ಹಾಸನ | ಹೆಚ್‌ಆರ್‌ಎಸ್‌ನ ರಾಜ್ಯಮಟ್ಟದ ಸ್ವಯಂ ಸೇವಕರ ಸಮಾವೇಶ ಸಮಾರೋಪ

Date:

ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಸೇವಾ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಘ ಸಂಸ್ಥೆ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್‌ಆರ್‌ಎಸ್)ಯ ಸ್ವಯಂ ಸೇವಕರ ರಾಜ್ಯಮಟ್ಟದ ಸಮಾವೇಶವು ಹಾಸನದ ಆಲೂರಿನಲ್ಲಿರುವ ಮನ್ಸೂರಾ ಸಂಸ್ಥೆಯಲ್ಲಿ ಇಂದು (ಫೆ.2) ಸಮಾರೋಪಗೊಂಡಿತು.

- Advertisement -
WhatsApp Image 2025 02 02 at 1.43.03 PM

ಹೆಚ್‌ಆರ್‌ಎಸ್ ತುರ್ತು ಸಂದರ್ಭದಲ್ಲಿ ಅನಾಹುತಗಳು ಉಂಟಾದಾಗ ಕೂಡಲೆ ಧಾವಿಸಿ ರಕ್ಷಿಸುವ ಕಾರ್ಯದಲ್ಲಿ ನುರಿತ ತರಬೇತಿದಾರರನ್ನು ಹೊಂದಿರುವ ಸೇವಾ ಸಂಸ್ಥೆಯಾಗಿದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಅನೇಕ ಕಡೆಗಳಲ್ಲಿ ಕಾರ್ಯವನ್ನು ಮಾಡಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ಇಂದು ನಡೆದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೆಹೆದಿ ಕಲೀಮ್ ಮಾತನಾಡಿ, ಸಮಾಜ ಸೇವಾ ಸಂಸ್ಥೆಗಳು ಕೂಡ ಸರ್ಕಾರದ ಭಾಗ. ಸಮಾಜದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವಾಗ ಸ್ವಯಂ ಸೇವಕರ ಪಾತ್ರ ಕೂಡ ಮುಖ್ಯವಾದದ್ದು. ಅವರ ಕೈಂಕರ್ಯಗಳು ಸಮಾಜದ ಮುಖ್ಯವಾಹಿನಿಗೆ ತಲುಪಬೇಕಾದರೆ ಪ್ರಚಾರ ಕೂಡ ಮುಖ್ಯ. ಆ ಪ್ರಚಾರದ ಭಾಗವೇ ಇನ್ನಷ್ಟು ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ಅಭಿಪ್ರಾಯಿಸಿದರು.

WhatsApp Image 2025 02 02 at 1.43.03 PM 1

ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡುತ್ತಾ, ‘ರಿಲೀಫ್ ಕೆಲಸ ಕಾರ್ಯಗಳ ಸಂದರ್ಭಗಳಲ್ಲಿ ಸ್ವಯಂ ಸೇವಕರು ಇತರರ ಪ್ರಾಣ ಉಳಿಸುವುದರ ಜೊತೆಗೆ ತಾವು ಕೂಡ ಅಪಾಯಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

WhatsApp Image 2025 02 02 at 1.43.04 PM

ಸಂಘಟನೆಯ ಆಂತರಿಕ ಭದ್ರತೆ, ಶಿಸ್ತು, ಸಹನೆ, ದೃಢತೆಯೊಂದಿಗೆ ಕಾರ್ಯಾಚರಿಸಬೇಕು ಎಂದು ಇತರ ಭಾಷಣಗಾರರು ಮಾರ್ಗದರ್ಶನ ನೀಡಿದರು.

ಸಮಾವೇಶದಲ್ಲಿ ‘ತುರ್ತು ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳ’ ಬಗ್ಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ಈ ಸಂವಾದದಲ್ಲಿ ಸಾಮಾಜಿಕ ಕಾರ್ಯಕರ್ತರಾದ ತನ್ವೀರ್ ಮರ್ಸಿ‌ ಮಿಷನ್, ಕೇರಳದ ಪೀಪಲ್ಸ್ ಫೌಂಡೇಶನ್‌ನ ನಿರ್ದೇಶಕರಾದ ಶಮೀಲ್ ಸಜ್ಜಾದ್, ಬೆಂಗಳೂರಿನ ಪ್ರಾಜೆಕ್ಟ್ ಸ್ಮೈಲ್‌ನ ಟ್ರಸ್ಟಿಯಾದ ಮೊಹಮ್ಮದ್ ಉಮರ್ ಭಾಗವಹಿಸಿದ್ದರು. ಸಂವಾದವನ್ನು ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಮುಖಂಡ ಡಾ.ನಸೀಮ್ ಅಹ್ಮದ್ ನಿರ್ವಹಿಸಿದರು.

ಸಮಾವೇಶದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬೃಂದಾ ಅಡಿಗೆ ಹಾಗೂ ಅಯ್ಯೂಬ್ ಅಹ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ.ಮುಹಮ್ಮದ್ ಸಾದ್‌ ಬೆಳ್ಗಾಮಿ, ಹೆಚ್.ಅರ್.ಎಸ್ ನಿರ್ದೇಶಕರಾದ ಕೆ.ಎಂ.ಅಶ್ರಫ್‌, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮರಕಡ, ಮುಖಂಡರಾದ ಅಥರುಲ್ಲಾ ಶರೀಫ್, ನಿವೃತ್ತ ಐಪಿಎಸ್ ಅಧಿಕಾರಿ ಮಕ್ಬೂಲ್ ಅಹ್ಮದ್ ಅನಾರ್ ವಾಲ, ಮೊಹಮ್ಮದ್ ಅಜ್ಮಲ್ ಶಕೀಬ್ ಉಪಸ್ಥಿತರಿದ್ದರು.

WhatsApp Image 2025 02 02 at 1.43.05 PM

ಈ ಸುದ್ದಿ ಓದಿದ್ದೀರಾ?: ಹಾಸನ | ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ; ಪಿ ಕೆ ಸುರೇಶ್‌ ಅವಿರೋಧ ಆಯ್ಕೆ

ಮುಹಮ್ಮದ್ ಖಾಸಿಮ್ ಮಂಗಳೂರು ಹಾಗೂ ಸಲೀಂ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು. ಹೆಚ್ ಆರ್ ಎಸ್ ಕ್ಯಾಪ್ಟನ್ ಅಮೀರ್ ಸಿದ್ದೀಕಿಯವರ ನೇತೃತ್ವದಲ್ಲಿ ನುರಿತ ತರಬೇತುದಾರರ ಉಪಸ್ಥಿತಿಯಲ್ಲಿ ಮೋಕ್ ಎಕ್ಸೆಸೈಸ್ ಡೆಮೋ ಮಾಡಿ ತೋರಿಸಲಾಯಿತು.

WhatsApp Image 2025 02 02 at 1.43.05 PM 1
WhatsApp Image 2025 02 02 at 1.44.18 PM
WhatsApp Image 2025 02 02 at 1.44.15 PM
WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಅಧಿಕಾರಿಗಳ ನಿರ್ಲಕ್ಷ್ಯದಿಂದ ದೌರ್ಜನ್ಯಗಳಿಗೆ ಕಡಿವಾಣ ಬೀಳುತ್ತಿಲ್ಲ : ಸಂಜೀವ ಬಳ್ಕೂರು

ರಾಯಚೂರು ಜಿಲ್ಲೆಯಲ್ಲಿ ದಲಿತ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರ ಹಾಗೂ...

ಗದಗ | ಅಲ್ಪಸಂಖ್ಯಾತರ ಅಭಿವೃಧ್ದಿ ನಿಗಮದಲ್ಲಿ ಮಧ್ಯವರ್ತಿಗಳ ಹಾವಳಿ: ಕಡಿವಾಣಕ್ಕೆ ಆಗ್ರಹ

ಗದಗ ಜಿಲ್ಲೆಯ ಬಡ ಅಲ್ಪಸಂಖ್ಯಾತರ ಕುಟುಂಬಗಳಿಗೆ ಸರ್ಕಾರದ ಯೋಜನೆಗಳು ಪ್ರಮಾಣಿಕವಾಗಿ ದೊರಕಿಸಿ...

ಕೋಲಾರ | ವಿದ್ಯಾರ್ಥಿನಿಯ ನಾಲ್ಕು ವರ್ಷದ ವಿದ್ಯಾಭ್ಯಾಸಕ್ಕೆ ಎಲ್.ಜಿ. ಫೌಂಡೇಶನ್ ನೆರವು

ವಕ್ಕಲೇರಿ ಗ್ರಾಮದ ಕೂಲಿ ಕಾರ್ಮಿಕ ನಾಗರಾಜ್ ಅವರ ಪುತ್ರಿಯ ನಾಲ್ಕು ವರ್ಷದ...