ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್(ರಿ) ಐಟಾ ಕರ್ನಾಟಕ ಇದರ 2025-28ನೆ ಸಾಲಿನ ನಾಲ್ಕು ವರ್ಷದ ಅವಧಿಗಾಗಿ ರಾಜ್ಯ ಸಲಹಾ ಸಮಿತಿ ಸದಸ್ಯರ ಚುನಾವಣೆಯು ಉಡುಪಿಯ ಸಾಲಿಹಾತ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಜರುಗಿತು.
ಯಾಸೀನ್ ಭಿಕ್ಬಾ ಹೊನ್ನಾವರ, ಮುಹಮ್ಮದ್ ರಝಾ ಮಾನ್ವಿ ಭಟ್ಕಳ, ಅಸ್ಲಂ ಹೈಕಾಡಿ ಉಡುಪಿ, ಇಫ್ತಿಖಾರ್ ಆಹ್ಮದ್ ಹುಮನಾಬಾದ್, ಡಾ.ಮುಬೀನ್ ಉಳ್ಳಾಲ, ಸಲೀಮ್ ಪಾಶ ರಾಯಚೂರು, ಮುಹಮ್ಮದ್ ಅಲ್ತಾಫ್ ಅಮ್ಜದ್ ಬಸವ ಕಲ್ಯಾಣ, ಮಹೆಬೂಬ್ ಉಲ್ ಹಖ್ ಬೆಂಗಳೂರು, ಮುಕ್ತಾರ್ ಆಹ್ಮದ್ ಕೊತ್ವಾಲ್, ಖಾಲಿದ್ ಪರ್ವಾಝ್ ಕಲಬುರಗಿ, ಮುಹಮ್ಮದ್ ಉಮರ್ ಶೇಖ್ ವಿಜಯಪುರ ರಾಜ್ಯ ಸಲಹಾ ಸಮಿತಿಗೆ ಆಯ್ಕೆಗೊಂಡಿದ್ದಾರೆ.
ಚುನಾವಣಾ ವೀಕ್ಷಕರಾಗಿ ಕೇಂದ್ರ ಕಾರ್ಯದರ್ಶಿ ಶಾಕಿರ್ ಹುಸೇನ್ ಹಾಗೂ ಆಂಧ್ರ ಪ್ರದೇಶ ಐಟಾ ರಾಜ್ಯಾಧ್ಯಕ್ಷ ಅಬ್ದುಲ್ ರಝಾಖ್ ಭಾಗವಹಿಸಿದ್ದರು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ಶಿಕ್ಷಣ ವಿಭಾಗದ ರಾಜ್ಯ ಕಾರ್ಯದರ್ಶಿ ಮೌಲಾನ ಅಬ್ದುಲ್ ಗಫ್ಫಾರ್ ಹಾಮಿದ್ ಉಮರಿ ದಿಕ್ಸೂಚಿ ಭಾಷಣ ಮಾಡಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ಕೋಟೆಗಂಗೂರು: ಒಂದು ಶಾಲೆ, ಮೂರು ಕಟ್ಟಡ; 2 ಕಿಲೋ ಮೀಟರ್ ಅಂತರ!
ಐಟಾ ಕರ್ನಾಟಕ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಯಾಸೀನ್ ಭಿಕ್ವಾ ಧನ್ಯವಾದ ಅರ್ಪಿಸಿದರು. ಐಟಾ ವಿಜಯಪುರ ಜಿಲ್ಲಾಧ್ಯಕ್ಷ ಉಮರ್ ಶೇಖ್ ಕಾರ್ಯಕ್ರಮ ನಿರೂಪಿಸಿದರು.
