ಉಡುಪಿ | ಪ್ರತಿ ಮಳೆಗಾಲದಲ್ಲೂ ಕೃತಕ ನೆರೆ;‌ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಕೃಷಿಕರು

Date:

Advertisements

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಣೂರು-ಗಿಳಿಯಾರು-ಚಿತ್ರಪಾಡಿ-ಬನ್ನಾಡಿ ಕಾರ್ಕಡ ಗ್ರಾಮದಲ್ಲಿ ಪ್ರತಿ ಮಳೆಗಾಲದಲ್ಲೂ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು, ಕೃಷಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಪ್ರತಿ ಬಾರಿ ಸರ್ಕಾರಕ್ಕೆ ಮನವಿ ನೀಡಿದ ಹೊರತಾಗಿಯೂ ಸಮಸ್ಯೆಗೆ ಪರಿಹಾರ ದೊರಕುತ್ತಿಲ್ಲ. ಕೃತಕ ನೆರೆ ಬಂದು ನೂರಾರು ಎಕರೆ ಕೃಷಿಭೂಮಿ ನಾಶವಾಗುತ್ತಿದೆ.

ಈ ಭಾಗದಲ್ಲಿ ಅಸ್ತಿತ್ವದಲ್ಲಿರುವ ಸಣ್ಣ ವ್ಯಾಸದ ತೂಬು ಸೇತುವೆಗಳನ್ನು ತೆರವುಗೊಳಿಸಿ ನಾಲ್ಕು ಪಿಲ್ಲರ್ ಸೇತುವೆ ನಿರ್ಮಾಣ ಆಗಬೇಕಾಗಿದೆ. ತಕ್ಷಣದ ಪರಿಹಾರವೆಂಬಂತೆ ಹೊಳೆಯ ಹೂಳು ತೆರವುಗೊಳಿಸಬೇಕಾಗಿದೆ. ಈ ಹಿಂದೆ ಹಲವು ಬಾರಿ ಮನವಿ ನೀಡಿ ಪರಿಹಾರಕ್ಕಾಗಿ ಒತ್ತಾಯಿಸಿದರು ಕೂಡ ಯಾವುದೇ ಪರಿಹಾರ ದೊರತಿಲ್ಲವೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದು, ಊರಿನ ರೈತರು ಒಗ್ಗೂಡಿ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ.

ಕೃತಕ ನೆರೆ 1

ಸಾಮಾಜಿಕ ಹೋರಾಟಗಾರ, ಅಡ್ವಕೇಟ್ ಮಂಜುನಾಥ್ ಗಿಳಿಯಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನಾವು ನಡೆಸುತ್ತಿರುವ ಹೊರಾಟ ರೈತರ ಉಳಿವಿಗಾಗಿಯೇ ಹೊರತು, ಯಾವುದೇ ರಾಜಕೀಯಕ್ಕಾಗಿ ಅಲ್ಲ. ಪ್ರಸ್ತುತ ಕೃಷಿ ಮಾಡುವುದೇ ಕಷ್ಟಕರ, ಕೂಲಿಯಾಳು ಸಮಸ್ಯೆ ಇದೆ. ಗಿಳಿಯಾರು ಭಾಗದಲ್ಲಿ ಕೃಷಿ ಭೂಮಿಯಿದೆ. ಈಗ ಈ ಕೃತಕ ನೆರೆಯ ಕಾರಣಕ್ಕೆ ಭತ್ತ ಬೆಳೆ ನಾಟಿ ಮಾಡಿರುವುದು ಕೊಳೆತು ಹೋಗುತ್ತದೆ” ಎಂದ ಹೇಳಿದರು.

Advertisements
ನೆರೆ ಸಂತ್ರಸ್ತ ರೈತ

ರೈತ ಜಯರಾಮ್ ಶೆಟ್ಟಿ ಮಾತನಾಡಿ, “ಪ್ರತಿವರ್ಷ ಅಧಿಕಾರಿಗಳು ಬಂದು ನೋಡಿ ಹೋಗುತ್ತಾರೆ. ಮನವಿಗೆ ಯಾವುದೇ ಸ್ಪಂದನೆ ಇಲ್ಲ. ಇದು ಯಾರ ವಿರುದ್ಧದ ಪ್ರತಿಭಟನೆಯಲ್ಲ. ಇದು ನಮ್ಮ ನೋವಿನ ಪರಿಹಾರಕ್ಕಾಗಿ ಗ್ರಾಮಸ್ಥರು ನಡೆಸುವ ಹೋರಾಟವಾಗಿದೆ. ಪರಿಹಾರ ಸಮಸ್ಯೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರ ಪ್ರತಿಭಟನೆ ನಡೆಸುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ನೆರೆ ಸಂತ್ರಸ್ತ ರೈತ 1

“ತೆಕ್ಕಟ್ಟೆ ಗ್ರಾಮದ ಮಲ್ಯಾಡಿಯಿಂದ ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಂವರೆಗೆ, ಸೂಲಡ್ಡು-ಮಡಿವಾಳಸಾಲು ಹೊಳೆಯ ನದಿಪಾತ್ರ ಗುರುತಿಸಿ ಅದರ ಹೂಳು ತೆಗೆಯಬೇಕು. ಮಣೂರು ಗ್ರಾಮದ ಕೈಕೂರು, ಗಿಳಿಯಾರು ಗ್ರಾಮದ ಸೂಲಡ್ಡು, ಚಿತ್ರಪಾಡಿ ಗ್ರಾಮದ ಕೋಟ-ಸ್ವಾಬ್ರಕಟ್ಟೆ ರಸ್ತೆ ಮತ್ತು ಬೈಕೂರು ಬೈಲು ಎಂಬಲ್ಲಿ ಈಗಿರುವ ಅತಿ ಕಡಿಮೆ ವ್ಯಾಸದ ತೂಬು ಸೇತುವೆಗಳನ್ನು ತೆಗೆದು, ಪಿಲ್ಲ‌ರ್ ಸೇತುವೆಗಳನ್ನು ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಚೂರು | ರಾಮಕೃಷ್ಣ ಆಶ್ರಮದಲ್ಲಿ ಮತ್ತೊಬ್ಬ ಬಾಲಕನ ಮೇಲೆ ಹಲ್ಲೆ; ವೇಣುಗೋಪಾಲ ಎಂಬಾತನ ವಿಚಾರಣೆ

“ಕಾರ್ಕಡ ಗ್ರಾಮದ ಕುದ್ರುಮನೆ ಡ್ಯಾಂ ಮತ್ತು ಹೊಸಾಳ ಗ್ರಾಮದ ನಾಗರಮಠ ಚೆಕ್ ಡ್ಯಾಂಗಳಿಗೆ ಅಳವಡಿಸಿರುವ ಹಲಗೆಗಳನ್ನು ಸಂಪೂರ್ಣವಾಗಿ ಮಳೆಗಾಲದಲ್ಲಿ ತೆರವು ಮಾಡಬೇಕು. ಈ ಭಾಗದಲ್ಲಿ ಉಂಟಾಗುತ್ತಿರುವ ಕೃತಕ ನೆರೆ ಪರಿಹಾರಕ್ಕೆ ಪರಿಣಿತ ತಂತ್ರಜ್ಞರ ತಂಡದಿಂದ ಸರ್ವೆ ನಡೆಸಿ, ಕಾಲಮಿತಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಕೃತಕ ನೆರೆಯಿಂದ ಕೃಷಿನಷ್ಟ ಹೊಂದಿದ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕು” ಎಂದು ಆಗ್ರಹಿಸಿದರು.

WhatsApp Image 2023 08 22 at 3.23.15 PM
ಶಾರೂಕ್ ತೀರ್ಥಹಳ್ಳಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X