ಉಡುಪಿ ನಗರದ ಮಲ್ಪೆಯಲ್ಲಿರುವ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕಿನಿಂದ ಅನ್ಯಾಯ ಆಗಿರುವ ಸಂತ್ರಸ್ತರು, ಸೋಮವಾರ ಮಣಿಪಾಲದ ಕಾಯಿನ್ ಸರ್ಕಲ್‌ನಿಂದ ಜಿಲ್ಲಾಧಿಕಾರಿಯವರ ಕಚೇರಿಯ ತನಕ ಪಾದಯಾತ್ರೆ ಮಾಡಿದ ಸಂತ್ರಸ್ಥರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ ಸಂತ್ರಸ್ತರು, ಭ್ರಷ್ಟಾಚಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ತೆ ಬಿಂದು, “ಮೂರು ನಾಲ್ಕು ಜನ ಜೀಪಿನಲ್ಲಿ ಬಂದು ಹಣ ಕಟ್ಟಬೇಕು, ಕಾಲಿ ಪೇಪರ್‌ನಲ್ಲಿ ಸಹಿ ಹಾಕಿ ಎಂದು ತುಂಬಾನೆ ಟಾರ್ಚಾರ್ ನೀಡ್ತಾ ಇದ್ದಾರೆ. ನಾನು ಸೊಸೈಟಿಯಿಂದ ತೆಗೆದುಕೊಂಡದ್ದು ಕೇವಲ ಇಪ್ಪತ್ತು ಸಾವಿರ ಮಾತ್ರ. ಆದರೆ ಈಗ ಅವರು ಎರಡು ಲಕ್ಷ ಕಟ್ಟುಂವಂತೆ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ. ಇವರ ಬೆದರಿಕೆಗೆ ಅಂಜಿ ಈಗಾಗಲೇ ಎಪ್ಪತ್ತು ಸಾವಿರ ಹಣವನ್ನು ಸಹ ಕಟ್ಟಿದ್ದೇನೆ. ಈ ರೀತಿ ನನಗೆ ಮಾತ್ರವಲ್ಲ ಇತರರಿಗೂ ಹಣ ಕಟ್ಟುವಂತೆ ಬೆದರಿಸುತ್ತಿದ್ದಾರೆ ನಮಗೆ ನ್ಯಾಯವನ್ನು ದೊರಕಿಸಿ ಕೊಡಿ” ಎಂದು ತಮ್ಮ ನೋವು ತೋಡಿಕೊಂಡರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಕೋಟ ಮಾತನಾಡಿ, “ಸಾಲದ ಹೆಸರಿನಲ್ಲಿ 1413 ಮಂದಿಗೆ 28 ಕೋಟಿ ರೂ. ಹಣವನ್ನು ಮೋಸ ಮಾಡಲಾಗಿದೆ. ಈ ಮೋಸದ ಜಾಲದಲ್ಲಿರುವ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರಗಿಸಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಉಡುಪಿ | ಮುಗಿಯದ ಇಂದ್ರಾಳಿ ರೈಲ್ವೆ ಸೇತುವೆ ರಸ್ತೆ ಸಮಸ್ಯೆ; ಪ್ರತಿಭಟನೆಗೆ ಮುಂದಾದ ನಾಗರಿಕರು
“ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ವ್ಯವಸ್ಥಾಪಕರ ಆತ್ಮಹತ್ಯೆಗೆ ಕಾರಣರಾದವರನ್ನು ಉನ್ನತಮಟ್ಟದ ತನಿಖೆ ನಡೆಸಿ ಮೋಸ ಹೋದವರಿಗೆ ಹಾಗೂ ಮೃತ ವ್ಯವಸ್ಥಾಪಕರಿಗೆ ನ್ಯಾಯ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಉಡುಪಿ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ ಸೇರಿದಂತೆ ಎಲ್ಲಾ ಸಂತ್ರಸ್ತರು ಉಪಸ್ಥಿತರಿದ್ದರು.

