ನಕ್ಸಲ್ ಚಳುವಳಿ ತಪ್ಪು ಅಂತ ನನ್ನ ಮನಸಿಗ್ಗೆ ತಿಳಿದ ತಕ್ಷಣದಿಂದಲೇ ನಾನು ಅದರಿಂದ ಹೊರಬಂದೆ ಆ ಸಮಯದಲ್ಲಿ ಆ ರೀತಿಯ ಚಳುವಳಿ ಸರಿ ಎಂದು ಕಂಡಿತ್ತು ಅದರಲ್ಲಿ ಕೆಲವೊಂದು ಸಮಸ್ಯೆಗಳು ಅನುಭವಿಸಿದ ನಂತರ ಅಂಬೇಡ್ಕರ್ ರವರ ಸಂವಿಧಾನ ಇರುವಾಗ ಆ ಮೂಲಕವೇ ನಾವು ಹೋರಾಟ ಮಾಡಬೇಕು ಎಂದು 2009 ರಲ್ಲಿ ನಕ್ಸಲ್ ಚಳವಳಿ ತೊರೆದು ಆಂಧ್ರಪ್ರದೇಶದ ಸರ್ಕಾರದ ಮುಂದೆ ಶರಣಾದೆ ನನ್ನ ಮೇಲೆ ಇದ್ದಂತಹ ಎಲ್ಲಾ ಕೇಸುಗಳನ್ನು ಸರ್ಕಾರ ತೆಗೆದುಹಾಕಿದರು ಎಂದು ಇಂದು ಮುಖ್ಯವಾಹಿನಿಗೆ ಬಂದ ಮಾಜಿ ನಕ್ಸಲ್ ತೊಂಬೆಟ್ಟು ಲಕ್ಷ್ಮೀಯವರ ಪತಿ ಸಂಜೀವ ಹೇಳಿದರು.
ಇಂದು ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಪತ್ನಿ ಲಕ್ಷ್ಮೀಯ ಶರಣಾಗತಿ ಪ್ರಕ್ರಿಯೆಯನ್ನು ಪೂರ್ತಿಕರಿಸಿ ಮಾಧ್ಯಮದ ಮುಂದೆ ಮಾತನಾಡಿರು. ನಾನು ಮೂಲತ ಕರ್ನಾಟಕದ ಪಾವಗಡದವನು ಕಳೆದ ಹಲವಾರು ವರ್ಷಗಳಿಂದ ಆಂಧ್ರದಲ್ಲಿ ನೆಲೆಸಿದ್ದೇನೆ ಈಗ ನನ್ನ ಸಂಸಾರ ಸಹ ಅಲ್ಲೆ ನೆಲೆಸಿದೆ ನನ್ನ ಪತ್ನಿ ಲಕ್ಷ್ಮೀ 2006 ರಿಂದ ನಕ್ಸಲ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಳು 2008 ರಲ್ಲಿ ಚಳುವಳಿಯಲ್ಲಿ ಇರುವಾಗಲೇ ನಮ್ಮ ಮದುವೆ ಆಯಿತು ನನ್ನ ವಿರುದ್ಧ ಆಂಧ್ರದಲ್ಲಿ ಕೇಸು ಇದ್ದದ್ದರಿಂದ 2009 ರಲ್ಲಿ ನಾನು ಆಂಧ್ರಪ್ರದೇಶದ ಸರ್ಕಾರದ ಮುಂದೆ ಶರಣಾಗತಿಯಾಗಿ ಮುಖ್ಯವಾಹಿನಿಗೆ ಬಂದೆ ಈಗ ನನ್ನ ಪತ್ನಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯವರು ನಕ್ಸಲ್ ಚಳುವಳಿಯಲ್ಲಿ ಇರುವವರನ್ನು ಮುಖ್ಯವಾಹಿನಿಗೆ ತರುವ ಯೋಜನೆ ಹಾಕಿಕೊಂಡ ಹಿನ್ನಲೆಯಲ್ಲಿ ನಾವು ಟಿವಿಯಲ್ಲಿ ನೋಡಿ ಆ ಮೂಲಕ ನನ್ನ ಪತ್ನಿಯ ಮೇಲೆ ಇರುವ ಮೂರು ಕೇಸುಗಳನ್ನು ತೆಗೆಯಬೇಕು ಅವಳು ಸಹ ಮುಖ್ಯವಾಹಿನಿಗೆ ಬಂದು ಸಂವಿಧಾನದ ಬದ್ದವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಡಿ ಎಂದು ಹೇಳಿದರು.
2016 ರಲ್ಲಿ ಕರ್ನಾಟಕ ಪೊಲೀಸರು ನನ್ನನ್ನು ಅರೆಸ್ಟ್ ಮಾಡಿದ್ದರು. ನಂತರದಲ್ಲಿ ನನ್ನ ಮೇಲೆ ಯಾವುದೇ ಕೇಸುಗಳಿಲ್ಲ ಎಂದು ಬಿಟ್ಟು ಕಳುಹಿಸಿದರು ಮುಂದಿನ ದಿನಗಳಲ್ಲಿ ನಾವು ಕರ್ನಾಟಕದಲ್ಲಿ ಬಂದು ನೆಲೆಸುವ ಕನಸನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.
