ತುರುವೇಕೆರೆ | ತಾಯಿಯನ್ನು ಸಾಕಲಾರದಷ್ಟು ಕಟುಕ ನಾನಲ್ಲ : ಎಲ್.ಮಂಜಯ್ಯಗೌಡ

Date:

ಮನೆ ಅಂದ ಮೇಲೆ ಒಂದಲ್ಲಾ ಒಂದು ಸಮಸ್ಯೆ ಇರುತ್ತೆ. ಎಲ್ಲರ ಮನೆಯಲ್ಲಿ ಇದ್ದ ಹಾಗೇ ನಮ್ಮ ಮನೆಯನ್ನೂ ಸಮಸ್ಯೆ ಆಗಿದೆ. ನಾನು ನನ್ನಮ್ಮ ಸುಮಾರು ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನೋಡಿಕೊಂಡಿದ್ದೇನೆ. ಅವರಿಗೆ ಯಾವುದೇ ನೋವು ಆಗಿರಲಿಲ್ಲ. ಈಗ ಕೇವಲ ಐದಾರು ತಿಂಗಳಿನಿಂದ ನಾನು ಅಮ್ಮನಿಗೆ ಬೇಡವಾಗಿದ್ದೇನಾ?. ನಾನು ಅಮ್ಮನನ್ನು ದೂರ ಮಾಡಿದ್ದೇನಾ? ಎಂದು ದಬ್ಬೇಘಟ್ಟ ಹೋಬಳಿ ಕನ್ನಡ  ಸಮ್ಮೇಳನಾಧ್ಯಕ್ಷ ಎಲ್.ಮಂಜಯ್ಯಗೌಡ ತಮ್ಮ ಮನದಾಳದ ಮಾತುಗಳನ್ನು ಆಡಿದರು. 

- Advertisement -

 ತುರುವೇಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ನನ್ನಮ್ಮನನ್ನು ಸಾಕುವುದು ಧರ್ಮ ಹಾಗೂ ಕರ್ತವ್ಯ. ಕಳೆದ ಐದಾರು ತಿಂಗಳಿನಿಂದ ಮನೆಯಲ್ಲಿ ಆದ ಆಸ್ತಿ ಹಂಚಿಕೆ ಸಂಬಂಧ ಸಹೋದರರ ನಡುವೆ ಒಂದಿಷ್ಟು ಸಮಸ್ಯೆ ಇತ್ತು. ಇದು ಸಹಜ ಪ್ರಕ್ರಿಯೆ. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳಾ ಮೀಸಲಾತಿ ಮರೆಯಲ್ಲಿ ಕ್ಷೇತ್ರ ಮರುವಿಂಗಡಣೆ: ವಿರೋಧ ಪಕ್ಷಗಳ...

2023ರ ಮಹಿಳಾ ಮೀಸಲಾತಿ ಕಾಯ್ದೆಯನ್ನು ಅನಗತ್ಯವಾಗಿ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ತಳುಕು ಹಾಕಿರುವ ಮೋದಿ ಸರ್ಕಾರದ ನಡೆ, ಭಾರತೀಯ ಪ್ರಜಾಪ್ರಭುತ್ವ ಮತ್ತು ಸಂಸದೀಯ ಇತಿಹಾಸದಲ್ಲಿಯೇ ಒಂದು ಅಪರೂಪದ ರಾಜಕೀಯ ಹಾಗೂ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ....

ಖಾಸಗಿ ವೈದ್ಯರ ಎಡವಟ್ಟು; ಬಡ ಕುಟುಂಬದ ಆಧಾರ ಸ್ತಂಭ...

ಆತ ಕೂಲಿ‌ ಕೆಲಸ ಮಾಡಿಕೊಂಡು ಹಂಗೊ ಹೆಂಗೋ ಜೀವನ‌ ನಡೆಸಿಕೊಂಡು ಬಂದಿದ್ದ ಚಿರ ಯೌವ್ವನದ ಯುವಕ. ತನ್ನ ಮನೆ ಜವಾಬ್ದಾರಿಯನ್ನು ತನ್ನದೇ ಹೆಗಲ ಮೇಲೆರಿಸಿ ಕಷ್ಟಪಟ್ಟು ದುಡಿದು ತನ್ನ ಇಬ್ಬರು ಸಹೋದರಿಯರಿಗೆ ಮದುವೆಯನ್ನೂ...

ಭಾಷಣಗಳಲ್ಲಿ ಆಗಾಗ ಎಡವಟ್ಟು, ಸುಳ್ಳು-ಅತಿಶಯೋಕ್ತಿಯೇ ಮೇಲುಗೈ: ನವಭಾರತದ ‘ಪಪ್ಪು’...

ಒಂದು ಕಾಲದಲ್ಲಿ ರಾಹುಲ್ ಗಾಂಧಿ ಅವರನ್ನು ಅಪಹಾಸ್ಯ ಮಾಡಲು ಬಳಸುತ್ತಿದ್ದ 'ಪಪ್ಪು' ಎಂಬ ಪದವೇ ಇದೀಗ ಮೋದಿ ಅವರತ್ತ ತಿರುಗಿದೆ. 1987-88ರ ಡಿಜಿಟಲ್ ಕ್ಯಾಮೆರಾ-ಇಮೇಲ್ ಕಥೆಯಿಂದ ಹಿಡಿದು ಐತಿಹಾಸಿಕ ಪ್ರಮಾದಗಳವರೆಗೆ, ಮೋದಿ ಅವರ...

 ಯಾರದೋ ಚಿತಾವಣೆಗೆ ನಮ್ಮಮ್ಮ ಸಣ್ಣಮ್ಮ, ನನ್ನಿಂದ ಕಳೆದ ಐದಾರು ತಿಂಗಳಿನಿಂದ ದೂರವಾದರು. ನಾನು ಮುವತ್ತು ವರ್ಷಗಳಿಗೂ ಹೆಚ್ಚು ಕಾಲ ಗೌರವಯುತವಾಗಿ ನೋಡಿಕೊಂಡಿದ್ದೇನೆ. ಯಾವತ್ತೂ ಅವರ ಗೌರವಕ್ಕೆ ಚ್ಯುತಿ ತಂದಿಲ್ಲ. ಅಮಾಯಕರಾದ ನನ್ನಮ್ಮನನ್ನು ಕೆಲವರು ತಪ್ಪು ಮಾಹಿತಿ ಮಾಡಿ ನನ್ನಿಂದ ದೂರ ಮಾಡಿದರು. ಸಹೋದರರ ನಡುವೆ ಮಾತಿನ ಚಕಮಕಿ ಆಗಿದ್ದ ವೇಳೆ ಎರಡೂ ಕಡೆಯೂ ಕೋಪದಿಂದ ಮಾತುಗಳು ಹೊರಬಂದಿವೆ. ಅದು ಗ್ರಾಮಾಂತರ ಪ್ರದೇಶದಲ್ಲಿ ಸಹಜ. ಅಂತಿಮವಾಗಿ ಗ್ರಾಮದ ಹಿರಿಯರು ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದರು.

 ಕೆಲವರ ಮಾತಿಗೆ ಸಿಲುಕಿ ನನ್ನಮ್ಮ ನನ್ನ ಮನೆಯಲ್ಲಿ ಇರುವುದಿಲ್ಲ ಎಂದು ನನ್ನ ಸಹೋದರನ ಮನೆಗೆ ತೆರಳಿದರು. ಸಹೋದರರ ನಡುವಿನ ಆಸ್ತಿ ಹಂಚಿಕೆ ಸಂಬಂಧ ವಿವಾದ ನ್ಯಾಯಾಲಯದಲ್ಲಿ ಇದ್ದ ಕಾರಣ ಮಧ್ಯಸ್ಥಿಕೆ ವಹಿಸಿದ್ದವರು ನೀಡಿದ ಆದೇಶವನ್ನು ಪಾಲಿಸಲು ಅಸಾಧ್ಯವಾಯಿತು. ನ್ಯಾಯಾಲಯದಿಂದ ಪ್ರಕರಣವನ್ನು ಹಿಂತೆಗೆದುಕೊಳ್ಳದ ಹೊರೆತು ಸಮಸ್ಯೆ ಬಗೆಹರಿಯದು ಎಂಬ ವಕೀಲರ ಸಲಹೆಯ ಮೇರೆಗೆ ಹಿರಿಯರ ಮಾರ್ಗದರ್ಶನದಂತೆ ನಡೆದುಕೊಳ್ಳಲು ಸಾಧ್ಯವಾಗಲಿಲ್ಲ ಹೊರೆತು ನನ್ನಮ್ಮ ಸಾಕಲಾರದಷ್ಟು ಕಟುಕ ನಾನಲ್ಲ. ನಾನು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವನು. ತಂದೆ ತಾಯಿಯ ಬೆಲೆ ಏನೆಂಬುದು ನನಗೆ ಅರಿವಿದೆ. ಅಮಾಯಕರಾದ ನನ್ನ ತಾಯಿಯ ಮನಸ್ಸಿಗೆ ಇಲ್ಲ ಸಲ್ಲದ ವಿಷಯಗಳನ್ನು ತುಂಬಿ ನನ್ನ ಮೇಲೆ ಹರಿಹಾಯುವಂತೆ ಕೆಲವರು ಮಾಡಿದ್ದಾರೆ ಎಂದು ಮಂಜಯ್ಯಗೌಡ ದೂರಿದರು.

 ನಾನು ಕನ್ನಡ ಭಾಷೆಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿಯೇ ನನ್ನನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿದ್ದರು. ಇದನ್ನು ಸಹಿಸದ ಕೆಲವು ಮಂದಿ ನನಗೆ ಅವಮಾನ ಮಾಡಬೇಕೆಂಬ ಕಾರಣಕ್ಕಾಗಿಯೇ ನನ್ನ ತಾಯಿಯನ್ನು ಎತ್ತಿಕಟ್ಟಿ ಆರೋಪ ಹೊರಿಸಿ ಅವಮಾನ ಮಾಡಿದರು. ಕಳೆದ ಐದಾರು ತಿಂಗಳ ಹಿಂದೆಯೇ ಕುಟುಂಬದಲ್ಲಿ ಸಮಸ್ಯೆ ಉದ್ಭವಿಸಿತ್ತು. ಇದುವರೆಗೂ ಸುಮ್ಮನಿದ್ದವರು ಇನ್ನೇನು ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕ್ರಮ ಹತ್ತಿರ ಇದೆ ಎಂದಾಗ ಹೀಗೆ ಮಾಡಿರುವುದರಲ್ಲಿ ದುರುದ್ದೇಶ ಇದೆಯೇ? ಇಲ್ಲವೇ? ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿಯಲಿದೆ ಎಂದು ಎಲ್.ಮಂಜಯ್ಯಗೌಡ ಹೇಳಿದರು.

ನನ್ನಮ್ಮನಿಗೆ ಕ್ಯಾನ್ಸರ್ ಬಂದ ಸಂಧರ್ಭದಲ್ಲಿ ಯಾರನ್ನೂ ಅಂಗಲಾಚನೆ ಹೆತ್ತಮ್ಮನ ಉಳಿಸಿಕೊಳ್ಳಲು ಚಿಕಿತ್ಸೆ ಕೊಡಿಸಿ ಗುಣಪಡಿಸಿದ್ದೇನೆ. ಅದು ಅತಿಶಯೋಕ್ತ ಅಲ್ಲ. ಅದು ನನ್ನ ಕರ್ತವ್ಯ. ಆದರೆ ಈಗ ಅನ್ನ ಹಾಕಲು ಆಗದವನು ಎಂಬ ಪಟ್ಟ ಕಟ್ಟಿದ್ದು ನನಗೆ ನೋವು ತರಿಸಿದೆ. ಈಗಲೂ ನಾನು ನನ್ನಮ್ಮನ್ನು ನನ್ನ ಮನೆಗೆ ಕರೆಯುತ್ತಿದ್ದೇನೆ. ಮನೆ ಅಂದ ಮೇಲೆ ಕೋಪದಲ್ಲಿ ಎಲ್ಲರೂ ಒಂದಲ್ಲಾ ಒಂದು ಮಾತು ಆಡಿರುತ್ತಾರೆ. ಅವೆಲ್ಲಾ ಸಹಜ. ದ್ವೇಷ ಸಾಧಿಸದೇ ಈಗಲೂ ನನ್ನ ಮನೆಗೆ ನನ್ನಮ್ಮ ಬರಲಿ. ಪ್ರೀತಿಯಿಂದಲೇ ಸಾಕುತ್ತೇನೆ. ನನ್ನನ್ನು ಹೆತ್ತು ಹೊತ್ತು ಸಾಕಿದ ನನ್ನಮ್ಮನನ್ನು ಮನೆಯಿಂದ ಆಚೆ ಹಾಕುತ್ತೇನೆಯೇ.ಇಲ್ಲ. ಈಗಲೂ ಕಾಲ ಮಿಂಚಿಲ್ಲ. ಅಮ್ಮ ನಮ್ಮ ಮನೆಗೆ ಬಂದರೆ ಈಗಲೂ ಸ್ವಾಗತಿಸುತ್ತೇನೆ. ಆದರೆ ಅಮ್ಮ ಬೇರೆಯವರ ಮಾತಿಗೆ ಬೆಲೆ ಕೊಡಬಾರದು ಅಷ್ಠೆ ಎಂದು ಎಲ್.ಮಂಜಯ್ಯಗೌಡ ಅಮ್ಮನಿಗೆ ಕಿವಿಮಾತು ಹೇಳಿದರು.

 ಸಹೋದರರ ನಡುವಿನ ಆಸ್ತಿ ವಿವಾದ ನ್ಯಾಯಾಲಯದಲ್ಲಿದೆ. ಅದು ಅಲ್ಲೇ ಬಗೆಹರಿಯಲಿ ತೊಂದರೆ ಇಲ್ಲ. ಆದರೆ ಅಮ್ಮನಿಗೆ ತುತ್ತು ಅನ್ನ ಹಾಕದವನು ಕನ್ನಡಮ್ಮನ ಉದ್ದಾರ ಮಾಡಲು ಹೊರಟಿದ್ದಾನೆಂಬ ಆರೋಪ ಮನಸ್ಸಿಗೆ ಬೇಸರತರಿಸಿದೆ. ಬಹುಶಃ ನನ್ನನ್ನು ಕನ್ನಡಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರದಿದ್ದರೆ ನನ್ನಮ್ಮನನ್ನು ನನ್ನ ವಿರುದ್ಧ ಎತ್ತಿಕಟ್ಟುತ್ತಿರಲಿಲ್ಲ ಎಂದು ಎಲ್.ಮಂಜಯ್ಯಗೌಡ ಹೇಳಿದರು.

 ಇದೇ ಸಂಧರ್ಭದಲ್ಲಿ ಕುಟುಂಬದ ಹಿತೈಷಿಗಳಾದ ರಾಮೇಗೌಡರು ಮತ್ತು ಬೋರೇಗೌಡರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಕನ್ನಡ-ಬ್ಯಾರಿ ನಿಘಂಟು: ಮುದ್ರಣ ಪೂರ್ವ ಪ್ರತಿ ಹಸ್ತಾಂತರ

ಕಳೆದ ಒಂದು ವರ್ಷದಿಂದ ಬ್ಯಾರಿ ಸಮುದಾಯದ ಸುಮಾರು 20ಕ್ಕೂ ಹೆಚ್ಚು ಬರಹಗಾರರ...

ಕನ್ನಡ ಭಾಷೆ, ಸಂಸ್ಕೃತಿ ಉಳಿಸುವುದು ಎಲ್ಲರ ಹೊಣೆ: ಎ.ಎಸ್. ಪೊನ್ನಣ್ಣ

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮರಗೋಡು ಸರ್ಕಾರಿ ಹಿರಿಯ ಪ್ರಾಥಮಿಕ...

SIR | ಜ. 20ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ; ಆಕ್ಷೇಪಣಾ ಅರ್ಜಿ ಸಲ್ಲಿಕೆಗೆ ಡಿ. 31 ಕೊನೆಯ ದಿನ

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2027ನೇ ಸಾಲಿನ ಮತದಾರರ ಪಟ್ಟಿಯ ವಿಶೇಷ...

ಬಾಗಲಕೋಟೆ |ರೈತರನ್ನು ಸಬಲರನ್ನಾಗಿಸಿದಾಗ ತೋಟಗಾರಿಕೆ ವಿವಿ ಸ್ಥಾಪನೆಯ ಉದ್ದೇಶ ಸಾರ್ಥಕ;ಆರ್. ಗಿರೀಶ್

ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ, ತೋಟಗಾರಿಕೆಯಲ್ಲಿ ಯುವಕರಿಗೆ ಉದ್ಯಮಶೀಲತೆಯ ಅವಕಾಶ ಕಲ್ಪಿಸಿದಾಗ ಮಾತ್ರ...