ಉಡುಪಿ ನಗರದ ಹೃದಯ ಭಾಗದಲ್ಲಿರುವ ಕವಿ ಮುದಣ್ಣ ಮಾರ್ಗ ಇಲ್ಲಿಯ ಬ್ಯಾಂಕ್ ಆಪ್ ಬರೋಡದ ಸನಿಹ ಇರುವ, ಪ್ರಯಾಣಿಕರ ತಂಗುದಾಣದಲ್ಲಿ ಕರಂಟ್ ಸ್ವಿಚ್ ಬೊರ್ಡ್ ಅಪಾಯದ ಸ್ಥಿತಿಯಲ್ಲಿದ್ದು, ತಕ್ಷಣವಾಗಿ ಮೆಸ್ಕಾಂ ಅಧಿಕಾರಿಗಳು, ಹಾಗೂ ಸಂಬಂಧಪಟ್ಟವರು, ದುರುಸ್ತಿ ಪಡಿಸುವಂತೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.
ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರು ವಿಶ್ರಮಿಸುವ, ಬೆಂಚಿನ ಸನಿಹವೆ ಸ್ವಿಚ್ ಬೊರ್ಡ್ ಇದ್ದು, ಇದರ ಬಾಗಿಲು ತೆರೆದುಕೊಂಡಿದೆ. ಇದು ತಂಗುದಾಣದ ಬೆಳಿಕಿನ ವ್ಯವಸ್ಥೆಯ ನಿಯಂತ್ರಣ ಪೆಟ್ಟಿಗೆಯಾಗಿದೆ. ಪ್ರಯಾಣಿಕರು ಕೂತಾಗ ವಿದ್ಯುತ್ ಸ್ಪರ್ಶಿಸುವ, ಮಕ್ಕಳು ಕೈಹಾಕುವ ಸಾಧ್ಯತೆಯು ಇದೆ. ಅಪಾಯ ಸಂಭವಿಸುವ ಸಾಧ್ಯತೆಗಳು ಇಲ್ಲಿದೆ.
