದ್ದ ಕಾರಣ ಮಧ್ಯಸ್ಥಿಕೆ ವಹಿಸಿದ್ದವರು ನೀಡಿದ ಆದೇಶವನ್ನು ಪಾಲಿಸಲು ಅಸಾಧ್ಯವಾಯಿತು. ನ್ಯಾಯಾಲಯದಿಂದ ಪ್ರಕರಣವನ್ನು ಹಿಂತೆಗೆದುಕೊಳ್ಳದ ಹೊರೆತು ಸಮಸ್ಯೆ ಬಗೆಹರಿಯದು ಎಂಬ ವಕೀಲರ ಸಲಹೆಯ ಮೇರೆಗೆ ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಲು ಸಾಧ್ಯವಾಗಲಿಲ್ಲ ಹೊರೆತು ನನ್ನಮ್ಮ ಸಾಕಲಾರದಷ್ಟು ಕಟುಕ ನಾನಲ್ಲ. ನಾನು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವನು. ತಂದೆ ತಾಯಿಯ ಬೆಲೆ ಏನೆಂಬುದು ನನಗೆ ಅರಿವಿದೆ. ಅಮಾಯಕರಾದ ನನ್ನ ತಾಯಿಯ ಮನಸ್ಸಿಗೆ ಇಲ್ಲ ಸಲ್ಲದ ವಿಷಯಗಳನ್ನು ತುಂಬಿ ನನ್ನ ಮೇಲೆ ಹರಿಹಾಯುವಂತೆ ಕೆಲವರು ಮಾಡಿದ್ದಾರೆ ಎಂದು ಮಂಜಯ್ಯಗೌಡ ದೂರಿದರು.

 ನಾನು ಕನ್ನಡ ಭಾಷೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿಯೇ ನನ್ನನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದರು. ಇದನ್ನು ಸಹಿಸದ ಕೆಲವು ಮಂದಿ ನನಗೆ ಅವಮಾನ ಮಾಡಬೇಕೆಂಬ ಕಾರಣಕ್ಕಾಗಿಯೇ ನನ್ನ ತಾಯಿಯನ್ನು ಎತ್ತಿಕಟ್ಟಿ ಆರೋಪ ಹೊರಿಸಿ ಅವಮಾನ ಮಾಡಿದರು. ಕಳೆದ ಐದಾರು ತಿಂಗಳ ಹಿಂದೆಯೇ ಕುಟುಂಬದಲ್ಲಿ ಸಮಸ್ಯೆ ಉದ್ಭವಿಸಿತ್ತು. ಇದುವರೆಗೂ ಸುಮ್ಮನಿದ್ದವರು ಇನ್ನೇನು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕ್ರಮ ಹತ್ತಿರ ಇದೆ ಎಂದಾಗ ಹೀಗೆ ಮಾಡಿರುವುದರಲ್ಲಿ ದುರುದ್ದೇಶ ಇದೆಯೇ? ಇಲ್ಲವೇ? ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿಯಲಿದೆ ಎಂದು ಎಲ್.ಮಂಜಯ್ಯಗೌಡ ಹೇಳಿದರು.

ನನ್ನಮ್ಮನಿಗೆ ಕ್ಯಾನ್ಸರ್ ಬಂದ ಸಂಧರ್ಭದಲ್ಲಿ ಯಾರನ್ನೂ ಅಂಗಲಾಚನೆ ಹೆತ್ತಮ್ಮನ ಉಳಿಸಿಕೊಳ್ಳಲು ಚಿಕಿತ್ಸೆ ಕೊಡಿಸಿ ಗುಣಪಡಿಸಿದ್ದೇನೆ. ಅದು ಅತಿಶಯೋಕ್ತ ಅಲ್ಲ. ಅದು ನನ್ನ ಕರ್ತವ್ಯ. ಆದರೆ ಈಗ ಅನ್ನ ಹಾಕಲು ಆಗದವನು ಎಂಬ ಪಟ್ಟ ಕಟ್ಟಿದ್ದು ನನಗೆ ನೋವು ತರಿಸಿದೆ. ಈಗಲೂ ನಾನು ನನ್ನಮ್ಮನ್ನು ನನ್ನ ಮನೆಗೆ ಕರೆಯುತ್ತಿದ್ದೇನೆ. ಮನೆ ಅಂದ ಮೇಲೆ ಕೋಪದಲ್ಲಿ ಎಲ್ಲರೂ ಒಂದಲ್ಲಾ ಒಂದು ಮಾತು ಆಡಿರುತ್ತಾರೆ. ಅವೆಲ್ಲಾ ಸಹಜ. ದ್ವೇಷ ಸಾಧಿಸದೇ ಈಗಲೂ ನನ್ನ ಮನೆಗೆ ನನ್ನಮ್ಮ ಬರಲಿ. ಪ್ರೀತಿಯಿಂದಲೇ ಸಾಕುತ್ತೇನೆ. ನನ್ನನ್ನು ಹೆತ್ತು ಹೊತ್ತು ಸಾಕಿದ ನನ್ನಮ್ಮನನ್ನು ಮನೆಯಿಂದ ಆಚೆ ಹಾಕುತ್ತೇನೆಯೇ.ಇಲ್ಲ. ಈಗಲೂ ಕಾಲ ಮಿಂಚಿಲ್ಲ. ಅಮ್ಮ ನಮ್ಮ ಮನೆಗೆ ಬಂದರೆ ಈಗಲೂ ಸ್ವಾಗತಿಸುತ್ತೇನೆ. ಆದರೆ ಅಮ್ಮ ಬೇರೆಯವರ ಮಾತಿಗೆ ಬೆಲೆ ಕೊಡಬಾರದು ಅಷ್ಠೆ ಎಂದು ಎಲ್.ಮಂಜಯ್ಯಗೌಡ ಅಮ್ಮನಿಗೆ ಕಿವಿಮಾತು ಹೇಳಿದರು.

 ಸಹೋದರರ ನಡುವಿನ ಆಸ್ತಿ ವಿವಾದ ನ್ಯಾಯಾಲಯದಲ್ಲಿದೆ. ಅದು ಅಲ್ಲೇ ಬಗೆಹರಿಯಲಿ ತೊಂದರೆ ಇಲ್ಲ. ಆದರೆ ಅಮ್ಮನಿಗೆ ತುತ್ತು ಅನ್ನ ಹಾಕದವನು ಕನ್ನಡಮ್ಮನ ಉದ್ದಾರ ಮಾಡಲು ಹೊರಟಿದ್ದಾನೆಂಬ ಆರೋಪ ಮನಸ್ಸಿಗೆ ಬೇಸರತರಿಸಿದೆ. ಬಹುಶಃ ನನ್ನನ್ನು ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರದಿದ್ದರೆ ನನ್ನಮ್ಮನನ್ನು ನನ್ನ ವಿರುದ್ಧ ಎತ್ತಿಕಟ್ಟುತ್ತಿರಲಿಲ್ಲ ಎಂದು ಎಲ್.ಮಂಜಯ್ಯಗೌಡ ಹೇಳಿದರು.

 ಇದೇ ಸಂಧರ್ಭದಲ್ಲಿ ಕುಟುಂಬದ ಹಿತೈಷಿಗಳಾದ ರಾಮೇಗೌಡರು ಮತ್ತು ಬೋರೇಗೌಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X